ಕಟ್ಟಡ ಕಾರ್ಮಿಕರಿಗೆ ಉಚಿತ ನೋಂದಣಿ ಹಾಗೂ ಮಾಹಿತಿ ಕಾರ್ಯಾಗಾರ…

ಬಂಟ್ವಾಳ: ತಾಲೂಕು ಪಂಚಾಯತ್ ಬಂಟ್ವಾಳ, ಸೀನಿಯರ್ ಛೇಂಬರ್ ಬಂಟ್ವಾಳ ನೇತ್ರಾವತಿ ಸಂಗಮ, ರೊಟರಿ ಕ್ಲಬ್ ಮೊಡಂಕಾಪು, ಕಾರ್ಮಿಕ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಕಟ್ಟಡ ಕಾರ್ಮಿಕರಿಗೆ ಉಚಿತ ನೋಂದಣಿ ಹಾಗೂ ಮಾಹಿತಿ ಕಾರ್ಯಾಗಾರ ಜು 25 ರಂದು ಬಂಟ್ವಾಳ ತಾಲೂಕು ಪಂಚಾಯತ್ ಸಭಾಂಗಣ, ಬಿ.ಸಿ.ರೋಡ್ ಇಲ್ಲಿ ನಡೆಯಲಿದೆ.
ಕಟ್ಟಡ ಕಾರ್ಮಿಕರ ನೋಂದಾವಣೆಗೆ ಅವಶ್ಯ ದಾಖಲೆಗಳಾದ ಆಧಾರ್ ಕಾರ್ಡ್ , ಭಾವಚಿತ್ರ-1, ಉದ್ಯೋಗ ಪ್ರಮಾಣ ಪತ್ರ, ವೇತನ ಸ್ಲಿಪ್, ಬ್ಯಾಂಕ್ ಪಾಸ್ ಪುಸ್ತಕ ವನ್ನು ನೋಂದಾವಣೆಗೆ ಆಗಮಿಸುವವರು ತರಬೇಕಾಗಿ ಸಂಘಟಕರು ತಿಳಿಸಿದ್ದಾರೆ.