ಸುಳ್ಯ ಗಾಂಧಿನಗರ ಡಯಾಗೊನೋಸ್ಟಿಕ್ ಲ್ಯಾಬ್ ನಲ್ಲಿ ವಿಶೇಷ ರಿಯಾಯಿತಿಯ ಹೆಲ್ತ್ ಪ್ಯಾಕೇಜ್ ಕರಪತ್ರ ಬಿಡುಗಡೆ…

ಸುಳ್ಯ: ಗಾಂಧಿನಗರ ಇಂಡಿಯನ್ ಬಿಲ್ಡಿಂಗ್ ನಲ್ಲಿ ನೂತನವಾಗಿ ಪ್ರಾರಂಭ ಗೊಂಡ ಸುಳ್ಯ ರಕ್ತ ಪರೀಕ್ಷಾ ಕೇಂದ್ರ ಮತ್ತು ಪಾಲಿ ಕ್ಲಿನಿಕ್ ನಲ್ಲಿ ವಿಶೇಷ ರಿಯಾಯಿತಿಯ ಹೆಲ್ತ್ ಪ್ಯಾಕೇಜ್ ಕರಪತ್ರ ವನ್ನು ಸುಳ್ಯ ನಗರ ಯೋಜನಾ ಪ್ರಾಧಿಕಾರ ( ಸೂಡ ) ಅಧ್ಯಕ್ಷ ಕೆ. ಎಂ. ಮುಸ್ತಫ ಬಿಡುಗಡೆ ಗೊಳಿಸಿದರು
ಈ ಸಂದರ್ಭದಲ್ಲಿ ಮಾತನಾಡಿದ ಅವರು ಮಕ್ಕಳಿಗೆ, ಮಹಿಳೆಯರಿಗೆ, ಹಿರಿಯ ನಾಗರಿಕರಿಗೆ ವಿಶೇಷ ರಿಯಾಯಿತಿ ಸಂಪೂರ್ಣ ಆರೋಗ್ಯ ತಪಾಸಣೆಯ ಸೌಲಭ್ಯ ಗಳನ್ನು ಎಲ್ಲರೂ ಉಪಯೋಗಿಸಿ ಕೊಳ್ಳಬೇಕೆಂದು ವಿನಂತಿಸಿದರು
ಈ ಸಂದರ್ಭದಲ್ಲಿ ಇಂಡಿಯನ್ ಸಂಸ್ಥೆಯ ವ್ಯವಸ್ಥಾಪಕ ಕೆ. ಬಿ ಇಬ್ರಾಹಿಂ, ಲ್ಯಾಬ್ ಮಾಲಕ ಸಚಿನ್, ಸಾಮಾಜಿಕ ಸೇವಾ ಕರ್ತ ಸಮೀವುಲ್ಲ ಮೊದಲಾದವರು ಉಪಸ್ಥಿತರಿದ್ದರು.