ಹೊಳೆನರಸೀಪುರ- ಜನಕಲ್ಯಾಣ ಸ್ವಾಭಿಮಾನಿ ಸಮಾವೇಶ ಯಶಸ್ವಿಗೊಳಿಸಲು ಮನವಿ…

ಹೊಳೆನರಸೀಪುರ: ಶೋಷಣೆಗೆ ಒಳಗಾದ, ತುಳಿತಕ್ಕೆ ಒಳಗಾದ, ನೊಂದವರಿಗೆ ಶಕ್ತಿ ತುಂಬುವ ಸಲುವಾಗಿ ಹಾಗೂ ನಮ್ಮ ಕಾಂಗ್ರೆಸ್ ನೇತೃತ್ವದ ಸರ್ಕಾರದ ಗ್ಯಾರಂಟಿ ಯೋಜನೆಗಳು ಸೇರಿದಂತೆ ಹಲವು ಜನಪರ ಕಾರ್ಯಕ್ರಮಗಳ ಕುರಿತು ಅರಿವು ಮೂಡಿಸುವ ಉದ್ದೇಶದಿಂದ ಹಾಸನದಲ್ಲಿ ಡಿ.5 ರಂದು ಕಾಂಗ್ರೆಸ್ ಪಕ್ಷದ ವತಿಯಿಂದ ಹಮ್ಮಿಕೊಂಡಿರುವ ಜನಕಲ್ಯಾಣ ಸ್ವಾಭಿಮಾನಿ ಸಮಾವೇಶಕ್ಕೆ ಸಹಸ್ರಾರು ಸಂಖ್ಯೆಯಲ್ಲಿ ಸ್ವಾಭಿಮಾನಿ ಬಂಧುಗಳು ಹೊರಡುವುದರ ಮೂಲಕ ಸಮಾವೇಶದ ಯಶಸ್ವಿಗೆ ಕಾರಣಿಭೂತರಾಗಬೇಕು ಎಂದು ಕರ್ನಾಟಕ ರಾಜ್ಯ ಪ್ರದೇಶ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿ ಹಾಗೂ ಹೊಳೆನರಸೀಪುರ ಉಸ್ತುವಾರಿ ಆದಂತಹ ಟಿ.ಎಂ. ಶಾಹಿದ್ ತೆಕ್ಕಿಲ್ ಪತ್ರಿಕಾಗೋಷ್ಠಿಯಲ್ಲಿ ವಿನಂತಿಸಿದ್ದಾರೆ.
ಹಾಸನ ಜಿಲ್ಲೆಯ ಸಂಸದರಾದ ಶ್ರೇಯಸ್ ಎಂ ಪಟೇಲ್ ಅವರು ಹಾಸನ ಜಿಲ್ಲೆಯ ಸಮಗ್ರ ಅಭಿವೃದ್ಧಿ ಸೇರಿದಂತೆ ಜನಸಾಮಾನ್ಯರ ಕಷ್ಟಗಳಿಗೆ ಹಾಗೂ ನೋವುಗಳಿಗೆ ಮತ್ತು ಸಮಸ್ಯೆಗಳಿಗೆ ಹಗಲಿರುಳು ಶ್ರಮಿಸುತ್ತಿದ್ದು, ಪಕ್ಷ ಸಂಘಟನೆಗೆ ವಿಶೇಷವಾಗಿ ಕಾಳಜಿ ವಹಿಸಿದ್ದಾರೆ ಎಂದು ತಿಳಿಸಿದ ಅವರು ಮಾಜಿ ಪ್ರಧಾನಿಯ ಕುಟುಂಬದವರು ಅವರ ಕುಟುಂಬ ಕಲ್ಯಾಣ ಮಾಡುತ್ತಿದ್ದು ನಮ್ಮ ಸರ್ಕಾರ ಜನ ಕಲ್ಯಾಣ ಮಾಡುತ್ತಿದೆ ಎಂದರು.
ಗ್ಯಾರಂಟಿ ಕಾರ್ಯಕ್ರಮಗಳು ಇಡೀ ರಾಜ್ಯದ ಕೋಟ್ಯಂತರ ನಾಗರೀಕರ ಮನ್ನಣೆಗೆ ಪಾತ್ರವಾಗಿದೆ. ಜನಬೆಂಬಲ ಇರುವ ಜಾತ್ಯತೀತ ನಾಯಕರಾಗಿರುವ ನಮ್ಮ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಾಯಕತ್ವ ಇಡೀ ದೇಶ ಮೆಚ್ಚುವಂತದ್ದು. ಮಾಜಿ ಪ್ರಧಾನಿಯ ಕ್ಷೇತ್ರದಲ್ಲಿ ಮೂಲಭೂತ ಸವಲತ್ತಿನ ಕೊರತೆ ಎದ್ದು ಕಾಣುತ್ತಿದ್ದು ಈ ಕುಟುಂಬದವರಿಗೆ ರಾಜಕೀಯವಾಗಿ ಈ ಕ್ಷೇತ್ರದ ಮತದಾರರು ತಕ್ಕ ಪಾಠ ಕಲಿಸಲಿದ್ದಾರೆ ಎಂದರು.
