ಎಸ್ ವೈ ಎಸ್ ಗಾಂಧಿನಗರ ಬ್ರಾಂಚ್ ನೂತನ ಪದಾಧಿಕಾರಿಗಳ ಆಯ್ಕೆ…

ಸುಳ್ಯ: ಸುನ್ನಿ ಯುವಜನ ಸಂಘ (SYS) ಕರ್ನಾಟಕ ರಾಜ್ಯ ಇದರ ಗಾಂಧಿನಗರ ಬ್ರಾಂಚ್ ನ ಮಹಾಸಭೆಯು ಜುನೈದ್ ಎನ್.ಎ ರವರ ಅಧ್ಯಕ್ಷತೆಯಲ್ಲಿ ಅ.10 ರಂದು ನಡೆಯಿತು.
ತ್ವಾಹಿರ್ ತಂಙಳ್ ಸಅದಿ ದುಆ ಮೂಲಕ ಚಾಲನೆ ನೀಡಿ ಉದ್ಘಾಟಿಸಿದರು. ಹಮೀದ್ ಬೀಜ ಕೂಚ್ಚಿ ಎಲ್ಲರನ್ನು ಸ್ವಾಗತಿಸಿದರು.
ಬ್ರಾಂಚ್ ಕಾರ್ಯದರ್ಶಿ ಹಾರಿಸ್ ಸಿ.ಎ ರವರು ವರದಿ ವಾಚಿಸಿ ಲೆಕ್ಕಪತ್ರವನ್ನು ಮಂಡಿಸಿದರು.
ನೂತನ ಅಧ್ಯಕ್ಷರಾಗಿ ಸಿದ್ದೀಕ್ ಕಟ್ಟೆಕ್ಕಾರ್ , ಪ್ರಧಾನ ಕಾರ್ಯದರ್ಶಿಯಾಗಿ ಹಾರಿಸ್ ಸಿ.ಎ ಹಾಗೂ ಕೋಶಾಧಿಕಾರಿಯಾಗಿ ಜುನೈದ್ ಎನ್.ಎ ರವರು ಸುನ್ನೀ ಸೆಂಟರ್ ಅನ್ಸಾರ್ ಕಾಂಪ್ಲೆಕ್ಸ್ ನಲ್ಲಿ ನಡೆದ ಎಸ್ ವೈ ಎಸ್ ವಾರ್ಷಿಕ ಮಹಾಸಭೆಯಲ್ಲಿ ಆಯ್ಕೆಯಾದರು.
ಉಪಾಧ್ಯಕ್ಷರಾಗಿ ನಿಝಾರ್ ಸಖಾಫಿ ಮುಡೂರು, ದಹ್ವಾ ಕಾರ್ಯದರ್ಶಿಯಾಗಿ ಹಮೀದ್ ಬೀಜಕೂಚ್ಚಿ, ಇಸಾಬಾ ಕಾರ್ಯದರ್ಶಿಯಾಗಿ ರಪೀಕ್ ಚೋಯ್ಸ್ ಆಯ್ಕೆಯಾದರು.ಕಾರ್ಯಕಾರಿ ಸಮಿತಿ ಸದಸ್ಯರಾಗಿ ಅಝೀಝ್ ಸಿ.ಎ,ಯಹಖೂಬ್ ಕೆ.ಎ. ಅಬೂಬಕರ್ ವೈಟ್, ಲತೀಫ್ ಕೆ.ಪಿ,ಹಾರಿಸ್ ಎನ್.ಏ, ರಫೀಕ್ ಎ, ಮುಹಮ್ಮದ್ ಎ.ಎಮ್, ಮುಹಮ್ಮದ್ ಹೈಫಾ, ಅಬ್ದುಲ್ಲಾ ಸಖಾಫಿ ಪಾರೆ, ಹನೀಫ್ ಬಿ.ಎಮ್, ಅಬೂಬಕರ್ ಜಟ್ಟಿಪ್ಫಳ್ಳ,ಎಮ್.ವೈ ಅಹಮದ್ ಅವರನ್ನು ಆಯ್ಕೆ ಮಾಡಲಾಯಿತು.
ವೀಕ್ಷಕರಾಗಿ ಆಗಮಿಸಿದ ಎಸ್ ವೈ ಎಸ್ ಸುಳ್ಯ ಸೆಂಟರ್ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಹಮೀದ್ ಸುಣ್ಣಮೂಲೆ ಹಾಗು ಎಸ್ ವೈ ಎಸ್ ಸುಳ್ಯ ಸೆಂಟರ್ ಅಧ್ಯಕ್ಷರಾದ ಎ.ಬಿ.ಅಶ್ರಫ್ ಸಅದಿ ಅಡ್ಕ ರವರು ಉಪಸ್ಥಿತರಿದ್ದು ಮಹಾಸಭೆಯ ಕಾರ್ಯಕಲಾಪವನ್ನು ಯಶಸ್ವಿಯಾಗಿ ನಿಭಾಯಿಸಿದರು.
ಈ ಸಂದರ್ಭದಲ್ಲಿ ಅಗಲಿದ ಸಾದಾತುಗಳು, ಉಲಮಾಗಳ,ಉಮರಾಗಳ, ಕಾರ್ಯಕರ್ತರ ಹೆಸರಿನಲ್ಲಿ ತಹ್ಲೀಲ್ ಸಮರ್ಪಿಸಿ ದುಆ ಮಾಡಲಾಯಿತು. ಮುಖ್ಯ ಅತಿಥಿಗಳಾಗಿ KCF ಸೌದಿ ಅರೇಬಿಯಾ ರಿಯಾದ್ ಇದರ ನೇತಾರರಾದ ಹಮೀದ್ ಎಸ್.ಎಮ್ ರವರು ಉಪಸ್ಥಿತರಿದ್ದರು.ಎಸ್ ವೈ ಎಸ್ ನ ನಾಯಕರು, ಸದಸ್ಯರು ಉಪಸ್ಥಿತರಿದ್ದರು. ಅಝೀಝ್ ಫುಟ್ ವೇರ್ ವಂದಿಸಿದರು.

7b0e54c4 1662 4f88 Bb3f 950986e11bae 300x225

E03c3339 0a33 4385 A243 C784856bf97a Scaled E1633924637506 297x300

4df5be95 47b1 4adc A665 0a0cb6789030 170x300

68071984 6f5c 44b4 9a86 A00881bb49cb 232x300

 

Related Articles