KPS ಗಾಂಧಿನಗರ, ಸುಳ್ಯ ಶಾಲೆಯಲ್ಲಿ ಅನೀಮಿಯ ಮುಕ್ತ ಪೌಷ್ಠಿಕ ಕರ್ನಾಟಕ ಕಾರ್ಯಕ್ರಮ…

ಸುಳ್ಯ: ಕರ್ನಾಟಕ ಸರ್ಕಾರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಶಾಲಾ ಶಿಕ್ಷಣ ಇಲಾಖೆ ಹಾಗೂ ಪದವಿ ಪೂರ್ವ ಶಿಕ್ಷಣ ಇಲಾಖೆ ಇದರ ಸಹಯೋಗದಲ್ಲಿ ಅನೀಮಿಯ ಮುಕ್ತ ಪೌಷ್ಠಿಕ ಕರ್ನಾಟಕ ಕಾರ್ಯಕ್ರಮದ ಅಂಗವಾಗಿ ಮಕ್ಕಳ ರಕ್ತ ಹೀನತೆ ತಪಾಸಣೆ ಮತ್ತು ಚಿಕಿತ್ಸೆ ನ. 22 ರಂದು ಸರ್ಕಾರಿ ಪದವಿ ಪೂರ್ವ ಕಾಲೇಜು ಗಾಂಧಿನಗರದಲ್ಲಿ ನಡೆಯಿತು .
ಕಾರ್ಯಕ್ರಮದ ಉದ್ಘಾಟನೆಯನ್ನು ನ. ಪಂ. ಸದಸ್ಯ ಶ್ರೀ ಶರೀಫ್ ಕಂಠಿ ನೆರವೇರಿಸಿದರು. ಈ ಕಾರ್ಯಕ್ರಮದಲ್ಲಿ ಸ್ವಾಗತವನ್ನು ಪ್ರಭಾರ ಪ್ರಾಂಶುಪಾಲರಾದ ರಾಜೇಶ್ ನಡೆಸಿಕೊಟ್ಟರು. RBSK ಸುಳ್ಯ ತಾಲೂಕು ಆರೋಗ್ಯ ಕಛೇರಿಯ ವೈದ್ಯಾಧಿಕಾರಿ ಡಾ. ಭವ್ಯಾ ಮನೋಹರ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ಹಿರಿಯ ಆರೋಗ್ಯ ಸುರಕ್ಷಾಧಿಕಾರಿ ಶ್ರೀಮತಿ ಬೇಬಿಯವರು ವಂದಿಸಿದರು. ಈ ಕಾರ್ಯಕ್ರಮದಲ್ಲಿ ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ಶ್ರೀಮತಿ ಕನಕಾಂಗಿ , ಸಮುದಾಯ ಆರೋಗ್ಯಾಧಿಕಾರಿ ರಶ್ಮಿ , ಸುನೀತಾ, ಉಪನ್ಯಾಸಕರು, ಪೋಷಕರಾದ ಇಕ್ಬಾಲ್ ಸುಣ್ಣಮೂಲೆ, ಶಾಲಾ ಮಕ್ಕಳು ಉಪಸ್ಥಿತರಿದ್ದರು.

whatsapp image 2023 11 22 at 6.42.51 pm

whatsapp image 2023 11 22 at 6.42.51 pm (1)

Sponsors

Related Articles

Back to top button