ಬೆಳ್ಳಾರೆ ಒಡಿಯೂರು ಘಟಸಮಿತಿ ಸಭೆ -ತುಳು ಸಮ್ಮೇಳನ ನಡೆಸುವ ವಿಚಾರ ವಿಮರ್ಶೆ…

ಸುಳ್ಯ: ಬೆಳ್ಳಾರೆ ಕೆ ಪಿಎಸ್ ನಲ್ಲಿ ಒಡಿಯೂರು ಘಟ ಸಮಿತಿ ಯ ಸಭೆ ಮಾ 17 ರಂದು ನಡೆದು ಘಟ ಸಮಿತಿಯ ಅಭಿವೃದ್ಧಿ ವಿಚಾರಗಳ ಬಗ್ಗೆ ಮಾಹಿತಿ ನೀಡಲಾಯಿತು.
ಯೋಜನ ನಿರ್ದೇಶಕರಾದ ಕಿರಣ್ ಉರ್ವ ಉಪಸ್ಥಿತರಿದ್ದು, ಬೆಳ್ಳಾರೆಯ ಘಟ ಸಮಿತಿಯ ಆಶ್ರಯದಲ್ಲಿ ಸುಳ್ಯ ತಾಲೂಕು ತುಳು ಸಮ್ಮೇಳನ ನಡೆಸುವ ಪ್ರಸ್ತಾಪ ಸಭೆಯ ಮುಂದಿಟ್ಟರು. ಸಮಿತಿಯ ಸದಸ್ಯರು ಮುಂದಿನ ಸಭೆಯಲ್ಲಿ ತುಳು ಸಮ್ಮೇಳನ ಅವರವರ ಸಂಘಗಳಲ್ಲಿ ಚರ್ಚಿಸಿ ತೀರ್ಮಾನಿಸಲು ನಿರ್ಧರಿಸಲಾಯಿತು.
ಸುಳ್ಯ ತಾಲ್ಲೂಕಿನ ಗ್ರಾಮೋತ್ಸವ ಸಮಿತಿಯ ಸಂಚಾಲಕ ಜೆ ಕೆ ರೈ ಸಮ್ಮೇಳನ ತಯಾರಿಯ ಮಾಹಿತಿ ನೀಡಿದರು. ಘಟ ಸಮಿತಿ ಅಧ್ಯಕ್ಷ ಸುಹಾಸ್ ಅಲೆಕ್ಕಾಡಿ ಅಧ್ಯಕ್ಷತೆ ವಹಿಸಿದ್ದರು. ಸುಳ್ಯ ಒಡಿಯೂರು ಬ್ಯಾಂಕ್ ನ ಮೆನೇಜರ್ ಸಂತೋಷ್ ಶೆಟ್ಟಿ, ಮೇಲ್ವಿಚಾರಕಿ ಗೀತಾ ಮತ್ತಿತರರು ಉಪಸ್ಥಿತರಿದ್ದರು.
ಯೋಜನೆಯ ಶ್ರೀಮತಿ ಶೀಭಾ ಸ್ವಾಗತಿಸಿದರು. ಮೇಲ್ವಿಚಾರಕಿ ಗೀತಾ ನೆಟ್ಟಾರು ವಂದಿಸಿದರು.

Related Articles

Back to top button