ಪೇಜಾವರ ಶ್ರೀಗಳ ಕೃಷ್ಣೈಕ್ಯಕ್ಕೆ ಟಿ.ಎಂ.ಶಹೀದ್ ಸಂತಾಪ….
ಸುಳ್ಯ: ಪೇಜಾವರ ಮಠಾಧೀಶರಾದ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿಗಳ ನಿಧನಕ್ಕೆ ,ತೆಕ್ಕಿಲ್ ಗ್ರಾಮೀಣಾಭಿವೃದ್ಧಿ ಪ್ರತಿಷ್ಠಾನದ ಅಧ್ಯಕ್ಷ ಹಾಗು ಕರ್ನಾಟಕ ರಾಜ್ಯ ರಾಜೀವ್ ಯುವ ಪ್ರತಿಷ್ಠಾನದ ಅಧ್ಯಕ್ಷ ಟಿ.ಎಂ.ಶಹೀದ್ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಪರಿಶಿಷ್ಟರ ಕೇರಿಯಲ್ಲಿ ಪಾದಯಾತ್ರೆ, ಶ್ರೀಮಠದ ಆವರಣದಲ್ಲಿ ಇಫ್ತಾರ್ ಸೌಹಾರ್ದ ಕೂಟ ಆಯೋಜನೆ, ಮಡೆಸ್ನಾನದ ಬದಲು ಎಡೆಸ್ನಾನದ ಚಿಂತನೆ ಮೊದಲಾದ ನಡೆಗಳ ಮೂಲಕ ಸಮಾಜಕ್ಕೆ ಮಾದರಿಯಾದ ಸ್ವಾಮೀಜಿಯವರು ಸರಳ ವ್ಯಕ್ತಿತ್ವ, ಸಂಸ್ಕೃತಿ- ಸಂಸ್ಕೃತ ವಿದ್ವಾಂಸರು, ಸರ್ವಧರ್ಮ ಸಮಾನತೆಗೆ ಹಾಗು ಅಸ್ಪೃಶ್ಯತೆ ನಿವಾರಣೆಗೆ ಶ್ರಮಿಸಿದ್ದಾರೆ.
ಹಿಂದುತ್ವದ ಪ್ರತಿಪಾದಕರಾಗಿದ್ದರೂ ಕೂಡ ಸ್ವಾಮೀಜಿಯವರಿಗೆ ಅಲ್ಪ ಸಂಖ್ಯಾತರ ಬಗ್ಗೆ ವಿಶೇಷ ಒಲವಿತ್ತು. ಅಯೋಧ್ಯೆ ತೀರ್ಪು ಕಾರ್ಯರೂಪಕ್ಕೆ ಬರುವ ಮೊದಲೇ ಅವರು ಅಗಲಿರುವುದು ಬಹಳ ಬೇಸರ ತಂದಿದೆ ಎಂದ ಟಿ.ಎಂ.ಶಹೀದ್
ಧಾರ್ಮಿಕ ಜಗತ್ತಿಗೆ ಅಪಾರ ಕೊಡುಗೆ ನೀಡಿದ ಸ್ವಾಮೀಜಿಯವರ ಅಗಲಿಕೆ ದೇಶಕ್ಕೆ ತುಂಬಲಾರದ ನಷ್ಟ. ಇಡೀ ನಾಡಿಗೆ ಸ್ವಾಮೀಜಿಯವರ ಅಗಲಿಕೆಯ ನೋವು ಭರಿಸುವ ಶಕ್ತಿಯನ್ನು ದೇವರು ಕರುಣಿಸಲಿ ಎಂದು ಆಶಿಸಿದ್ದಾರೆ.