ಕೇರಳ ಪ್ರದೇಶ ಕಾಂಗ್ರೇಸ್ ಸಮಿತಿಗೆ ಸಾಂಸ್ಥಿಕ ಚುನಾವಣೆ…

ತಿರುವನಂತಪುರಂ: ಎಐಸಿಸಿ ಯ ಮುಖ್ಯ ಚುನಾವಣಾ ಪ್ರಾಧಿಕಾರದ ಅಧಿಸೂಚನೆಯನ್ವಯ ಕೇರಳ ಪ್ರದೇಶ ಕಾಂಗ್ರೇಸ್ ಸಮಿತಿಗೆ ಸಾಂಸ್ಥಿಕ ಚುನಾವಣೆಯ ನಿಮಿತ್ತ ಇಂದು ತಿರುವನಂತಪುರಂನ ಇಂದಿರಾ ಭವನದಲ್ಲಿ ನಡೆದ ಕೆಪಿಸಿಸಿ ಅಧ್ಯಕ್ಷರ ಹಾಗು ಪದಾಧಿಕಾರಿಗಳ ಚುನಾವಣೆ ದಿನಾಂಕ ನಿಗದಿಯಾಗಿತ್ತು. ಸದ್ರಿ ಚುನಾವಣೆಗೆ ಆಗಮಿಸಿದ ಕೆಪಿಸಿಸಿ ಚುನಾವಣಾಧಿಕಾರಿ ಡಾ. ಜಿ. ಪರಮೇಶ್ವರ್ ಸಹಾಯಕ ಚುನಾವಣಾಧಿಕಾರಿ ಅರಿವಶಗನ್ ಅವರಲ್ಲಿ ಪಿಸಿಸಿ ಸದಸ್ಯರು ಚುನಾವಣೆ ನಡೆಸದಂತೆ ಹಾಗೂ ಎಐಸಿಸಿ ಅಧ್ಯಕ್ಷರಿಗೆ ನೂತನ ರಾಜ್ಯ ಅಧ್ಯಕ್ಷರನ್ನು ಪದಾಧಿಕಾರಿಗಳನ್ನು , ಎಐಸಿಸಿ ಸದಸ್ಯರನ್ನು ನೇಮಿಸುವ ಅಧಿಕಾರ ನೀಡುವ ಪ್ರಮೇಯವನ್ನು ಮಾಜಿ ಅಧ್ಯಕ್ಷರು ಹಾಗು ಮಾಜಿ ವಿರೋಧ ಪಕ್ಷದ ನಾಯಕರಾದ ರಮೇಶ್ ಚೆನ್ನಿತಲ ಮಂಡಿಸಿದರು. ಅದನ್ನು ವಿರೋಧ ಪಕ್ಷದ ನಾಯಕ ವಿ ಡಿ ಸತೀಶನ್ ಮತ್ತು ಮಾಜಿ ಪಿಸಿಸಿ ಅಧ್ಯಕ್ಷರುಗಳಾದ ಕೆ ಮುರಳೀಧರನ್ ಎಂ ಎಂ ಹಸ್ಸನ್, ಎ ಕೆ ಆಂಟನಿ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ ಸಿ ವೇಣುಗೋಪಾಲ್ ಅನುಮೋದಿಸಿ ಎಐಸಿಸಿ ಅಧ್ಯಕ್ಷರಿಗೆ ಸಂಪೂರ್ಣ ಅಧಿಕಾರ ನೀಡಿ ಚುನಾವಣೆಯ ಪ್ರಕ್ರಿಯೆಯನ್ನು ಮುಗಿಸಲಾಯಿತು. ಎಐಸಿಸಿ ಪ್ರಧಾನ ಕಾರ್ಯದರ್ಶಿ ತಾರಿಕ್ ಅನ್ವರ್, ಮಲಪ್ಪುರಂ ಜಿಲ್ಲಾ ಚುನಾವಣಾಧಿಕಾರಿ ಟಿ ಎಂ ಶಾಹೀದ್ ತೆಕ್ಕಿಲ್ ಉಪಸ್ಥಿರಿದ್ದರು.