ಸಂಪಾಜೆ ಗ್ರಾಮದ ತೋಟಗಳಿಗೆ ಆನೆ ದಾಳಿಯಿಂದ ಕೃಷಿ ನಾಶ, ಸೂಕ್ತ ಕ್ರಮಕ್ಕಾಗಿ ಟಿ ಎಂ ಶಹೀದ್ ತೆಕ್ಕಿಲ್ ಆಗ್ರಹ…
ಸುಳ್ಯ: ಕಳೆದ ಹಲವು ದಿನಗಳಿಂದ ಸಂಪಾಜೆ ಗ್ರಾಮದ ಕಡೆಪಾಲ, ಪೆರಂಗೊಡಿ, ಬೈಲೆ, ಗೂನಡ್ಕ, ದರ್ಖಾಸ್, ಪೇರಡ್ಕ ಪ್ರದೇಶದಲ್ಲಿ ಒಂಟಿ ಸಲಗವು ತೋಟಗಳಿಗೆ ನುಗ್ಗಿ ರೈತರ ಕೃಷಿಗಳನ್ನು ನಾಶ ಪಡಿಸಿರುದರಿಂದ ಕೃಷಿಕರು ಆತಂಕದಲ್ಲಿದ್ದಾರೆ, ಇದರಿಂದ ಈ ಪ್ರದೇಶದ ಜನರು, ವಿದ್ಯಾರ್ಥಿಗಳು ಭಯಬೀತರಾಗಿ ಮನೆಯಿಂದ ಹೊರ ಬರಲು ಹಿಂಜರಿಯುತ್ತಿದ್ದಾರೆ. ಆದುದರಿಂದ ಸಂಬಂಧಪಟ್ಟ ಅರಣ್ಯಾಧಿಕಾರಿಗಳು ಕೂಡಲೆ ಅರವಳಿಕೆ ಚುಚ್ಚುಮದ್ದು ಹಾಯಿಸಿ ಆನೆಯನ್ನು ಹಿಡಿದು ವನ್ಯ ಪ್ರದೇಶಕ್ಕೆ ವರ್ಗಾಯಿಸಬೇಕಾಗಿ ಕಾಂಗ್ರೆಸ್ ಮುಖಂಡ ಟಿ ಎಂ ಶಹೀದ್ ತೆಕ್ಕಿಲ್ ಆಗ್ರಹಿಸಿದ್ದಾರೆ.
ಈ ಬಗ್ಗೆ ಸರಕಾರಕ್ಕೆ ಹಾಗೂ ಅರಣ್ಯ ಇಲಾಖೆಗೆ ಮನವಿ ಸಲ್ಲಿಸಿದ್ದರೂ ಪ್ರಯೋಜನವಾಗಲಿಲ್ಲ. ಆದುದರಿಂದ ತಕ್ಷಣ ಕ್ರಮ ಕೈಗೊಳ್ಳಬೇಕಾಗಿ ಕರ್ನಾಟಕ ರಾಜ್ಯ ಅರಣ್ಯ ಸಚಿವರಾದ ಆನಂದ್ ಸಿಂಗ್ ರವರಿಗೆ ಮತ್ತು ಅರಣ್ಯ ಇಲಾಖೆಯ ಮೇಲಧಿಕಾರಿಗಳಿಗೆ ಹಾನಗಲ್ ವಿಧಾನ ಸಭಾ ಉಪಚುನಾವಣೆಯ ಕೆಪಿಸಿಸಿಯ ವೀಕ್ಷಕರಾದ ಟಿ ಎಂ ಶಹೀದ್ ತೆಕ್ಕಿಲ್ ರವರು ಹಾನಗಲ್ ನಿಂದ ದೂರವಾಣಿ ಕರೆಯ ಮೂಲಕ ಮನವಿ ಮಾಡಿದ್ದಾರೆ.