ಹನಿ ಟ್ರ್ಯಾಪ್,ಡ್ರಗ್ಸ್, ಮರಳು ಮಾಫಿಯ, ಕೋಮು ಪ್ರಚೋದನೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅವ್ಯಾಹತ ತಡೆಗಟ್ಟಲು ಪೊಲೀಸ್ ಇಲಾಖೆ ವಿಫಲ, ಕಠಿಣ ಕ್ರಮಕ್ಕೆ ಮುಖ್ಯ ಮಂತ್ರಿಗಳಿಗೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಟಿ ಎಂ ಶಾಹಿದ್ ತೆಕ್ಕಿಲ್ ಪತ್ರ…

ಸುಳ್ಯ: ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ನಡೆಯುವ ಹನಿಟ್ಯಾಪ್, ಡ್ರಗ್ಸ್, ಗಾಂಜಾ ಮಾಧಕಗಳಂತಹ ದಂಧೆಯನ್ನು, ಕೋಮು ಪ್ರಚೋದಕರು, ಮರಳು ಮಾಫಿಯಾ ಮಟ್ಟಹಾಕಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವ ಬಗ್ಗೆ ಮುಖ್ಯಮಂತ್ರಿಗಳ ಗಮನ ಸೆಳೆದಿದ್ದು ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಸುರತ್ಕಲ್, ಬಂಟ್ವಾಳ, ಪುತ್ತೂರು, ಬೆಳ್ತಂಗಡಿ, ಸುಳ್ಯ ಹಾಗೂ ಜಿಲ್ಲೆಯಾದ್ಯಂತ ನಡೆಯುವ ಹನಿಟ್ಯಾಪ್, ಡ್ರಗ್ಸ್, ಗಾಂಜಾ ಮಾಧಕಗಳಂತಹ ಅಕ್ರಮ ಚಟುವಟಿಕೆಗಳು,ಮರಳು ಮಾಫಿಯಾ, ಕೋಮು ಪ್ರಚೋದನೆ ದಿನನಿತ್ಯ ನಡೆಯುತ್ತಿದ್ದು. ಇದರ ಜಾಲಕ್ಕೆ ಅನೇಕ ಮುಗ್ದರು,ನಿರುದ್ಯೋಗಿಗಳು ಲ್,ಉಧ್ಯಮಿಗಳು, ವಿದ್ಯಾರ್ಥಿಗಳು ಬಲಿಯಾಗುತ್ತಿದ್ದಾರೆ,ನಿನ್ನೆ ಮಂಗಳೂರಿನ ಕೂಳೂರಿನಲ್ಲಿ ಸಂಭವಿಸಿದ ಉದ್ಯಮಿ ಮಮ್ತಾಜ್ ಆಲಿಯವರ ಬಲಿ ಇದಕ್ಕೆ ಒಂದು ಸಾಕ್ಷಿ ಆದುದರಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆಯುವ ಅಕ್ರಮ ಚಟುವಟಿಗೆಳನ್ನು ಮಟ್ಟ ಹಾಕಲು ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಲು ಪೊಲೀಸ್ ಇಲಾಖೆಗೆ ಸೂಚಿಸಬೇಕಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಲ್ಲಿ ಪತ್ರ ಮುಖಾಂತರ ವಿನಂತಿಸಿದ್ದಾರೆ. ಈ ಬಗ್ಗೆ ಡಾಕ್ಟರ್ ಜಿ ಪರಮೇಶ್ವರ್ ಮಾನ್ಯ ಗೃಹ ಸಚಿವ ಬೆಂಗಳೂರು ಮತ್ತು ರಾಜ್ಯ ಪೊಲೀಸ್ ಮುಖ್ಯಸ್ಥರಾದ ಅಲೋಕ್ ಮೋಹನ್ ಐ ಪಿ ಎಸ್ ಅವರನ್ನು ವಿನಂತಿಸಿದ್ದಾರೆ.

Sponsors

Related Articles

Back to top button