ಶ್ರೀ ಗಣೇಶ್ ಕೊಲೆಕಾಡಿ ಅನಾರೋಗ್ಯ – ಪಟ್ಲ ಫೌಂಡೇಶನ್ ವತಿಯಿಂದ ಸಹಾಯ…

ಮಂಗಳೂರು: ಯಕ್ಷಗಾನ ಪ್ರಪಂಚ ಕಂಡ ಅಪ್ರತಿಮ ವಿದ್ವಾಂಸ ಶ್ರೀ ಗಣೇಶ್ ಕೊಲೆಕಾಡಿ ಅವರ ಆರೋಗ್ಯದ ತುರ್ತು ಪರಿಸ್ಥಿತಿಯನ್ನು ಮನಗಂಡು ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಮಂಗಳೂರಿನ ಕೇಂದ್ರೀಯ ಸಮಿತಿಯ ಪದಾಧಿಕಾರಿಗಳು ಡಿ. 3 ರಂದು ಶ್ರೀಯುತರ ಮನೆಗೆ ಭೇಟಿ ನೀಡಿ, ಫೌಂಡೇಶನ್ ವತಿಯಿಂದ ರೂ. 50 ಸಾವಿರ ನೀಡಿದರು.
ಈ ಮೊದಲು ಕೂಡ ಪಟ್ಲ ಫೌಂಡೇಶನ್ ಸುಮಾರು 2 ಲಕ್ಷಕ್ಕಿಂತಲೂ ಹೆಚ್ಚು ಹಣವನ್ನು ಶ್ರೀಯುತ ರಿಗೆ ಸಹಕಾರ ನೀಡಿದೆ. ಅಷ್ಟೇ ಅಲ್ಲದೆ ಕಳೆದ 6 ವರ್ಷಗಳಿಂದ ಪ್ರತಿ ತಿಂಗಳು 1000 ಚಿಕಿತ್ಸಾ ವೆಚ್ಚಕ್ಕಾಗಿ ಯಕ್ಷಧ್ರುವ ಫೌಂಡೇಶನ್ ನೀಡುತ್ತಿದೆ.
ಪಟ್ಲ ಫೌಂಡೇಶನ್ ಸ್ಥಾಪಕಾಧ್ಯಕ್ಷರಾದ ಪಟ್ಲ ಸತೀಶ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಶ್ರೀ ಪುರುಷೋತ್ತಮ್ ಭಂಡಾರಿ, ಕೋಶಾಧಿಕಾರಿ ಶ್ರೀ ಸಿ ಎ ಸುದೇಶ್ ಕುಮಾರ್ ರೈ , ಶ್ರೀ ಕದ್ರಿ ನವನೀತ್ ಶೆಟ್ಟಿ, ಶ್ರೀ ಪ್ರದೀಪ್ ಆಳ್ವ ಕದ್ರಿ, ಡಾ. ಪ್ರಖ್ಯಾತ್ ಶೆಟ್ಟಿ ಅಳಿಕೆ ಹಾಗೂ ಯಕ್ಷಗಾನ ಅಕಾಡೆಮಿ ಸದಸ್ಯರಾದ ಶ್ರೀ ವಿಜಯ್ ಕುಮಾರ್ ಮೊಯ್ಲೊಟ್ಟು ಉಪಸ್ಥಿತರಿದ್ದರು.
ಈ ಕಲಾವಿದರು ಕಳೆದ 18 ವರ್ಷಗಳಿಂದ ತೀರಾ ಅನಾರೋಗ್ಯ ದಿಂದ ಇದ್ದಾರೆ. ತಾಯಿ ಕೂಡ ತುಂಬಾ ಪ್ರಾಯದವರಗಿದ್ದು, ಮನೆಯಲ್ಲಿ ಊಟಕ್ಕೂ ಮದ್ದಿಗೂ ಪರದಾಡುವ ಸ್ಥಿತಿ,ಬೇರೆ ಯಾರೂ ಕುಟುಂಬಸ್ಥರು ಇವರಿಗೆ ಇಲ್ಲ.ಇವರು ಕಲಾ ವಲಯಕ್ಕೆ ನೀಡಿದ ಕೊಡುಗೆ ಅಪಾರ.ಇಂತಹ ವಿದ್ವಾಂಸರ ಸ್ಥಿತಿ, ಅವರ ತಾಯಿಯ ಸ್ಥಿತಿ ಚಿಂತಾಜನಕ.
ತೀರಾ ಸಂಕಷ್ಟದಲ್ಲಿರುವ ಗಣೇಶ್ ಪೂಜಾರಿ ಕೊಲೆಕಾಡಿ ಕಲಾವಿದನ ಕಷ್ಟಕ್ಕೆ ಎಲ್ಲರೂ ಕೈಜೋಡಿಸಬೇಕಾಗಿದೆ.
ಅವರ ಫೋನ್ ಪೇ ಅಥವಾ ಗೂಗಲ್ ಪೇ ನಂಬರ್: 9482130381

Sponsors

Related Articles

Back to top button