ರಾಜ್ಯ ಅಲ್ಪಸಂಖ್ಯಾತ ಕಾಂಗ್ರೆಸ್ ಘಟಕದ ಕಾರ್ಯದರ್ಶಿಯಾಗಿ ಅಬೂಸಾಲಿ ಗೂನಡ್ಕ ನೇಮಕ…
ಸುಳ್ಯ: ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಕಾಂಗ್ರೆಸ್ ಘಟಕದ ಕಾರ್ಯದರ್ಶಿಯಾಗಿ ಸಂಪಾಜೆ ಗ್ರಾಮ ಪಂಚಾಯತ್‌ನ ಹಿರಿಯ ಸದಸ್ಯ ಅಬೂಸಾಲಿ ಗೂನಡ್ಕ ಅವರನ್ನು ರಾಷ್ಟ್ರೀಯ ಅಲ್ಪಸಂಖ್ಯಾತ ಕಾಂಗ್ರೆಸ್ ಘಟಕದ ಅಧ್ಯಕ್ಷ ಇಮ್ರಾನ್ ಪ್ರತಾಫ್ ಗರ್ ಎಂ ಪಿ ಯವರ ಅನುಮೋದನೆಯೊಂದಿಗೆ ರಾಜ್ಯ ಅಲ್ಪಸಂಖ್ಯಾತ ಕಾಂಗ್ರೆಸ್ ಘಟಕದ ಅಧ್ಯಕ್ಷ ಅಬ್ದುಲ್ ಜಬ್ಬಾರ್ ಎಂ ಎಲ್ ಸಿ ರವರು ನೇಮಕಗೊಳಿಸಿರುತ್ತಾರೆ.
ಅಬೂಸಾಲಿ ಅವರು ಕೊಡಗು ಜಿಲ್ಲಾ ಎನ್.ಎಸ್.ಯು.ಐ ನ ಪ್ರಧಾನ ಕಾರ್ಯದರ್ಶಿಯಾಗಿ, ಮಡಿಕೇರಿ ಜಿಲ್ಲಾ ಯುವ ಕಾಂಗ್ರೆಸ್ ನ ಪ್ರಧಾನ ಕಾರ್ಯಾದರ್ಶಿಯಾಗಿ ,ಬ್ಲಾಕ್ ಕಾಂಗ್ರೆಸ್ ನ ಕಾರ್ಯದರ್ಶಿಯಾಗಿ, ಮದೆನಾಡು ವಲಯ ಕಾಂಗ್ರೆಸ್ ನ ಅಧ್ಯಕ್ಷರಾಗಿ, ಎರಡು ಬಾರಿ ಮದೆನಾಡು ಗ್ರಾಮ ಪಂಚಾಯತ್ ಸದಸ್ಯರಾಗಿ ಹಾಗೂ ಒಂದು ಅವಧಿಗೆ ಗ್ರಾಮ ಪಂಚಾಯತ್‌ನ ಅಧ್ಯಕ್ಷರಾಗಿ ಸೇವೆ ಸಲ್ಲಿಸಿರುತ್ತಾರೆ. ಮದೆನಾಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನಿರ್ಧೇಶಕರಾಗಿ ಸೇವೆ ಸಲ್ಲಿಸಿದ್ದಾರೆ. ಮಲೆನಾಡು ಯುವಕ ಸಂಘ ಕಾಟಕೇರಿ ಇದರ ಸ್ಥಾಪಕ ಅಧ್ಯಕ್ಷರಾಗಿ ಏಳು ವರ್ಷ ದುಡಿದಿದ್ದು, ಕೊಡಗು ಜಿಲ್ಲಾ ಯುವ ಪ್ರಶಸ್ತಿ ವಿಜೇತರಾಗಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಸಂಪಾಜೆ ಗ್ರಾಮ ಪಂಚಾಯತ್‌ನಲ್ಲಿ ಎರಡು ಬಾರಿ ಸದಸ್ಯರಾಗಿ, ಪೇರಡ್ಕ ಮುಹಿದ್ದಿನ್ ಜುಮಾ ಮಸೀದಿ ಹಾಗೂ ಗೂನಡ್ಕ ಬದ್ರಿಯ ಜುಮಾ ಮಸೀದಿಯ ಮಾಜಿ ಕಾರ್ಯದರ್ಶಿಯಾಗಿ , ಸಂಪಾಜೆ ಗ್ರಾಮದ ಗೂನಡ್ಕ ಎಫ್ ವೈ ಸಿ ಯೂತ್ ಕ್ಲಬ್‌ನ ಸ್ಥಾಪಕ ಅಧ್ಯಕ್ಷರಾಗಿ, ಸಾಕ್ಷರ ಕಾವೇರಿ ಸಂಪನ್ಮೂಲ ವ್ಯಕ್ತಿಯಾಗಿ, ರಾಷ್ಟ್ರೀ ಯ ಸೇವಾ ಯೋಜನೆಯ ಸ್ವಯಂ ಸೇವಕರಾಗಿ, ಮಾದರಿ ಕೃಷಿಕನಾಗಿ ಅನೇಕ ಸಂಘ ಸಂಸ್ಥೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಸಾಮಾಜಿಕ ಹಾಗು ರಾಜಕೀಯ ಮುಖಂಡರಾಗಿದ್ದಾರೆ.
ಇವರ ನೇಮಕಕ್ಕೆ ಕಾಂಗ್ರೆಸ್ ಮುಖಂಡರಾದ ಕೆಪಿಸಿಸಿಯ ಟಿ.ಎಂ.ಶಾಹೀದ್ ತೆಕ್ಕಿಲ್ ಹಾಗೂ ರಾಜ್ಯ ಮಾನವ ಹಕ್ಕಗಳ ಹಾಗು ಕಾನೂನು ಘಟಕದ ಅಧ್ಯಕ್ಷ ಎ ಎಸ್ ಪೊನ್ನಣ್ಣನವರು ಶಿಫಾರಸ್ಸು ಮಾಡಿದ್ದರು . ಕೆಪಿಸಿಸಿ ಕಚೇರಿಯಲ್ಲಿ ಕಾರ್ಯಧ್ಯಕ್ಷರಾದ ಸಲೀಂ ಅಹ್ಮದ್ ರವರು ನೇಮಕಾತಿ ಆದೇಶ ಪತ್ರವನ್ನು ಅಬುಸಲಿ ಅವರಿಗೆ ಹಸ್ತಾಂತರಿಸಿದರು ಈ ಸಂದರ್ಭದಲ್ಲಿ ಟಿ ಎಂ ಶಾಹೀದ್ ತೆಕ್ಕಿಲ್, ಯುವ ಕಾಂಗ್ರೆಸ್ ಮುಖಂಡ ಅಯೂಬ್ ಚೇರೂರ್ ಗೂನಡ್ಕ ಉಪಸ್ಥಿತರಿದ್ದರು.