ಎಸ್ ಎಸ್ ಎಫ್ ಗಾಂಧಿನಗರ ಶಾಖಾ ಪ್ರತಿಭೋತ್ಸವ ಮತ್ತು ಸನ್ಮಾನ ಕಾರ್ಯಕ್ರಮ…
ಸುಳ್ಯ: ನಿರೀಕ್ಷೆಗಳ ನೀಲ ನಕ್ಷೆ ಎಂಬ ದ್ಯೇಯ ವಾಕ್ಯದೊಂದಿಗೆ ಕರ್ನಾಟಕ ರಾಜ್ಯ ಸುನ್ನಿ ಸ್ಟೂಡೆಂಟ್ ಫೆಡೆರೇಷನ್
ಎಸ್ ಎಸ್ ಎಫ್ ಪ್ರತಿಭೋತ್ಸವ, ಶಾಖಾ ಮಟ್ಟದಿಂದ ಹಿಡಿದು ರಾಜ್ಯ ಮಟ್ಟದ ವರೆಗೆ ಎರಡು ವರ್ಷಕ್ಕೊಮ್ಮೆ ನಡೆಯುವ ಪ್ರತಿಭೆಗಳ ಉತ್ಸವ ಗಾಂಧಿನಗರ ಶಾಖೆಯ ವತಿಯಿಂದ ಅ. 3 ರಂದು ಅನ್ಸಾರ್ ಕಾಂಪ್ಲೆಕ್ಸ್ ನಲ್ಲಿ ನಡೆಯಿತು.
ಕರ್ನಾಟಕ ರಾಜ್ಯದಲ್ಲಿಯೆ ಮೊಟ್ಟಮೊದಲ ಬಾರಿಗೆ ಶಾಖಾ ಮಟ್ಟದಲ್ಲಿ ಪ್ರತಿಭೊತ್ಸವ ನಡೆಸಿದ ಕೀರ್ತಿಯು ಎಸ್ ಎಸ್ ಎಫ್ ಗಾಂಧಿನಗರ ಶಾಖೆಗೆ ದೊರಕಿದೆ.ಕಾರ್ಯಕ್ರಮವು ಬೆಳಗ್ಗೆ 10 ಗಂಟೆಗೆ ಸರಿಯಾಗಿ ಬದರ್ ಶುಹದಾಕಳೊಂದಿಗೆ ತವಸ್ಸುಲ್ ಬೈತ್ ಪಠಿಸಿ ದುವಾ ಮಾಡುವುದರ ಮೂಲಕ ಪ್ರಾರಂಭಿಸಲಾಯಿತು. ಶಾಖೆಯ ಪ್ರಧಾನ ಕಾರ್ಯದರ್ಶಿ ಸಿಯಾದ್ ಜಯನಗರ ಅತಿಥಿಗಳನ್ನು ಸ್ವಾಗತಿಸಿದರು. ಸೈಯದ್ ಕುಂಞಿಕೋಯ ತಂಙಲ್ ಸಅದಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಮುಹಿಯುದ್ದೀನ್ ಫ್ಯಾನ್ಸಿ, ಹಾಜಿ ಮಜೀದ್ ಜನತಾ, ಹನೀಫ್ ಮುಸ್ಲಿಯಾರ್ ಬೀಜಕೊಚ್ಚಿ, ನೌಶಾದ್ ಕೆರೆಮೂಲೆ, ಸಿದ್ದೀಕ್ ಬಿ ಎ ಭಾಗವಹಿಸಿದರು.
ಪುಟಾಣಿ ಮಕ್ಕಳ ಪ್ರತಿಭೆಯಿಂದ ವರ್ಣರಂಜಿತವಾದ ಕಾರ್ಯಕ್ರಮದಲ್ಲಿ ಸಾಧಕರಿಗೆ ಸನ್ಮಾನವೂ ನಡೆಯಿತು. ಶಾಖೆಗೆ ವೀಲ್ ಚೆಯರ್ ಮತ್ತು ಕಾಡು ಕಡಿಯುವ ಯಂತ್ರವನ್ನು ಕೊಡುಗೆಯಾಗಿ ನೀಡಿದ ತೆಕ್ಕಿಲ್ ಗ್ರಾಮೀಣಾಭಿವೃದ್ಧಿ ಪ್ರತಿಷ್ಠಾನ ( ರಿ ) ಇದರ ಸ್ಥಾಪಕಾಧ್ಯಕ್ಷರಾದ ಟಿ ಎಂ ಶಹೀದ್ ತೆಕ್ಕಿಲ್ ಮತ್ತು ಶಾಖೆಯೊಂದಿಗೆ ಹಲವಾರು ಯೋಜನೆಯಲ್ಲಿ ಸಹಕರಿಸಿದ ಅಬೂಬಕ್ಕರ್ ಸಿದ್ದೀಕ್ ಕಟ್ಟೆಕಾರ್ಸ್ ರವರಿಗೆ ಸನ್ಮಾನ ಮಾಡಲಾಯಿತು.ಹಾಗೂ ‘ಟ್ಯಾಲೆಂಟ್ ಮದ್ರಸ ಎಕ್ಸಲೆನ್ಸಿ ಅವಾರ್ಡ್ 2021’ ಪಡೆದ ಗಾಂಧಿನಗರ ಮದರಸ ವಿದ್ಯಾರ್ಥಿರಾದ ಖದೀಜತ್ ರುಹೈಮ ಎಸ್ ಎ, ಫಾತಿಮತ್ ಶೈಮಾ ಮತ್ತು ಫಾತಿಮತ್ ಶಿಬಾರಿಗೆ ಸನ್ಮಾನ ಮಾಡಲಾಯಿತು ಇವರ ಪರವಾಗಿ ಇವರ ಪೋಷಕರಾದ ಅಬ್ದುಲ್ ಖಾದರ್ ಪಾರೆ, ಮಜೀದ್ ಕೆ ಬಿ ಮತ್ತು ಹನೀಫ್ ಎಸ್ ಎಂ ಸನ್ಮಾನ ಸ್ವೀಕರಿಸಿದರು. ತೀರ್ಪುಗಾರರಾಗಿ ಅಬ್ದುಲ್ ಖಾದರ್ ಮುಸ್ಲಿಯಾರ್ ಎಡಪ್ಪಲಂ, ನೌಶಾದ್ ಮದನಿ ಮುಡಿಪು ಸಹಕರಿಸಿದರು.
