ಪಾನೀರು ಚರ್ಚ್‌ನಿಂದ ಕಾಣಿಕೆ ಡಬ್ಬಿ ಕಳ್ಳತನ….

ಮಂಗಳೂರು : ದೇರಳಕಟ್ಟೆ ಪಾನೀರು ಚರ್ಚ್‍ಗೆ ನುಗ್ಗಿರುವ ಕಳ್ಳರು ಪರಮ ಪ್ರಸಾದ ಇರಿಸುವ ಲಾಕರ್ ಮುರಿದಿರುವುದಲ್ಲದೆ, ಹಲವಾರು ಖಾಣಿಕೆ ಡಬ್ಬಿಗಳನ್ನು ಕಳವುಗೈದಿದ್ದಾರೆ .
ಪಾನೀರು ಅವರ್ ಲೇಡಿ ಆಫ್ ಮರ್ಸಿ ಚರ್ಚಿನ ಎದುರು ಭಾಗದ ಬಾಗಿಲು ಮುರಿದು ಒಳನುಗ್ಗಿರುವ ಕಳ್ಳರು ಪರಮ ಪ್ರಸಾದ ಇರಿಸಿದ ಲಾಕರ್ ಮುರಿದಿದ್ದಾರೆ. ಹಾಗು ಚರ್ಚ್ ಆವರಣದಲ್ಲಿ ಇರಿಸಲಾಗಿದ್ದ ಹತ್ತಕ್ಕೂ ಅಧಿಕ ಕಾಣಿಕೆ ಡಬ್ಬಿಗಳನ್ನು ಒಡೆದು, ಹಣವನ್ನು ಲೂಟಿಗೈದಿದ್ದಾರೆ.
ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕಾಗಮಿಸಿದ ಉಳ್ಳಾಲ ಠಾಣಾಧಿಕಾರಿ ಅನಿಲ್ ಕುಮಾರ್ ನೇತೃತ್ವದ ತಂಡ ತನಿಖೆ ನಡೆಸುತ್ತಿದೆ.