ತೆಕ್ಕಿಲ್ ಪ್ರತಿಷ್ಠಾನದ ವತಿಯಿಂದ ಪೌರಾಡಳಿತ ಮತ್ತು ಹಜ್ಜ್ ಸಚಿವ ರಹೀಂ ಖಾನ್ ಅವರಿಗೆ ಸನ್ಮಾನ…

ಸುಳ್ಯ: ಕರ್ನಾಟಕ ಸರಕಾರದ ಪೌರಾಡಳಿತ ಮತ್ತು ಹಜ್ಜ್ ಸಚಿವರಾದ ರಹೀಂ ಖಾನ್ ರವರು ಸೆ.21 ರಂದು ಅರಂತೋಡು ಟಿ.ಎಂ ಶಹೀದ್ ತೆಕ್ಕಿಲ್ ರವರ ತೆಕ್ಕಿಲ್ ನಿವಾಸಕ್ಕೆ ತೆರಳಿ ಭೋಜನವನ್ನು ಸ್ವೀಕರಿಸಿದರು.
ಈ ಸಂಧರ್ಭದಲ್ಲಿ ಅವರನ್ನು ತೆಕ್ಕಿಲ್ ಗ್ರಾಮೀಣಾಭಿವೃದ್ಧಿ ಪ್ರತಿಷ್ಠಾನ ವತಿಯಿಂದ ಸ್ಥಾಪಕಾಧ್ಯಕ್ಷ ಟಿ.ಎಂ ಶಹೀದ್ ತೆಕ್ಕಿಲ್ ರವರು ಶಾಲು ಹೊದಿಸಿ ಸ್ಮರಣಿಕೆಯನ್ನು ನೀಡಿ ಸನ್ಮಾನಿಸಿದರು. ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದ ಅವರು ಸಂಸ್ಥೆಯ ಚಟುವಟಿಕೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಮುಂದಿನ ದಿನದಲ್ಲಿ ಸುಳ್ಯಕ್ಕೆ ವಿಶೇಷ ಅನುದಾನವನ್ನು ಒದಗಿಸುವುದಾಗಿ ಭರವಸೆ ನೀಡಿದರು. ಸುಳ್ಯ ನಗರ ಪ್ರಾಧಿಕಾರದ ಅಧ್ಯಕ್ಷ ಕೆ.ಎಂ.ಮುಸ್ತಫ, ಸುಳ್ಯ ನಗರ ಪಂಚಾಯತ್ ಮಾಜಿ ಅಧ್ಯಕ್ಷ ಎಸ್. ಸಂಶುದ್ಧೀನ್, ಸುಳ್ಯ ನಗರ ಪಂಚಾಯತ್ ಸದಸ್ಯರಾದ ಸಿದ್ಧೀಕ್ ಕೊಕ್ಕೊ, ಶರೀಫ್ ಕಂಠಿ, ಕೆ.ಎಸ್ ಉಮ್ಮರ್ ಉಧ್ಯಮಿ ಸಲೀಂ ಪೆರಂಗೋಡಿ, ಕೆ.ಬಿ ಇಬ್ರಾಹಿಂ, ತೆಕ್ಕಿಲ್ ಪ್ರತಿಷ್ಠಾನದ ಕಾರ್ಯದರ್ಶಿ ಅಶ್ರಫ್ ಗುಂಡಿ, ಕೋಶಾಧಿಕಾರಿ ಟಿ.ಎಮ್ ಜಾವೇದ್ ತೆಕ್ಕಿಲ್, ಉದ್ಯಮಿ ಭಶೀರ್ ಕಚ್ಚು, ತಾಜುದ್ಧೀನ್ ಅರಂತೋಡು ಮೊದಲಾದವರು ಉಪಸ್ಥಿತರಿದ್ದರು. ಖಾಸಗಿ ಕಾರ್ಯಕ್ರಮಕ್ಕೆ ಪೇರಡ್ಕ ಮಸೀದಿ, ದರ್ಗಾ ಭೇಟಿ ನಂತರ ಗೂನಡ್ಕ ಸಜ್ಜನ್ ಹಾಲ್ ಮಿಲಾದ್ ಸಂಗಮ ಕಾರ್ಯಕ್ರಮಕ್ಕೆ ಆಗಮಿಸಿದ ಸಚಿವರು ಅನಾರೋಗ್ಯ ನಿಮಿತ್ತ ತುರ್ತು ವೈದ್ಯಕೀಯ ಚಿಕಿತ್ಸೆ ನಂತರ ಆರಂತೋಡು ತೆಕ್ಕಿಲ್ ನಲ್ಲಿ ಮೂರು ಗಂಟೆಗಳ ಕಾಲ ವಿಶ್ರಾಂತಿ ಪಡೆದು ಮಂಗಳೂರು ವಿಮಾನ ನಿಲ್ದಾಣ ಮುಖಾಂತರ ಬೆಂಗಳೂರು ತೆರಳಿದ ಕಾರಣ ಪೇರಡ್ಕ ದರ್ಗಾ, ಮಸೀದಿ ಭೇಟಿ ಮತ್ತು ಗೂನಡ್ಕದ ಸಜ್ಜನ ಹಾಲ್ ಮಿಲಾದ್ ಸಂಗಮ ಕಾರ್ಯಕ್ರಮ ಕೊನೆಯ ಕ್ಷಣದಲ್ಲಿ ರದ್ದುಗೊಳಿಸಿದರು.