ಪೇರಡ್ಕ ಉರೂಸ್ ಸಮಾರೋಪ: ಧರ್ಮದ ಮೂಲ ಆಶಯ ಮೀರದಿರಿ – ಸೈಯ್ಯದ್ ಝೈನುಲ್ ಆಬಿದೀನ್ ತಂಙಳ್…
ಸುಳ್ಯ: ನಮ್ಮ ಜೀವನದುದ್ದಕ್ಕೂ ಇಸ್ಲಾಂ ಧರ್ಮದ ಮೂಲ ಆಶಯ ಮತ್ತು ಚೌಕಟ್ಟು ಮೀರಬಾರದು, ಈ ಪವಿತ್ರವಾದ ಪೇರಡ್ಕ ಮಣ್ಣಿನಲ್ಲಿ ಅಂತ್ಯ ವಿಶ್ರಾಂತಿ ಹೊಂದಿರುವ ಅಲ್ಲಾಹ್ ನ ಇಷ್ಟ ದಾಸರಾದ ವಲಿಯುಲ್ಲಾಹಿ ಯವರ ಪುಣ್ಯ ಕಾರ್ಯದಲ್ಲಿ ನಾವೆಲ್ಲರೂ ಭಾಗಿಯಾಗಿ ಪರಲೋಕದ ವಿಜಯಕ್ಕಾಗಿ ದುಡಿಯೋಣವೆಂದು ಬಹು| ಸೆಯ್ಯದ್ ಝೈನುಲ್ ಆಬಿದೀನ್ ತಂಙಳ್ ದುಗಲಡ್ಕ ಅವರು ಪೇರಡ್ಕದ ತೆಕ್ಕಿಲ್ ಮಹಮ್ಮದ್ ಹಾಜಿ ವೇದಿಕೆಯಲ್ಲಿ ನಡೆದ ಉರೂಸಿನ ಸಮಾರೋಪ ಸಮಾರಂಭದಲ್ಲಿ ಸಮಾರೋಪ ಭಾಷಣ ಮಾಡಿದರು.
ಧಾರ್ಮಿಕ ಉಪನ್ಯಾಸವನ್ನು ಪೇರಡ್ಕ ಮುಹಿದ್ಧೀನ್ ಜುಮಾಮಸೀದಿಯ ಖತೀಬರಾದ ರಿಯಾಝ್ ಫೈಝಿ ನೀಡಿದರು. ಅಧ್ಯಕ್ಷತೆಯನ್ನು ಮಸೀದಿಯ ಗೌರವಾಧ್ಯಕ್ಷ ಹಾಗೂ ತೆಕ್ಕಿಲ್ ಪ್ರತಿಷ್ಠಾನದ ಸ್ಥಾಪಕಾಧ್ಯಕ್ಷ ಟಿ.ಎಂ.ಶಹೀದ್ ತೆಕ್ಕಿಲ್ ವಹಿಸಿದ್ದರು. ಪೇರಡ್ಕ ಜಮಾಅತ್ ಅಧ್ಯಕ್ಷ ಆಲಿಹಾಜಿ, ಸಂಪಾಜೆ ಗ್ರಾಮ ಪಂಚಾಯತ್ ಅಧ್ಯಕ್ಷ ಜಿ.ಕೆ.ಹಮೀದ್ ಗೂನಡ್ಕ, ಮಸೀದಿಯ ಮಾಜಿ ಉಪಾಧ್ಯಕ್ಷ ಪಾಂಡಿ ಅಬ್ಬಾಸ್, ಕೋಶಾಧಿಕಾರಿ ಪಿ.ಕೆ.ಉಮ್ಮರ್, ಮಾಜಿ ಅಧ್ಯಕ್ಷರುಗಳಾದ ಟಿ.ಎಂ.ಬಾಬಾ ಹಾಜಿ ತೆಕ್ಕಿಲ್ , ಹಾಜಿ ಇಬ್ರಾಹಿಂ ಕರಾವಳಿ, ಸಜ್ಜನ ಪ್ರತಿಷ್ಠಾನದ ಅಧ್ಯಕ್ಷ ಡಾ| ಉಮ್ಮರ್ ಬೀಜದಕಟ್ಟೆ, ಜಮಾಅತ್ ಕಾರ್ಯದರ್ಶಿ ಹಾಜಿ ಟಿ.ಎಂ. ಅಬ್ದುಲ್ ರಜಾಕ್, ಸಹಾಯಕ ಅದ್ಯಾಪಕ ನೂರುದ್ಧೀನ್ ಅನ್ಸಾರಿ, SKSSF ಅಧ್ಯಕ್ಷ ಹಾಜಿ ಸಾಜಿದ್ ಅಝ್‌ಹರಿ, MRDA ಅಧ್ಯಕ್ಷ ಜಾಕೀರ್‌ಹುಸೈನ್, ಮುನೀರ್‌ದಾರಿಮಿ ಗೂನಡ್ಕ, ಅಬ್ದುಲ್ ಖಾದರ್ ಮೊಟ್ಟೆಂಗಾರ್, ಮಹಮ್ಮದ್ ಕುಂಞ ಪೇರಡ್ಕ, ಇಬ್ರಾಹಿಂ ಸೆಟ್ಯಡ್ಕ ಮೊದಲಾದವರು ಉಪಸ್ಥಿತರಿದ್ದರು. ಅನ್ನದಾನದೊಂದಿಗೆ ಉರೂಸ್ ಕಾರ್ಯಕ್ರಮ ಸಮಾಪ್ತಿಗೊಂಡಿತು.