ಜುಲೈ 23 – ತೆಕ್ಕಿಲ್ ಮೊಹಮ್ಮದ್ ಹಾಜಿಯವರ 50ನೇ ಪುಣ್ಯ ಸ್ಮರಣೆ…
ಸುಳ್ಯ: ಕಳೆದ ನೂರು ವರ್ಷಗಳಿಂದ ಸುಳ್ಯ ತಾಲೂಕಿನ ಸಂಪಾಜೆ ಗ್ರಾಮದ ಪೇರಡ್ಕ ಗೂನಡ್ಕ, ಅರಂತೋಡು ಸಹಿತ ಕರ್ನಾಟಕ ಕೇರಳ ಮತ್ತು ಇತರ ವಿವಿಧ ಭಾಗಗಳಲ್ಲಿ ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ ಮತ್ತು ಕ್ರೀಡಾ ಕ್ಷೇತ್ರದಲ್ಲಿ ಕ್ರೀಯಶೀಲರಾಗಿ, ಅವಿಭಕ್ತ ಕೇರಳ ಮತ್ತು ರ್ನಾಟಕ ರಾಜ್ಯದಲ್ಲಿ ಉಧ್ಯಮಿಯಾಗಿ ಸಮಾಜ ಸೇವಕರಾಗಿ ಅನೇಕ ಮಸೀದಿ ಮತ್ತು ಮದರಸಗಳ ಶಾಲೆಗಳ ವಿವಿಧ ಸಂಘ ಸಂಸ್ಥೆಗಳ ಸ್ಥಾಪಕರಾಗಿ, ಸರಕು ಸಾರಿಗೆ, ಮರದ ವ್ಯಾಪಾರಿಯಾಗಿ, ಗುತ್ತಿಗೆದಾರರಾಗಿ, ಮಾದರಿ ತೋಟಗಾರಿಕೆ ಕೃಷಿಕರಾಗಿ, ಜಮೀನುದಾರರಾಗಿ ಹಲವರನ್ನು ತಂದು ಊರಿನ ಅಭಿವೃದ್ಧಿಯ ಹರಿಕಾರ ವಿವಿಧ ಕ್ಷೇತ್ರದ ಪರಿಣಿತರನ್ನ ಈ ಭಾಗಕ್ಕೆ ಕರೆತಂದ ತೆಕ್ಕಿಲ್ ಕುಟುಂಬದ ಹಿರಿಯರು ಆದರ್ಶ ವ್ಯಕ್ತಿತ್ವದ ಜಾತ್ಯತೀತ ಪರಮತ ಸಹಿಷ್ಣು ಆದರ್ಶ ವ್ಯಕ್ತಿ ಅವಿಭಕ್ತ ದಕ್ಷಿಣ ಕನ್ನಡ ಜಿಲ್ಲೆಯ ಕಾಸರಗೋಡಿನ ತೆಕ್ಕಿಲ್ ಗ್ರಾಮದ ಕೃಷಿಕ ತೆಕ್ಕಿಲ್ ಬಾಬ ಬ್ಯಾರಿ ಯವರ ಪುತ್ರನಾಗಿ 1888 ರಲಲ್ಲಿ ಜನಿಸಿದ ಮರ್ ಹೂಮ್ ತೆಕ್ಕಿಲ್ ಮೊಹಮ್ಮದ್ ಹಾಜಿಯವರು. ತನ್ನ ಮೊದಲ ಪತ್ನಿ ದಿವಂಗತ ಆಯಿಷಾ ಹಜ್ಜುಮ್ಮ ತೆಕ್ಕಿಲ್ ತೈರೆ ಶೈಖ್ ಕುಟುಂಬಸ್ಥರ ಜೊತೆ ಅರಂತೋಡಿಗೆ ಮರ ವ್ಯಾಪಾರಕ್ಕಾಗಿ ಬಂದು ಅಂದಿನ ಪಟೇಲರಗಿದ್ದ ಹಾಜಿ ಪಠೇಲ್ ಅಹಮ್ಮದ್ ಕುಂಇ’ಯವರನ್ನು ಬ್ರಿಟೀಷರು ಕೇರಳದ ಕುಂಬಳೆಯಿಂದ ಅರಂತೋಡು ಗ್ರಾಮಕ್ಕೆ ಪಟೇಲರಾಗಿ ನಿಯುಕ್ತಿಗೊಳಿಸಿದ್ದರು. ಇವರ ಪುತ್ರಿ ಪಠೇಲ್ ಕುಂಇ’ಮಿನ ಹಜ್ಜುಮ್ಮರವರನ್ನು ಮರ್ ಹೂಮ್ ತೆಕ್ಕಿಲ್ ಮಹಮ್ಮದ್ ಹಾಜಿ ಎರಡನೇ ಪತ್ನಿಯಾಗಿ ವಿವಾಹ ಆದರು (ಪಠೇಲರ ಮಗಳ ಗಂಡ) ಇಬ್ಬರು ಪತ್ನಿಯರಲ್ಲಿ ತಲಾ ಮೂರು ಗಂಡು ಮೂರು ಹೆಣ್ಣು ಮಕ್ಕಳ ಸಹಿತ 12 ಮಕ್ಕಳುಗಳಾದ ದಿವಂಗತ ತೆಕ್ಕಿಲ್ ಅಬ್ದುಲ್ಲ ಪೇರಡ್ಕ ಗೂನಡ್ಕ, ದಿವಂಗತ ತೆಕ್ಕಿಲ್ ಇಬ್ರಾಹಿಂ ಹಾಜಿ ಪೇರಡ್ಕ ಗೂನಡ್ಕ, ತೆಕ್ಕಿಲ್ ಮೂಸನ್ ಹಾಜಿ ಪೇರಡ್ಕ ಗೂನಡ್ಕ, ತೆಕ್ಕಿಲ್ ಅಹಮದ್ ಕುಂಞಿ ಪೇರಡ್ಕ ಗೂನಡ್ಕ, ದಿವಂಗತ ತೆಕ್ಕಿಲ್ ಮೊಯಿದೀನ್ ಕುಂಞಿ ಹಾಜಿ ಚೆರ್ಕಳ, ತೆಕ್ಕಿಲ್ ಬಾಬ ಹಾಜಿ ಅರಂತೋಡು, ಪುತ್ರಿಯರು ದಿವಂಗತ ತೆಕ್ಕಿಲ್ ಕುಂಞಿಆಮಿನ ಪೇರಡ್ಕ ಗೂನಡ್ಕ, ದಿವಂಗತ ತೆಕ್ಕಿಲ್ ಮರಿಯಮ್ಮ ಚೊಕ್ಕಾಡಿ, ದಿವಂಗತ ನಫೀಸ ಹಜ್ಜುಮ್ಮ ಅಡಿಮರಡ್ಕ ಅರಂತೋಡು, ತೆಕ್ಕಿಲ್ ಬೀಫಾತಿಮ ಹಜ್ಜುಮ್ಮ ಅರಂತೋಡು, ತೆಕ್ಕಿಲ್ ಆಯಿಷ ಹಜ್ಜುಮ್ಮ ಚೆಂಗಳ ಕಾಸರಗೋಡು, ತೆಕ್ಕಿಲ್ ಜೈಯ್ಬುನ್ನಿಸ ಬೆಂಗಳೂರು,ಸಹೋದರರಾದ ದಿವಂಗತ,ಗೂನಡ್ಕ ತೆಕ್ಕಿಲ್ ಮೊಯಿದೀನ್ ಕುಂಞಿ,ದಿವಂಗತ ಅಬ್ದುಲ್ಲ ತೆಕ್ಕಿಲ್ ಗೂನಡ್ಕ, ಸಹೋದರಿ ದಿವಂಗತ ತೆಕ್ಕಿಲ್ ಶೈಖ್ ಮೂಸನ್ ಪತ್ನಿ ತೆಕ್ಕಿಲ್ ಬೀಫಾತಿಮ ಸಹಿತ ಸಾವಿರಾರು ಕುಟುಂಬಸ್ಥರಿದ್ದು ತೆಕ್ಕಿಲ್ ಹಾಜಿ ಅರಂತೋಡು ಮಸೀದಿಯ ಸ್ಥಾಪಕಾಧ್ಯಕ್ಷರಾಗಿ ಅಧಿಕಾರ ನಿರ್ವಹಿಸಿದರು. ಪೇರಡ್ಕ ಮುಹಿದ್ದೀನ್ ಜುಮಾ ಮಸೀದಿಗೆ ಸ್ಥಳವನ್ನು ನೀಡಿರುವುದಲ್ಲದೆ ಮಸೀದಿಯನ್ನು ಪುನರ್ ನಿರ್ಮಾಣ ಮಾಡಿ ಅದರ ಅಧ್ಯಕ್ಷರಾಗಿ ಕರ್ತವ್ಯ ನಿರ್ವಹಿಸಿದರು. ಮತ್ತು ಸ್ವಂತ ಸ್ಥಳದಲ್ಲಿ ವಲಯಯುಲ್ಲಾಹಿ ದರ್ಗಾ ಶರೀಫಿನ ಅಭಿವೃದ್ಧಿಯಲ್ಲಿ ತೊಡಗಿಸಿಕೊಂಡರು ಹೀಗೆ ಸುಳ್ಯ ಸಹಿತ ಕೊಡಗು ದಕ್ಷಿಣಕನ್ನಡ ಮತ್ತು ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಗಳ ಅನೇಕ ಮಸೀದಿ ಮತ್ತು ಮದರಸಗಳ ಸ್ಥಾಪನೆಗೆ ಕಾರಣ ಕರ್ತನಾಗಿರುತ್ತಾರೆ. ಕೊಡುಗೈದಾನಿಯಾಗಿ ಸೌಹಾರ್ದತೆಯ ಪ್ರತೀಕವಾಗಿ ಎಲ್ಲಾ ಧರ್ಮದ ಸಮುದಾಯದ ಸಂಘ ಸಂಸ್ಥೆಗಳಿಗೆ ಸರಕಾರಿ ಕಚೇರಿ ಯುವಕ ಮಂಡಳಗಳಿಗೆ ನೆರವನ್ನು ನೀಡುತ್ತಿದ್ದರು. ಸಾಮಾಜಿಕ ಸೇವೆ ಮತ್ತು ಜಾತ್ಯಾತೀತ ಮನೋಭಾವದಿಂದ ಎಲ್ಲರ ಮನಗೆದ್ದ ಸಮಾಜ ಸುದಾರಕ ತೆಕ್ಕಿಲ್ ಮೊಹಮ್ಮದ್ ಹಾಜಿಯವರು
ಅವರ 50ನೇ ಪುಣ್ಯ ಸ್ಮರಣೆಯನ್ನು ಜುಲೈ 23 ರಂದು ಅರಂತೋಡು ತೆಕ್ಕಿಲ್ ಸಮುದಾಯ ಭವನದಲ್ಲಿ 50 ವಿವಿಧ ಕಾರ್ಯಕ್ರಮದ ಒಂದು ವರ್ಷಗಳ ಕಾಲ ಮಾದರಿಯಾಗಿ ಆಚರಿಸಲು ಚಾಲನೆ ನೀಡಲಾಗುವುದು.