ಕಾರ್ಯಕ್ರಮದಲ್ಲಿ ಆದಂ ಹಾಜಿ ಕಮ್ಮಾಡಿ, ಅಬ್ದುಲ್ ಶುಕೂರ್ ಹಾಜಿ, ಅಬ್ದುಲ್ ಹಮೀದ್ ಬೀಜಕೊಚ್ಚಿ, ಹಾಜಿ ಮುಸ್ತಫಾ ಜನತ, ಕೆ ಎಸ್ ಉಮ್ಮರ್, ಶರೀಫ್ ಕಂಠಿ, ಇಬ್ರಾಹಿಂ ಸಖಾಫಿ ಪುಂಡೂರ್, ಹಮೀದ್ ಸುಣ್ಣಮೂಲೆ, ಸಿದ್ದೀಕ್ ಹಿಮಾಮಿ ಪೈಂಬಚ್ಚಾಲ್, ಕಲಾಮ್ ಝುಹುರಿ ಬೆಳ್ಳಾರೆ, ಸಿದ್ದೀಕ್ ಗೂನಡ್ಕ, ರಹೂಫ್ ಮಂಡೆಕೋಲು, ನಿಝಾರ್ ಸಖಾಫಿ ಮುಡೂರ್, ಅಬ್ದುಲ್ ರಹ್ಮಾನ್ ಸಅದಿ ಕರ್ನೂರು, ಜುನೈದ್ ಎನ್ ಎ, ಹನೀಫ್ ಬಿ ಎಂ, ಅಬ್ದುಲ್ ರಶೀದ್ ಝೈನಿ, ಮುಖ್ತಾರ್ ಮೇನಾಲ, ಹನೀಫ ಬೀಜಕೊಚ್ಚಿ, ಆಬಿದ್ ಕಲ್ಲುಮುಟ್ಲು, ಇಜಾಝ್ ಗೂನಡ್ಕ, ಶಮೀರ್ ಡಿ ಎಚ್, ಶರೀಫ್ ಜಯನಗರ, ಕಮಾಲ್ ಎ ಬಿ, ಸಾದಿಕ್ ಪಿ ಜಿ, ಬಶೀರ್ ಕಲ್ಲುಮುಟ್ಲು, ನಾಫಿ ಕೆರೆಮೂಲೆ, ಆಝಾದ್ ಅಹಮ್ಮದ್, ಆರಿಫ್ ಬುಶ್ರಾ , ಹಾರಿಸ್ ಸಿ. ಎ ಉಪಸ್ಥಿತರಿದ್ದರು.
ಬೇಕಲ ಉಸ್ತಾದ್, ಆಲಿ ಕುಂಞಿ ಉಸ್ತಾದ್, ಎಡಪಾಲ ಉಸ್ತಾದ್, ಅಬ್ಬಾಸ್ ಹಾಜಿ ಕಟ್ಟೆಕಾರ್ಸ್, ಖಲಂದರ್ ಮಾಂಬ್ಳಿ, ಸತ್ತಾರ್ ಸಂಗಮ್ ಹಾಗೂ ಮರಣ ಹೊಂದಿದ ಎಲ್ಲಾ ಉಲಮಾ ಉಮರಾ ನಾಯಕ ಹೆಸರಿನಲ್ಲಿ ತಹ್ಲೀಲ್ ಹೇಳಿ ದುವಾ ನಡೆಸುವುದರ ಮೂಲಕ ಕಾರ್ಯಕ್ರಮವನ್ನು ಕೊನೆಗೊಳಿಸಲಾಯಿತು.