ಸುಳ್ಯ ಗಾಂಧಿನಗರ KPS ಶಾಲೆ – ಅನುದಾನ ಬಿಡುಗಡೆಗೊಳಿಸಲು ಉಸ್ತುವಾರಿ ಸಚಿವರಿಗೆ ಮನವಿ…

ಸುಳ್ಯ: ಗಾಂಧಿನಗರ KPS ಶಾಲೆಯನ್ನು ಮೇಲ್ದರ್ಜೆಗೇರಿಸುವ ಸಲುವಾಗಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗಾಗಿ ಸರಕಾರದ ಯೋಜನೆಯ ಅಂದಾಜು ಮೊತ್ತ 19 ಕೋಟಿ ರೂಪಾಯಾಗಿದ್ದು, ಕಳೆದ 5 ವರ್ಷದಲ್ಲಿ ಯಾವುದೇ ಹಣ ಬಿಡುಗಡೆ ಯಾಗಿಲ್ಲ. ಹಾಗಾಗಿ ಆದಷ್ಟು ಬೇಗ ಹಣ ಬಿಡುಗಡೆಗೊಳಿಸುವಂತೆ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ದಿನೇಶ್ ಗುಂಡುರಾವ್ ಅವರಿಗೆ ಜನತಾದರ್ಶನದಲ್ಲಿ ನ.ಪಂ ಸದಸ್ಯ ಶರೀಫ್ ಕಂಠಿ ಮನವಿ ಸಲ್ಲಿಸಿದರು.
ಉಸ್ತುವಾರಿ ಸಚಿವರು ಈ ಬಗ್ಗೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ಪರಿಶೀಲಿಸುವಂತೆ ತಿಳಿಸಿದ್ದಾರೆ.

Sponsors

Related Articles

Back to top button