ಮಾಣಿ ಗ್ರಾಮ ಪಂಚಾಯತ್ ನ ವಿಶೇಷ ಕಾಳಜಿ…

ಬಂಟ್ವಾಳ: ತಾಲೂಕಿನ ಪ್ರತಿಷ್ಠಿತ ಮಾಣಿ ಗ್ರಾಮ ಪಂಚಾಯತ್ ನ ಅಧ್ಯಕ್ಷ ಬಾಲಕೃಷ್ಣ ಆಳ್ವ ಕೊಡಾಜೆ ಮತ್ತು ಸರ್ವಸದಸ್ಯರು ತೆಗೆದುಕೊಂಡ ತೀರ್ಮಾನವೊಂದು ಜನಮೆಚ್ಚುಗೆಗೆ ಪಾತ್ರವಾಗಿದೆ.
ಕೊರೋನ ಸಂಕಷ್ಟದ ಸಮಯದಲ್ಲಿ ನ್ಯಾಯಬೆಲೆ ಅಂಗಡಿಯಿಂದ ಆಹಾರ ಸಾಮಗ್ರಿಗಳನ್ನು ಸಾಗಿಸಲು ಜನರು ಕಷ್ಟಪಡುತ್ತಿರುವುದನ್ನು ಮನಗಂಡ ಇವರು ತನ್ನ ಸಹಪಾಠಿಗಳಾದ ಸುದೀಪ್ ಕುಮಾರ್ ಶೆಟ್ಟಿ, ಇಬ್ರಾಹಿಂ.ಕೆ ಮಾಣಿ ಮತ್ತು ಮೆಲ್ವಿನ್ ಕಿಶೋರ್ ಮಾರ್ಟಿಸ್ ಇವರಲ್ಲಿ ವಿಚಾರ ವಿನಿಮಯ ಮಾಡಿ ಸಾರ್ವಜನಿಕರಿಗೆ ಪಂಚಾಯತ್ ವತಿಯಿಂದ ಉಚಿತ ವಾಹನದ ವ್ಯವಸ್ಥೆಯನ್ನು ಮಾಡಲು ತೀರ್ಮಾನ ತೆಗೆದುಕೊಂಡು ತಕ್ಷಣ ಕಾರ್ಯಪ್ರವೃತ್ತರಾದರು.
ಮಾಣಿ ಗ್ರಾಮ ಪಂಚಾಯತ್ ನ ಅಧ್ಯಕ್ಷ ಮತ್ತು ಸದಸ್ಯರ ಈ ತೀರ್ಮಾನ ಬಹಳಷ್ಟು ಜನಮೆಚ್ಚುಗೆಯನ್ನು ಪಡೆದು ಜಿಲ್ಲೆಯಲ್ಲಿಯೇ ಮಾದರಿ ಕಾರ್ಯ ಎನ್ನುವ ಹಾಗೆ ಬಿಂಬಿತವಾಗಿದೆ. ಇನ್ನಷ್ಟು ಜನಮೆಚ್ಚುಗೆಯ ಕಾರ್ಯಗಳು ನಡೆಯಲಿ ಎನ್ನುವ ಹಾಗೆ ಮಾತುಗಳು ಕೇಳಿಬರುತ್ತಿವೆ