ಹೊಳೆನರಸೀಪುರ – ಜನ ಕಲ್ಯಾಣ ಮತ್ತು ಸ್ವಾಭಿಮಾನ ಸಮಾವೇಶದ ಪೂರ್ವಭಾವಿ ಸಭೆ…
ಹಾಸನ: ಜಿಲ್ಲೆಯ ರಾಜಕೀಯ ಜಿದ್ದಾಜಿದ್ದಿನ ಕ್ಷೇತ್ರವಾದ ಹೊಳೆನರಸೀಪುರ ವಿಧಾನಸಭಾ ಕ್ಷೇತ್ರದ ಹೊಳೆನರಸೀಪುರ ಬ್ಲಾಕ್ ನಲ್ಲಿ ಅಧ್ಯಕ್ಷರಾದ ಲಕ್ಷ್ಮಣ್ ಅವರ ಅಧ್ಯಕ್ಷತೆಯಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಟಿ ಎಂ ಶಾಹಿದ್ ತೆಕ್ಕಿಲ್ ಅವರ ನೇತೃತ್ವದಲ್ಲಿ ಪ್ರವಾಸಿ ಮಂದಿರದಲ್ಲಿ ಬ್ಲಾಕ್ ಪದಾಧಿಕಾರಿಗಳ ಸಭೆ ನಡೆಸಿ, ಡಿ. 5 ರಂದು ಹಾಸನದಲ್ಲಿ ನಡೆಯುವ ಜನ ಕಲ್ಯಾಣ ಮತ್ತು ಸ್ವಾಭಿಮಾನ ಸಮಾವೇಶ, ಪಕ್ಷ ಸಂಘಟನೆ, ಮುಂದಿನ ಪುರಸಭೆ, ತಾಲ್ಲೂಕ್ ಮತ್ತು ಜಿಲ್ಲಾ ಪಂಚಾಯತ್ ಚುನಾವಣೆ ಬಗ್ಗೆ ಮತ್ತು ಇತರ ಹಲವಾರು ವಿಷಯಗಳ ಬಗ್ಗೆ ಚರ್ಚಿಸಿ, ಮುಂದೆ ಹೆಚ್ಚು ಕ್ರಿಯಾಶೀಲರಾಗಿ ಪಕ್ಷದ ಎಲ್ಲ ನಾಯಕರು, ಕಾರ್ಯಕರ್ತರು ತೊಡಗಿಸಿಕೊಳ್ಳಲು ಸೂಚಿಸಿದರು.
ಉಸ್ತುವಾರಿಯಾಗಿ ಹೊಳೆನರಸೀಪುರಕ್ಕೆ ಬಂದ ಟಿ ಎಂ ಶಾಹಿದ್ ತೆಕ್ಕಿಲ್ ಅವರನ್ನು ಬ್ಲಾಕ್ ಅಧ್ಯಕ್ಷರಾದ ಲಕ್ಷ್ಮಣ್ ಮತ್ತು ಪಕ್ಷದ ಪದಾಧಿಕಾರಿಗಳು ಆತ್ಮೀಯವಾಗಿ ಸ್ವಾಗತಿಸಿದರು.