ವೈನ್‌ ಶಾಪ್‌ಗೆ ನುಗ್ಗಿ ಅಪಾರ ಮೌಲ್ಯದ ಮದ್ಯ ಕಳ್ಳತನ …

ಮಂಗಳೂರು : ದೇರಳಕಟ್ಟೆ ಸಮೀಪದ ಕುಕ್ಕುದಕಟ್ಟೆ ಎಂಎಸ್‌ಐಎಲ್‌ ವೈನ್‌ ಶಾಪ್‌ವೊಂದಕ್ಕೆ ಕಳ್ಳರು ನುಗ್ಗಿ ಅಪಾರ ಮದ್ಯವನ್ನು ದೋಚಿರುವ ಘಟನೆ ಇಂದು ಬೆಳಗ್ಗೆ ಬೆಳಕಿಗೆ ಬಂದಿದೆ.
ಕುಕ್ಕುದಕಟ್ಟೆಯ ಎಂಎಸ್‌ಐಎಲ್‌ ವೈನ್‌ ಶಾಪ್‌ಗೆ ನುಗ್ಗಿದ ಕಳ್ಳರು ನುಗ್ಗಿ ಕಳವು ಮಾಡಿದ್ದು, ಅಲ್ಲಿದ್ದ ಸಿಸಿ ಕ್ಯಾಮರಾದ ಡಿವಿಆರ್‌ ಅನ್ನು ಕೂಡಾ ಕಳವುಗೈದಿದ್ದಾರೆ ಎಂದು ತಿಳಿದು ಬಂದಿದೆ. ತಮ್ಮ ಕೃತ್ಯ ಹೊರಗೆ ಯಾರಿಗೂ ಕಾಣಿಸದಂತೆ ಅಂಗಡಿ ಎದುರು ಬಟ್ಟೆಯನ್ನು ಕಟ್ಟಿ ಶಟರ್ ಬಾಗಿಲನ್ನು ಮುರಿದಿದ್ದಾರೆ. ಮದ್ಯದಂಗಡಿಗಳನ್ನು ಕಳೆದ ಹಲವಾರು ದಿನಗಳಿಂದ ಲಾಕ್‌ಡೌನ್‌ ಹಿನ್ನೆಲೆ ಮುಚ್ಚಲಾಗಿತ್ತು.
ವೈನ್ಸ್ ಅಂಗಡಿ ಸಮೀಪದಲ್ಲೇ ಇರುವ ಪಾನ್ ಅಂಗಡಿಯಿಂದ 10 ಪ್ಯಾಕೆಟ್ ಸಿಗರೇಟುಗಳನ್ನು ಕಳ್ಳರು ಕಳವುಗೈದಿದ್ದಾರೆ. ಮೂರು ವರ್ಷದಲ್ಲಿ 10ನೇ ಬಾರಿ ಇದೇ ರೀತಿಯಲ್ಲಿ ಕಳವು ನಡೆಯುತ್ತಿದೆ ಎಂದು ಪಾನ್ ವಾಲಾ ಪೊಲೀಸರಲ್ಲಿ ಹೇಳಿಕೊಂಡಿದ್ದಾನೆ.
ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ. ಈ ಬಗ್ಗೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

IMG 20200403 WA0030 300x225

Related Articles

Leave a Reply

Your email address will not be published. Required fields are marked *