ಯೆನೆಪೋಯ ತಾಂತ್ರಿಕ ಮಹಾವಿದ್ಯಾಲಯ -ವಿದ್ಯಾರ್ಥಿಗಳ ಪ್ರಾಜೆಕ್ಟ್ ಗಳ ಪ್ರದರ್ಶನ “ಯೆನ್ ಮಂಥನ್ -22″…

ಮೂಡುಬಿದ್ರಿ: ಇಲ್ಲಿನ ಯೆನೆಪೋಯ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಯಲ್ಲಿ ಅಂತಿಮ ವರ್ಷದ ವಿದ್ಯಾರ್ಥಿಗಳ ಪ್ರಾಜೆಕ್ಟ್ ಗಳ ಪ್ರದರ್ಶನ “ಯೆನ್ ಮಂಥನ್ -22” ಮೇ. 28 ರಂದು ನಡೆಯಿತು.
ಎಲ್ಲ ವಿಭಾಗಗಳ ವಿದ್ಯಾರ್ಥಿ ಸಂಘಗಳು ಮತ್ತು ಕಾಲೇಜಿನ ISTE ಸ್ಟೂಡೆಂಟ್ಸ್ ಚಾಪ್ಟರ್ (KA -109) ಸಹಯೋಗದಲ್ಲಿ ಏರ್ಪಡಿಸಲಾಗಿದ್ದ ಈ ಕಾರ್ಯಕ್ರಮದಲ್ಲಿ ಕಾಲೇಜಿನ ಕಂಪ್ಯೂಟರ್ ಸೈನ್ಸ್ ವಿಭಾಗದ 18 ಪ್ರಾಜೆಕ್ಟ್ ಗಳು, ಮಾಹಿತಿ ತಂತ್ರಜ್ಞಾನ ವಿಭಾಗದ 13 ಪ್ರಾಜೆಕ್ಟ್ ಗಳು, ಇಲೆಕ್ಟ್ರಿಕಲ್ ವಿಭಾಗದ 13 ಪ್ರಾಜೆಕ್ಟ್ ಗಳು, ಇಲೆಕ್ಟ್ರಾನಿಕ್ಸ್ ಮತ್ತು ಕಮ್ಯೂನಿಕೇಷನ್ ವಿಭಾಗದ 14 ಪ್ರಾಜೆಕ್ಟ್ ಗಳು ಹಾಗೂ ಮೆಕ್ಯಾನಿಕಲ್ ವಿಭಾಗದ 20 ಪ್ರಾಜೆಕ್ಟ್ ಗಳು ಪ್ರದರ್ಶಿಸಲ್ಪಟ್ಟವು.
ಕಂಪ್ಯೂಟರ್ ಸೈನ್ಸ್ ವಿಭಾಗದ ತೀರ್ಪುಗಾರರಾಗಿ ಡಾ. ರಾಜು ಅಸೋಸಿಯೇಟ್ ಪ್ರೊಫೆಸರ್, ಕಂಪ್ಯೂಟರ್ ಸೈನ್ಸ್ ವಿಭಾಗ NMAMIT, ನಿಟ್ಟೆ, ಮಾಹಿತಿ ತಂತ್ರಜ್ಞಾನ ವಿಭಾಗದ ತೀರ್ಪುಗಾರರಾಗಿ ಪ್ರೊ. ಸುಧೀರ್ ಶೆಟ್ಟಿ, ಮುಖ್ಯಸ್ಥರು, ಮಾಹಿತಿ ತಂತ್ರಜ್ಞಾನ ವಿಭಾಗ AIET , ಮೂಡುಬಿದಿರೆ, ಇಲೆಕ್ಟ್ರಿಕಲ್ ವಿಭಾಗದ ತೀರ್ಪುಗಾರರಾಗಿ ಪ್ರೊ. ಅಜಿತಂಜಯ ಕುಮಾರ್ ಎಂ ಕೆ, ಸಹಾಯಕ ಪ್ರಾಧ್ಯಾಪಕರು, EEE ವಿಭಾಗ, SJEC, ಮಂಗಳೂರು, ಇಲೆಕ್ಟ್ರಾನಿಕ್ಸ್ ಮತ್ತು ಕಮ್ಯೂನಿಕೇಷನ್ ವಿಭಾಗದ ತೀರ್ಪುಗಾರರಾಗಿ ಡಾ. ಶಂಕರ್ ಬಿ ಬಿ, ಅಸೋಸಿಯೇಟ್ ಪ್ರೊಫೆಸರ್, ಎಸ್ ವಿಭಾಗ, NMAMIT, ನಿಟ್ಟೆ, ಮೆಕ್ಯಾನಿಕಲ್ ವಿಭಾಗದ ತೀರ್ಪುಗಾರರಾಗಿ ಡಾ.ಶಶಿಕಾಂತ್, ಹಿರಿಯ ಸಹಾಯಕ ಪ್ರಾಧ್ಯಾಪಕರು, ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗ MITE ಮೂಡುಬಿದಿರೆ ಸಹಕರಿಸಿದ್ದರು.
ಪ್ರಾಂಶುಪಾಲ ಡಾ.ಆರ್.ಜಿ. ಡಿಸೋಜಾ ಮತ್ತು ಕ್ಯಾಂಪಸ್ ಆಡಳಿತಾಧಿಕಾರಿ ಮೊಹಮ್ಮದ್ ಶಾಹಿದ್ ಉಪಸ್ಥಿತರಿದ್ದರು.

ಪ್ರಾಜೆಕ್ಟ್ ಗಳ ಪ್ರಾಥಮಿಕ ಜ್ಞಾನವನ್ನು ಒದಗಿಸುವುದು ಮತ್ತು ವಿದ್ಯಾರ್ಥಿಗಳಿಗೆ ತಮ್ಮ ಕಲಿಕೆಯ ಅನುಭವವನ್ನು ಪ್ರದರ್ಶಿಸಲು ಅವಕಾಶವನ್ನು ಒದಗಿಸುವುದು ಈ ಪ್ರದರ್ಶನದ ಮುಖ್ಯ ಉದ್ದೇಶ.

Sponsors

Related Articles

Back to top button