ಶ್ರೀರಾಮ ವಿದ್ಯಾಕೇಂದ್ರದಲ್ಲಿ ಬಹುಭಾಷಾ ಕವಿಗೋಷ್ಠಿ…

ಪ್ರಕೃತಿಯ ವಿಸ್ಮಯಗಳು ಕವನ ರಚನೆಗೆ ಪ್ರೇರಕ : ರಾಜಮಣಿ ರಾಮಕುಂಜ...

ಬಂಟ್ವಾಳ: ಪ್ರಕೃತಿಯ ವಿಚಾರಗಳಿಂದ ನಾವು ವಿಸ್ಮಿತರಾಗುತ್ತೇವೆ. ವಿಸ್ಮಯಗಳು ಪ್ರಚೋದಿಸಿ ಹೃದಯದ ಭಾಷೆಯಾಗಿ ಕವನ ರೂಪದಲ್ಲಿ ಹೊರಹೊಮ್ಮುತ್ತದೆ. ಕವನ ಬುದ್ದಿಯ ಭಾಷೆ ಅಲ್ಲ, ಅದು ಹೃದಯದ ಭಾಷೆ . ಕವನವನ್ನು ಓದಿದಾಗ , ಹಾಡಿದಾಗ ಪ್ರಭಾವಿಸುತ್ತದೆ ಎಂದು ಸಾಹಿತಿ ಪ್ರೊ. ರಾಜಮಣಿ ರಾಮಕುಂಜ ಹೇಳಿದರು.
ಅವರು ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದಲ್ಲಿ ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಬಂಟ್ವಾಳ ತಾಲೂಕು ಸಮಿತಿ ಸಹಯೋಗದಲ್ಲಿ ಜೂ.19 ರಂದು ಏರ್ಪಡಿಸಲಾದ ಜಿಲ್ಲಾ ಮಟ್ಟದ ಕಾಲೇಜು ವಿದ್ಯಾರ್ಥಿಗಳ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪದವಿ ಮತ್ತು ಪಿಯುಸಿ ಯಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳು ಪರಿಸರ ಸಂಬಂಧಿತ ಸ್ವರಚಿತ ಕವಿತೆಗಳನ್ನು ವಾಚನ ಮಾಡಿದರು. ವೈಷ್ಣವಿ ಕಲ್ಲಡ್ಕ ನಿರೂಪಿಸಿದರು.
ಹಿರಿಯ ಪತ್ರಕರ್ತ ಜಯಾನಂದ ಪೆರಾಜೆಯವರ ಅಧ್ಯಕ್ಷತೆಯಲ್ಲಿ ಬಹುಭಾಷಾ ಕವಿಗೋಷ್ಠಿ ಜರಗಿತು. ಕವಯಿತ್ರಿ ಅಪೂರ್ವ ಕಾರಂತ್ ಪುತ್ತೂರು ನಿರೂಪಿಸಿದರು.
ಕವಿಗಳಾದ ಡಾ. ಸುರೇಶ ನೆಗಳಗುಳಿ, ರೈಮಂಡ್ ಡಿಕುನ್ಹಾ ತಾಕೊಡೆ, ಪಂಕಜಾ ಮುಡಿಪು, ಶಾಂತಾ ಪುತ್ತೂರು, ಜಯಶ್ರೀ ಶೆಣೈ ಬಂಟ್ವಾಳ , ಸೋನಿತಾ ನೇರಳಕಟ್ಟೆ , ಜಯರಾಮ ಪಡ್ರೆ, ಹೇಮಾವತಿ ಸಾಲೆತ್ತೂರು, ಋತ್ವಿಕ್ ಮೊಳೆಯಾರ, ವಿಶ್ವನಾಥ ಮಿತ್ತೂರು ಸ್ವರಚಿತ ಪರಿಸರ ಸಂಬಂಧಿತ ಕವನ ವಾಚಿಸಿದರು.
ಪ್ರೌಢ ಶಾಲಾ ವಿದ್ಯಾರ್ಥಿಗಳ ಕವಿಗೋಷ್ಠಿಯು ಕವಯಿತ್ರಿ ಶಿಕ್ಷಕಿ ಸೀತಾಲಕ್ಷ್ಮೀ ವರ್ಮ ವಿಟ್ಲ ಇವರ ಅಧ್ಯಕ್ಷತೆಯಲ್ಲಿ ಜರಗಿತು. ಕುಮಾರಿ ವೈಷ್ಣವಿ ಕಡ್ಯ ನಿರೂಪಿಸಿದರು.
ಪ್ರೌಢ ಶಾಲಾ ವಿದ್ಯಾರ್ಥಿಗಳು ಪ್ರಸಿದ್ಧ ಕವಿಗಳ ಪರಿಸರ ಗೀತೆಗಳನ್ನು ಹಾಡಿದರು.
ವೇದಕೆಯಲ್ಲಿ ಶ್ರೀರಾಮ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ವಸಂತ ಬಲ್ಲಾಳ್ , ಮುಖ್ಯ ಶಿಕ್ಷಕ ಗೋಪಾಲ, ಹಿರಿಯ ಸಾಹಿತಿ ಗಣರಾಜ ಕುಂಬ್ಳೆ, ಉದ್ಯಮಿ ನಾಗೇಶ ಕಲ್ಲಡ್ಕ ಉಪಸ್ಥಿತರಿದ್ದರು. ಕವಯಿತ್ರಿ ಮಧುರ ಕಡ್ಯ ವಂದಿಸಿದರು.

photo 2

Sponsors

Related Articles

Back to top button