ಸುಳ್ಯ ನ ಪಂ ಕೆರೆಮೂಲೆ ವಾರ್ಡ್ ಸದಸ್ಯ ಎಂ. ವೆಂಕಪ್ಪ ಗೌಡರಿಂದ ಇಫ್ತಾರ್ ಕೂಟ…

ಸುಳ್ಯ: ಸುಳ್ಯ ನಗರ ಪಂಚಾಯತ್ ಮಾಜಿ ಅಧ್ಯಕ್ಷರು, ಸುಳ್ಯ ವಿಧಾನಸಭಾ ಕ್ಷೇತ್ರ ಪ್ರಚಾರ ಸಮಿತಿ ಅಧ್ಯಕ್ಷ, ಕೆರೆಮೂಲೆ ವಾರ್ಡ್ ಸದಸ್ಯ ಎಂ. ವೆಂಕಪ್ಪ ಗೌಡರ ಆತಿಥ್ಯ ದಲ್ಲಿ ಗಾಂಧಿನಗರ ಮದರಸ ವಠಾರದಲ್ಲಿ ಅನ್ಸಾರ್ ವತಿಯಿಂದ ತಿಂಗಳು ಪೂರ್ತಿ ನಡೆಯುವ ಇಫ್ತಾರ್ ಕೂಟದಲ್ಲಿ ಎ.5 ರ ದಿನದ ಪ್ರಾಯೋಜತ್ವ ನೀಡಿ ಇಫ್ತಾರ್ ಸಂಗಮದಲ್ಲಿ ಭಾಗವಹಿಸಿದರು .
ಈ ಸಂದರ್ಭದಲ್ಲಿ ಮಾತನಾಡಿದ ಎಂವಿಜಿ ನಾನು ಕಳೆದ 3 ವರ್ಷಗಳಿಂದ ಇಫ್ತಾರ್, ದೀಪಾವಳಿ, ಕ್ರಿಸ್ಮಸ್ ಸರ್ವ ಧರ್ಮಿಯರೊಂದಿಗೆ ಆಚರಿಸಿಕೊಂಡು ಇದು ಭಾರತದ ವಿವಿಧತೆಯಲ್ಲಿ ಏಕತೆಯ ಪ್ರತೀಕ ಎಂದು ಹೇಳಿದರು.
ಈ ಸಂದರ್ಭದಲ್ಲಿ ಗಾಂಧಿನಗರ ಜುಮಾ ಮಸ್ಜಿದ್ ಅಧ್ಯಕ್ಷ ಕೆ. ಎಂ. ಮುಸ್ತಫ, ನಗರ ಪಂಚಾಯತ್ ಮಾಜಿ ಅಧ್ಯಕ್ಷ ಸಂಶುದ್ದೀನ್, ಸದಸ್ಯರುಗಳಾದ ಶರೀಫ್ ಕಂಠಿ, ರಿಯಾಜ್ ಕಟ್ಟೆಕ್ಕಾರ್, ಸಿದ್ದೀಕ್ ಕೋ ಕೋ, ಮಾಧ್ಯಮ ವಕ್ತಾರ ಭವಾನಿ ಶಂಕರ್ ಕಲ್ಮಡ್ಕ ಉದ್ಯಮಿ ಕೆಟಿಎಸ್ ಅಹ್ಮದ್ ಹಾಜಿ, ಶಹೀದ್ ಪಾರೆ, ನೌಷದ್ ಕೆರೆಮೂಲೆ, ರಫೀಕ್, ಜುನೈದ್ ಮೊದಲಾದವರು ಸೇರಿದoತೆ 400 ಕ್ಕೂ ಮಿಕ್ಕಿ ಸಾರ್ವಜನಿಕರು ಭಾಗವಹಿಸಿದ್ದರು.