ಫರಂಗಿಪೇಟೆ ಸೇವಾಂಜಲಿಯಲ್ಲಿ ಕ್ಷಯ ರೋಗಿಗಳಿಗೆ ದವಸ ಧಾನ್ಯ ವಿತರಣೆ…
ಬಂಟ್ವಾಳ: ಸೇವಾಂಜಲಿ ಪ್ರತಿಷ್ಠಾನ ಫರಂಗಿಪೇಟೆ ಇದರ ಆಶ್ರಯದಲ್ಲಿ ಕ್ಷಯ ಮುಕ್ತ ಭಾರತ ನಿರ್ಮಾಣದ ಉದ್ದೇಶದಿಂದ ನಿಕ್ಷಯ್ ಮಿತ್ರ ಯೋಜನೆಯಡಿ ಕ್ಷಯರೋಗಿಗಳಿಗೆ ಆಹಾರ- ದವಸಧಾನ್ಯ ವಿತರಣಾ ಕಾರ್ಯಕ್ರಮ ಶುಕ್ರವಾರ ಸೇವಾಂಜಲಿ ಸಭಾಂಗಣದಲ್ಲಿ ನಡೆಯಿತು.
ನಿಕಟಪೂರ್ವ ರೋಟರಿ ಜಿಲ್ಲಾ ಗವರ್ನರ್ ಪ್ರಕಾಶ್ ಕಾರಂತ್ ಆಹಾರದ ಕಿಟ್ ವಿತರಿಸಿ ಮಾತನಾಡಿ ಕ್ಷಯ ಮುಕ್ತ ಭಾರತ ಅಭಿಯಾನದ ಭಾಗವಾಗಿ ರೋಗಿಗಳಿಗೆ ಆಹಾರದ ಕಿಟ್ ವಿತರಣೆಯ ಕಾರ್ಯವನ್ನು ಸೇವಾಂಜಲಿಯು ವಿಶೇಷ ಕಾಳಜಿಯಿಂದ ಮಾಡಿದ್ದು, ಇದು ಎಲ್ಲಾ ಸೇವಾ ಸಂಸ್ಥೆಗಳಿಗೂ ಮಾದರಿ ಎನಿಸಿಕೊಂಡಿದೆ ಎಂದರು. ನದಿ, ವೃಕ್ಷ, ಗೋವಿನಂತೆ ಸೇವಾಂಜಲಿ ತನನಗಾಗಿ ಏನನ್ನು ಮಾಡದೆ ಪರರ ಏಳಿಗೆಗಾಗಿ ಶ್ರಮಿಸುತ್ತಿದೆ. ಸೇವಾ ಕ್ಷೇತ್ರದಲ್ಲಿ ಮಾತ್ರವಲ್ಲದೆ ಶೈಕ್ಷಣಿಕ, ಸಾಮಾಜಿಕ, ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿರುವುದು ಅಭಿನಂದನೀಯ ಎಂದರು.
ತುಂಬೆಯ ಮುಹಿಯುದ್ದೀನ್ ಎಜುಕೇಶನಲ್ ಟ್ರಸ್ಟ್ ಅಧ್ಯಕ್ಷ ಅಬ್ದುಲ್ ಸಲಾಂ ಮಾತನಾಡಿ ಸೇವಾಂಜಲಿ ಪ್ರತಿಷ್ಠಾನವು ಆರೋಗ್ಯ ಕ್ಷೇತ್ರದಲ್ಲಿ ಮಾಡಿದ ಸೇವೆಯು ಅನನ್ಯವಾಗಿದ್ದು, ಕೃಷ್ಣ ಕುಮಾರ್ ಪೂಂಜ ಅವರು ತನ್ನ ಜೀವನವನ್ನೇ ಸಮಾಜಸೇವೆ ಮೀಸಲಿಟ್ಟಿದ್ದಾರೆ ಎಂದರು.
ತುಂಬೆ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಕೆ.ಎನ್. ಗಂಗಾಧರ ಆಳ್ವ ಮಾತನಾಡಿ ನಾವು ಹಲವೆಡೆ ದೇವರನ್ನು ಹುಡುಕಿಕೊಂಡು ಹೋಗುತ್ತಿದ್ದು, ಸೇವಾ ಕಾರ್ಯದ ಜತೆ ಸೇರಿದರೆ ಅದೇ ಅತಿ ದೊಡ್ಡ ದೇವರ ಸೇವೆಯಾಗುತ್ತದೆ. ಇತರ ಯಾವುದೇ ಲಾಭದ ಉದ್ದೇಶವಿಲ್ಲದೆ ಸೇವಾಂಜಲಿಯು ಧಾರ್ಮಿಕ ಆಚರಣೆಯ ಉಳಿತಾಯದ ಹಣವನ್ನೂ ಸೇವೆಗೆ ಬಳಸಿಕೊಳ್ಳುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಡಯಾಲಿಸ್‌ಗಾಗಿ ಕಿರಣ್ ತುಂಬೆ ಅವರಿಗೆ 10 ಸಾವಿರ ರೂಪಾಯಿ ಆರ್ಥಿಕ ಸಹಕಾರ ನಿಡಲಾಯಿತು.
ಸೇವಾಂಜಲಿ ಪ್ರತಿಷ್ಠಾನದ ಟ್ರಸ್ಟಿ ಅರ್ಕುಳ ದಾಮೋದರ ಶೆಣೈ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪ್ರಮುಖರಾದ ಸುರೇಶ್ ರೈ ಪೆಲಪಾಡಿ, ಸುಕುಮಾರ್ ಅರ್ಕುಳ, ಅಶೋಕ್ ಕುಲಾಲ್ ರಾಮಲ್ ಕಟ್ಟೆ, ನಾಗಪ್ಪ ಶೆಟ್ಟಿ ಮೇರಮಜಲು, ಪ್ರಕಾಶ್ ಕಿದೆಬೆಟ್ಟು, ಕೃಷ್ಣ ತುಪ್ಪೆಕಲ್ಲು, ಪದ್ಮನಾಭ ಶೆಟ್ಟಿ ಪುಂಚಮೆ, ಆರ್.ಎಸ್.ಜಯ ರಾಮಲ್‌ಕಟ್ಟೆ, ದಿನೇಶ್ ತುಂಬೆ, ಪ್ರಶಾಂತ್ ತುಂಬೆ, ವಿಕ್ರಂ ಬರ್ಕೆ, ಸುಕೇಶ್ ಶೆಟ್ಟಿ ತೇವು, ದಿನೇಶ್ ಶೆಟ್ಟಿ ಕೊಟ್ಟಿಂಜ, ಬಿ. ನಾರಾಯಣ ಬೆಳ್ಚಾಡ, ಜಯಾನಂದ ನಾಯ್ಕ್ ಕುಮ್ಡೇಲು ಮತ್ತಿತರರು ಹಾಜರಿದ್ದರು.
ಸೇವಾಂಜಲಿ ಪ್ರತಿಷ್ಠಾನದ ಆಡಳಿತ ಟ್ರಸ್ಟಿ ಕೃಷ್ಣಕುಮಾರ್ ಪೂಂಜ ಸ್ವಾಗತಿಸಿ, ಪ್ರಾಸ್ತವಿಕವಾಗಿ ಮಾತನಾಡಿದರು. ಕವಿತಾ ಕಾರ್ಯಕ್ರಮ ನಿರೂಪಿಸಿದರು.