ಮುಖ್ಯಮಂತ್ರಿ, ಸಚಿವರು, ಶಾಸಕರ ವೇತನ-ಭತ್ಯೆ 50 % ಹೆಚ್ಚಳ…
ಬೆಂಗಳೂರು: ಕಳೆದ ಕೆಲವು ದಿನಗಳಿಂದ ವಿಧಾನಸಭೆಯಲ್ಲಿ ನಡೆಯುತ್ತಿರುವ ಗದ್ದಲ, ಕೋಲಾಹಲದ ನಡುವೆ ಇಂದು ಸದನದಲ್ಲಿ ಕರ್ನಾಟಕ ಸಚಿವರ ವೇತನ ಮತ್ತು ಭತ್ಯೆ(ತಿದ್ದುಪಡಿ)ಮಸೂದೆ 2022ಕ್ಕೆ ಯಾವುದೇ ಸದ್ದು ಗದ್ದಲವಿಲ್ಲದೆ ಅಂಗೀಕಾರ ನೀಡಲಾಗಿದೆ.
ಈ ತಿದ್ದುಪಡಿಯಿಂದಾಗಿ ಮುಖ್ಯಮಂತ್ರಿಗಳು,ಇತರ ಸಚಿವರು, ವಿಧಾನಸಭೆ, ವಿಧಾನ ಪರಿಷತ್ ಎರಡೂ ಸದನಗಳ ಶಾಸಕರ, ಸ್ಪೀಕರ್, ಉಪ ಸ್ಪೀಕರ್, ಸಭಾಪತಿ, ಉಪ ಸಭಾಪತಿಗಳ ಸಂಬಳ ಶೇಕಡಾ 50ರಷ್ಟು ಹೆಚ್ಚಾಗಲಿದೆ. ಜತೆಗೆ ನಿವೃತ್ತಿ ವೇತನ ತಿದ್ದುಪಡಿ ವಿಧೇಯಕ ಅಂಗೀಕಾರ ಮಾಡಲಾಗಿದೆ. ಸದನ ಸದಸ್ಯರ ಮನೆ ಬಾಡಿಗೆ, ಪ್ರಯಾಣ ಖರ್ಚುವೆಚ್ಚ ಮತ್ತು ಇತರ ಭತ್ಯೆಗಳ ಸೌಲಭ್ಯವೂ ಹೆಚ್ಚು ಸಿಗಲಿದೆ.