ಕೆಸಿಎಫ್ ಒಮಾನ್ ಹುಬ್ಬುರ್ರಸೂಲ್ ಮೀಲಾದ್ ಕಾನ್ಫರೆನ್ಸ್…
ಪ್ರವಾದಿ ಮುಹಮ್ಮದ್ ﷺ ಸಮಾನತೆಯ ಪ್ರತೀಕ ಆಗಿದ್ದರು - ಶಾಫಿ ಸ ಅದಿ...
ಮಸ್ಕತ್ : ಪ್ರವಾದಿ ಪೈಗಂಬರ್ ಮುಹಮ್ಮದ್ ಮುಸ್ತಫಾ (ಸ.ಅ) ರವರ 1499 ನೇ ಜನ್ಮ ದಿನಾಚರಣೆಯ ಭಾಗವಾಗಿ ಕರ್ನಾಟಕ ಕಲ್ಚರಲ್ ಫೌಂಡೇಶನ್ ಕೆಸಿಎಫ್ ಒಮಾನ್ ರಾಷ್ಟ್ರೀಯ ಸಮಿತಿ ವತಿಯಿಂದ ರಬೀಅ್ 24 ಬೃಹತ್ ಹುಬ್ಬುರ್ರಸೂಲ್ ಮೀಲಾದ್ ಕಾನ್ಫರೆನ್ಸ್ 2024 ಸಪ್ಟೆಂಬರ್ 27 ಶುಕ್ರವಾರ ರಂದು KCF ಒಮಾನ್ ರಾಷ್ಟ್ರೀಯ ಸಮಿತಿ ಅಧ್ಯಕ್ಷರಾದ ಅಯ್ಯೂಬ್ ಕೋಡಿ ರವರ ಅಧ್ಯಕ್ಷತೆಯಲ್ಲಿ ಅಲ್ ಖುವೈರ್ ಝಾಕಿರ್ ಮಾಲ್ ನಲ್ಲಿ ಬಹಳ ಅದ್ದೂರಿಯಾಗಿ ನಡೆಯಿತು.
“ಮುತ್ತು ನಬಿ ﷺ ಮಾನವೀಯತೆಯ ಮಾರ್ಗದರ್ಶಿ” ಎಂಬ ಧ್ಯೇಯ ವಾಕ್ಯದೊಂದಿಗೆ ವಿಜೃಂಭಣೆಯಿಂದ ನಡೆದ ಮೀಲಾದ್ ಸಮಾವೇಶವನ್ನು KCF ಅಂತರಾಷ್ಟ್ರೀಯ ಸಮಿತಿಯ ಅಧ್ಯಕ್ಷರಾದ ಡಿಪಿ ಯೂಸುಫ್ ಸಖಾಫಿ ಬೈತಾರ್ ರವರು ಉದ್ಘಾಟಿಸಿದರು. ಕರ್ನಾಟಕ ರಾಜ್ಯ ವಕ್ಫ್ ಬೋರ್ಡ್ ಮಾಜಿ ಚಯರ್ಮೆನ್ ಮೌಲಾನಾ NKM ಶಾಫಿ ಸಅದಿ ಬೆಂಗಳೂರು ರವರು ಪ್ರವಾದಿ ಮುಹಮ್ಮದ್ ﷺ ರವರು ಅತ್ಯುತ್ತಮ ಸ್ವಭಾವ ಗುಣಗಳನ್ನು ಹೊಂದಿದ, ನೀತಿವಂತ ರಾಜಕಾರಣಿ,ಕ್ಷಮಾ ಶೀಲ, ಎಲ್ಲರಿಗೂ ಸಮಾನತೆಯನ್ನು ಪ್ರತಿಪಾದಿಸಿದ ಸಮಾನತೆಯ ಪ್ರತೀಕ ಆಗಿದ್ದರು ಎಂದು ಮುತ್ತು ನೆಬಿ ರವರ ಕುರಿತು ಹುಬ್ಬುರ್ರಸೂಲ್ ﷺ ಪ್ರಭಾಷಣ ಗೈದರು. ಹಾಗೂ ಮದೀನಾದ ಮದ್ಹ್ ಗೀತೆಗಳ ಮೂಲಕ ಗುರಿತಿಸಿಕೊಂಡಿರುವ ಮುಹಮ್ಮದ್ ನಬೀಲ್ ಬರಕಾತಿ ಬೆಂಗಳೂರು ರವರು ನಅತೇ ಶರೀಫ್ ಆಲಾಪನೆ ಹಾಗೂ ಪ್ರವಾದಿ ಕೀರ್ತನೆಯ ಮೂಲಕ ಅಲ್ಲಿ ನರೆದ ಸಭಿಕರ ಮನಸ್ಸನ್ನು ಮದೀನದತ್ತ ಕೊಂಡೊಯ್ದುರು.
