ಸುಳ್ಯ – 179ನೇ ಬಿಜೆಪಿ ಬೂತ್ ಅಧ್ಯಕ್ಷರ ಮನೆಯಲ್ಲಿ ನಾಮಫಲಕ ಅನಾವರಣ…

ಸುಳ್ಯ: ಕೇರ್ಪಳ ಕುರುಂಜಿಗುಡ್ಡೆ ಹಾಗೂ ಭಸ್ಮಡ್ಕಕ್ಕೆ ಒಳಪಟ್ಟ 179ನೇ ಬಿಜೆಪಿ ಬೂತ್ ಬೂತ್ ಸಮಿತಿ ಅಧ್ಯಕ್ಷರಾದ ದಯಾನಂದ ಕೇರ್ಪಳ ಇವರ ನಿವಾಸದಲ್ಲಿ ನಾಮಫಲಕ ಅನಾವರಣ ಕಾರ್ಯಕ್ರಮ ಅ.5 ರಂದು ನಡೆಯಿತು.
ಬಿಜೆಪಿ ಸುಳ್ಯ ಮಂಡಲ ಅಧ್ಯಕ್ಷರಾದ ಹರೀಶ್ ಕಂಜಿಪಿಲಿ ನಾಮಫಲಕ ಅನಾವರಣಗೊಳಿಸಿದರು. ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಸುಬೋದ್ ಶೆಟ್ಟಿ ಮೇನಾಲ, ಮಂಡಲ ಬಿಜೆಪಿ ಕಾರ್ಯದರ್ಶಿ ಮೋಹಿನಿ ನಾಗರಾಜ್, ನಗರ ಬಿಜೆಪಿ ಅಧ್ಯಕ್ಷರಾದ ಐ ಬಿ ಚಂದ್ರಶೇಖರ್, ಕಾರ್ಯದರ್ಶಿ ಜಿನ್ನಪ್ಪ ಪೂಜಾರಿ ಪಕ್ಷ ಸಂಘಟನೆ ಹಾಗೂ ಸರಕಾರದ ಯೋಜನೆಗಳನ್ನು ಜನರಿಗೆ ತಲುಪಿಸುವ ಬಗ್ಗೆ ಮಾರ್ಗದರ್ಶನ ನೀಡಿದರು.
ನಗರ ಪಂಚಾಯತ್ ಅಧ್ಯಕ್ಷರಾದ ವಿನಯ್ ಕಂದಡ್ಕ, ಮಂಡಲ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಸುನಿಲ್ ಕೇರ್ಪಳ, ನ. ಪಂ. ಸದಸ್ಯರಾದ ಸುಧಾಕರ್ ಕುರುಂಜಿ ಭಾಗ್, ನ. ಪಂ. ಮಾಜಿ ಸದಸ್ಯರಾದ ಸುಲೋಚನಾ ನಾರಾಯಣ, ಕೇಶವ ಪಾರೆಪ್ಪಾಡಿ, ಯತೀಶ್ ಕೇರ್ಪಳ, ರತ್ನಾವತಿ ಕುರುಂಜಿ ಗುಡ್ಡೆ, ದೀಕ್ಷಿತ್ ಕುರುಂಜಿಗುಡ್ಡೆ ಉಪಸ್ಥಿತರಿದ್ದರು.

17cb2bf8 347a 4381 9b3b 020be0ebf88f 300x141

Related Articles