ಕಾಂಗ್ರೆಸ್ ಸರ್ಕಾರ ಐದು ವರ್ಷಗಳ ಅವಧಿಯನ್ನು ಯಶಸ್ವಿಯಾಗಿ ಪೂರೈಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಅವರು ಸ್ಥಳೀಯ ಶಾಸಕರ ಏಕ ಪಕ್ಷೀಯ ನಡವಳಿಕೆಯಿಂದ ಜನ ಬೇಸತ್ತಿದ್ದು ಅಧಿಕಾರಿಗಳು, ಗುತ್ತಿಗೆದಾರರು, ಅವರ ಮುಷ್ಟಿಯಲ್ಲಿ ಸಿಲುಕಿ ನಲುಗುವಂತಹ ಪರಿಸ್ಥಿತಿ ಈ ಕ್ಷೇತ್ರದಲ್ಲಿ ನಿರ್ಮಾಣವಾದಂತಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್ ಟಿ ಲಕ್ಷ್ಮಣ ಮಾತನಾಡಿ ಜನ ಕಲ್ಯಾಣ ಸಮಾವೇಶಕ್ಕೆ ನಮ್ಮ ಹೊಳೆನರಸೀಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಿಂದ ನಮ್ಮ ಸಂಸದರ ನಾಯಕತ್ವದಲ್ಲಿ ಸುಮಾರು 10000ಕ್ಕೂ ಹೆಚ್ಚು ಸ್ವಾಭಿಮಾನಿಗಳು ಹೊರಡಲಿದ್ದು ಇದಕ್ಕೆ ಪೂರಕವಾಗಿ ಪ್ರತಿ ಗ್ರಾಮ ಮಟ್ಟದಲ್ಲಿ ನಮ್ಮ ಸರ್ಕಾರದ ಗ್ಯಾರಂಟಿ ಯೋಜನೆ ಪಡೆಯುತ್ತಿರುವ ಫಲಾನುಭವಿಗಳಿಗೆ ಅರಿವು ಮೂಡಿಸುವುದರ ಮೂಲಕ ಜನಕಲ್ಯಾಣ ಕಾರ್ಯಕ್ರಮಕ್ಕೆ ಸಹಸ್ರಾರು ಸಂಖ್ಯೆಯಲ್ಲಿ ಹೊರಡುವಂತೆ ಈಗಾಗಲೇ ಜಾಗೃತಿ ಮೂಡಿಸುವತ್ತ ನಾವುಗಳೆಲ್ಲರೂ ನಮ್ಮಗಳನ್ನು ಸಕ್ರಿಯವಾಗಿ ತೊಡಗಿಸಿ ಕೊಂಡಿದ್ದೇವೆ ಎಂದು ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಕೆಡಿಪಿ ಸದಸ್ಯ ಕೆಕೆ ಲೋಕೇಶ್, ಕಾಂಗ್ರೆಸ್ ಮುಖಂಡರುಗಳಾದ ಮಂಜೇಗೌಡ, ಮಹಮ್ಮದ್ ಬಾಬರ್ ಅಲಿ, ಸುದರ್ಶನ್ ಬಾಬು, ಇತರರು ಹಾಜರಿದ್ದರು.

whatsapp image 2024 12 03 at 6.11.41 pm

Sponsors

Related Articles

Back to top button