ಸುಳ್ಯ ನಗರ ಪಂಚಾಯತ್ ನಾಮನಿರ್ದೇಶಿತ ಸದಸ್ಯ ಸಿದ್ದಿಕ್ ಕೊಕ್ಕೊ…

ಸುಳ್ಯ: ಸುಳ್ಯ ನಗರ ಪಂಚಾಯತ್ ನಾಮನಿರ್ದೇಶಿತ ಸದಸ್ಯರಾಗಿ ಸಿದ್ದಿಕ್ ಕೊಕ್ಕೊ ಆಯ್ಕೆಯಾಗಿದ್ದಾರೆ .
ಇವರು ವಿಧ್ಯಾರ್ಥಿ ಜೀವನದಲ್ಲಿ ವಿಧ್ಯಾರ್ಥಿ ನಾಯಕನಾಗಿ ಮುಂದೆ ವಿಧ್ಯಾರ್ಥಿ ಸಂಘಟನೆಯಾದ ಎನ್ ಎಸ್ ಯು ಐ ನಲ್ಲಿ ನಗರ ಅಧ್ಯಕ್ಷರಾಗಿ ಬಳಿಕ ತಾಲೂಕು ಅಧ್ಯಕ್ಷರಾಗಿ ನಂತರ ರಾಜಕೀಯ ಪಕ್ಷದ ಸಂಪರ್ಕ ಬೆಳೆಸಿ ಯುವ ಕಾಂಗ್ರೆಸ್ ನಗರ ಅಧ್ಯಕ್ಷರಾಗಿ ಬಳಿಕ ಯುವ ಕಾಂಗ್ರೆಸ್ ವಿಧಾನ ಸಭಾ ಕ್ಷೇತ್ರದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿ ಪ್ರಸ್ತುತ ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಧಾರ್ಮಿಕ ಕ್ಷೇತ್ರದಲ್ಲೂ ತನ್ನನ್ನು ತಾನೂ ತೊಡಗಿಸಿಕೊಂಡ ಇವರು ಅನ್ಸಾರಿಯ ಯತೀಂಖಾನ್ ಸುಳ್ಯ ಮತ್ತು ಅನ್ಸಾರ್ ಮುಸ್ಲಿಂ ಅಸೋಶಿಯೇಶನ್ ಇದರ ನಿರ್ದೇಶಕರಾಗಿದ್ದಾರೆ. ರೋಟರಿ ಮತ್ತು ಜೆಸಿಐ ಸಿಟಿ ಸಂಸ್ಥೆಗಳಲ್ಲೂ ಇವರು ಸದಸ್ಯರಾಗಿ ತಮ್ಮನ್ನು ತೊಡಗಿಸಿಕೊಂಡಿದ್ದು, ಸಾಮಾಜಿಕವಾಗಿ ಮಲೆನಾಡು ಚಾರಿಟೇಬಲ್ ಟ್ರಸ್ಟ್ ನ ಉಪಾಧ್ಯಕ್ಷರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇದೀಗ ನೂತನವಾಗಿ ಸುಳ್ಯ ನಗರ ಪಂಚಾಯತ್ ನಾಮನಿರ್ಧೆಶಿತ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. ಇವರು ನಾವೂರು ಹಾಜಿ ಹಸೈನಾರ್ ಉಗ್ರಾಣಿ ಇವರ ಸುಪುತ್ರರಾಗಿದ್ದಾರೆ