ವಿಟಿಯು ಕುಲಪತಿ ಪ್ರೊ. ವಿದ್ಯಾಶಂಕರ-ಎನ್.ಎಸ್. ಎಫ್ ಅಧ್ಯಕ್ಷ ಡಾ ಸೇತುರಾಮ ಪಂಚನಾಥನ್ ಸಂವಾದ…
ಬೆಳಗಾವಿ:ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ವಿದ್ಯಾಶಂಕರ ಎಸ್ ಅವರು ಅಮೆರಿಕ ಸಂಯುಕ್ತ ಸಂಸ್ಥಾನದ ನ್ಯಾಷನಲ್ ಸೈನ್ಸ ಫೌಂಡೇಶನ್ (ಎನ್ಎಸ್ಎಫ್) ನ ಅಧ್ಯಕ್ಷ ಡಾ. ಸೇತುರಾಮ ಪಂಚನಾಥನ್ ಅವರನ್ನು ಭೇಟಿಯಾಗಿ ಸಂವಾದ ಮತ್ತು ಚರ್ಚೆ ನಡೆಸಿದರು.
ಮೂಲತಃ ಭಾರತೀಯರಾದ ಡಾ. ಸೇತುರಾಮ ಅವರು ಪ್ರಸ್ತುತ ಯು ಎಸ್ ಎ ಯ ಪ್ರಖ್ಯಾತ ಸಂಸ್ಥೆ ನ್ಯಾಷನಲ್ ಸೈನ್ಸ್ ಫೌಂಡೇಶನ್ ಇದರ15 ನೇ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರು ಈ ಹುದ್ದೆಗೆ ಅಮೇರಿಕಾದ ಅಧ್ಯಕ್ಷರಿಂದ ನಾಮನಿರ್ದೇಶಿತರಾಗಿದ್ದಾರೆ. ನ್ಯಾಷನಲ್ ಸೈನ್ಸ್ ಫೌಂಡೇಷನ್ ಅಮೇರಿಕಾ ಸರ್ಕಾರದ ಸ್ವತಂತ್ರ ಸಂಸ್ಥೆಯಾಗಿದ್ದು ವಿಜ್ಞಾನ, ಆರೋಗ್ಯ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿನ ಸಂಶೋಧನೆ ಮತ್ತು ಇನ್ನೋವೆಶನ್ ಗೆ ಉತ್ತೇಜನ ಮತ್ತು ಸಹಕಾರವನ್ನು ನೀಡುತ್ತದೆ.
ಪುಟಪರ್ತಿಯಲ್ಲಿ ನಡೆದ ಶ್ರೀ ಸತ್ಯಸಾಯಿ ಸಂಸ್ಥೆಯ ಘಟಿಕೋತ್ಸವದ ಸಂದರ್ಭದಲ್ಲಿ ವಿಟಿಯು ಕುಲಪತಿ ಪ್ರೋ ವಿದ್ಯಾಶಂಕರ ಎಸ್. ಅವರು ಡಾ. ಸೇತುರಾಮ ಅವರನ್ನು ಭೇಟಿಯಾಗಿ ಎನ್ ಎಸ್ ಎಫ್ ಹಾಗೂ ವಿಟಿಯು ಶಿಕ್ಷಣ, ಸಂಶೋಧನೆ ಹಾಗೂ ಇನ್ನೊವೆಶನ್ ಕ್ಷೇತ್ರದಲ್ಲಿ ಯಾವ ರೀತಿಯಲ್ಲಿ ಸಹಯೋಗದೊಂದಿಗೆ ಜೊತೆಯಲ್ಲಿ ಕೆಲಸ ಮಾಡಬಹುದು ಎಂಬ ವಿಷಯಗಳ ಬಗ್ಗೆ ಚರ್ಚೆ ನಡೆಸಿದರು. ನಂತರ ವಿಟಿಯು ಕುಲಪತಿ ಪ್ರೊ ವಿದ್ಯಾಶಂಕರ್ ಎಸ್., ವಿಟಿಯು ಟೆಲಿಕಾಮ್ ಸೆಂಟರ್ ಆಫ್ ಎಕ್ಸಲೆನ್ಸ್ ನ ನಿರ್ದೇಶಕ ಪ್ರೊ ಅಜಿತ್ ಪದ್ಯಾಣ ಹಾಗೂ ವಿಟಿಯುನ ಕಾರ್ಯಕಾರಿ ಪರಿಷತ್‌ನ ಮಾಜಿ ಸದಸ್ಯ ಸಂಜೀವ ಕುಬಕಡ್ಡಿ ಹಾಜರಿದ್ದರು.
ಪ್ರೊ.ಅಜಿತ್ ಪದ್ಯಾಣ ಅವರು ಸುಳ್ಯ ತಾಲೂಕಿನ ಕುಕ್ಕುಜಡ್ಕದವರು. ಪ್ರೊ.ಅಜಿತ್ ಅವರು ರೋಟರಿ ಹೈಯರ್ ಪ್ರೈಮರಿ ಸ್ಕೂಲ್, ಸುಳ್ಯ ಹಾಗೂ ಸತ್ಯಸಾಯಿ ವಿದ್ಯಾಕೇಂದ್ರ ಚೊಕ್ಕಾಡಿಯ ಹಳೆ ವಿದ್ಯಾರ್ಥಿಯಾಗಿದ್ದಾರೆ. ಪ್ರೊ.ಅಜಿತ್ ಅವರು ಚೊಕ್ಕಾಡಿ ಪ್ರೌಢಶಾಲೆ ಕುಕ್ಕುಜಡ್ಕ ನಿವೃತ್ತ ಮುಖ್ಯೋಪಾಧ್ಯಾಯರಾದ ಪದ್ಯಾಣ ನಾರಾಯಣ ಭಟ್ ಅವರ ಪುತ್ರ.