ಮುಖ್ಯ ಅತಿಥಿಗಳಾಗಿ ಅಲಿ ಮುಸ್ಲಿಯಾರ್ ಬಹರೈನ್ ( ಫೈನಾನ್ಸ್ ಕಂಟ್ರೋಲರ್, KCF ಅಂತರಾಷ್ಟ್ರೀಯ ಸಮಿತಿ) ನಿಝಾರ್ ಸಖಾಫಿ (ICF IC ಪ್ರಧಾನ ಕಾರ್ಯದರ್ಶಿ)
ರಾಝಿಖ್ ಹಾಜಿ, (ಪ್ರಧಾನ ಕಾರ್ಯದರ್ಶಿ ICF ಒಮಾನ್), ಮೊನಬ್ಬ ಹಾಜಿ ( ಅಧ್ಯಕ್ಷರು, DKSC ಒಮಾನ್), ಕೆ ಟಿ ಮುಹಮ್ಮದ್, ಆಬಿದ್ ಪಾಷ, ಅಸ್ಲಮ್ ಪಾಷ ( ರಝಾಝ್), ಡಾ. ಹಾಫಿಝ್ ಅಬ್ದುಲ್ ರಝಾಖ್ ಹಾಜಿ, ಮುಫ್ತಿ ಸಲ್ಮಾನ್ ರಝಾ ಫರೀದಿ ಮಿಸ್ಬಾಇ,ಝಹೂರ್ ಅಹಮದ್, ಮುಹಮ್ಮದ್ ಶುಕೂರ್ ಖಾಝಿ,ಆಸಿಫ್ (ಬದರ್ ಅಲ್ ಸಮಾ),ಖಾಸಿಫ್ ಖಾನ್ ಮುಂಬಯಿ, ಆಸಿಫ್ ಇಕ್ಬಾಲ್ ಗಾಲ, ಜನಾಬ್ ತಾರಿಖ್,ಮಜೀದ್ ಇಝ್ಕಿ ನಿಝ್ವ, ಇಬ್ರಾಹಿಮ್ ಹಾಜಿ ನಿಝ್ವ,ಖಲೀಲ್ ರಹಮಾನ್ ನಿಝ್ವ ಭಾಗವಹಿಸಿ ಕಾರ್ಯಕ್ರಮ ಕ್ಕೆ ಶುಭ ಕೋರಿದರು. ಕೆಸಿಎಫ್ ಒಮಾನ್ ಫೈನಾನ್ಸ್ ಕಂಟ್ರೋಲರ್ ಜನಾಬ್ ಆರಿಫ್ ಕೋಡಿ,ಕೆಸಿಎಫ್ ಅಂತರಾಷ್ಟ್ರೀಯ ಸಮಿತಿಯ ಸಾಂತ್ವನ ವಿಭಾಗದ ಕಾರ್ಯದರ್ಶಿ ಇಕ್ಬಾಲ್ ಹಾಜಿ ಬರ್ಕ, ಇಹ್ಸಾನ್ ವಿಭಾಗದ ಕಾರ್ಯದರ್ಶಿ ಹಂಝ ಹಾಜಿ ಕನ್ನಂಗಾರ್, ಕೆಸಿಎಫ್ ಐಸಿ ಕೌನ್ಸಿಲರ್ ಇಬ್ರಾಹಿಮ್ ಹಾಜಿ ಅತ್ರಾಡಿ,ಕೆಸಿಎಫ್ ಒಮಾನ್ ಸಂಘಟನಾಧ್ಯಕ್ಷ ಉಬೈದುಲ್ಲಾ ಸಖಾಫಿ, ಶಮೀರ್ ಉಸ್ತಾದ್ ಹೂಡೆ ರ ಸಹಿತ,
ಇನ್ನಿತರ ಪ್ರಮುಖ ಸಯ್ಯಿದರು, ಉಲಮಾ, ಉಮಾರಾ ನೇತಾರರು, ICF , RSC, DKSC, ದಾರುಲ್ ಸಲಾಮ್ , ಇನ್ನಿತರ ಸಂಘಟನೆಯ ಪ್ರಮುಖರು ಹಾಗೂ
KCF ಝೋನ್ ,ಸೆಕ್ಟರ್ ನಾಯಕರು, ಸದಸ್ಯರ ಉಪಸ್ಥಿತಿಯಲ್ಲಿ ಕಾರ್ಯಕ್ರಮ ಬಹಳ ಯಶಸ್ವಿಯಾಗಿ ನಡೆಯಿತು.
ಆರಂಭದಲ್ಲಿ ಮೀಲಾದ್ ಸ್ವಾಗತ ಸಮಿತಿಯ ಚಯರ್ಮೆನ್ ಸಯ್ಯದ್ ಆಬಿದ್ ತಂಙಳ್ ಅಲ್ ಐದ್ರೋಸಿ ಸ್ವಾಗತಿಸಿ, ಕೆಸಿಎಫ್ ಒಮಾನ್ ಪ್ರಧಾನ ಕಾರ್ಯದರ್ಶಿ ಸಾದಿಕ್ ಹಾಜಿ ಪ್ರಸ್ತಾವಿಕ ಭಾಷಣ ಗೈದರು. ಕಲಂದರ್ ಬಾವ ಪರಪ್ಪು ಕಾರ್ಯಕ್ರಮ ನಿರೂಪಿಸಿದರು. ಮೀಲಾದ್ ಸ್ವಾಗತ ಸಮಿತಿ ಕನ್ವೀನರ್ ಅಬ್ಬಾಸ್ ಮರ್ಕಡ ವಂದಿಸಿದರು.