ರಾಘವೇಶ್ವರ ಶ್ರೀಗಳ ತೇಜೋವಧೆಗೆ ನಕಲಿ ಅಶ್ಲೀಲ ಸಿಡಿ ಪ್ರಕರಣ-ಐದು ಮಂದಿಗೆ ಜಾಮೀನು ರಹಿತ ವಾರೆಂಟ್….
ಬೆಂಗಳೂರು: ನಕಲಿ ಅಶ್ಲೀಲ ಸಿಡಿ ತಯಾರಿಸಿ ಶ್ರೀರಾಘವೇಶ್ವರ ಭಾರತೀ ಮಹಾಸ್ವಾಮೀಜಿಯವರ ತೇಜೋವಧೆಗೆ ಯತ್ನಿಸಿದ್ದ ಪ್ರಕರಣದ ವಿಚಾರಣೆ ನಡೆಸುತ್ತಿರುವ ಕುಮಟಾ ಜೆಎಂಎಫ್‍ಸಿ ನ್ಯಾಯಾಲಯ ಐವರು ಆರೋಪಿಗಳಿಗೆ ಜಾಮೀನು ರಹಿತ ವಾರೆಂಟ್ ಜಾರಿ ಮಾಡಿ ಆದೇಶ ಹೊರಡಿಸಿದೆ.
ಶ್ರೀಗಳ ತೇಜೋವಧೆ ಮಾಡುವ ಉದ್ದೇಶದಿಂದ 2010 ರಲ್ಲಿ ನಕಲಿ ಅಶ್ಲೀಲ ಸಿಡಿ ತಯಾರಿಸಿ ಸ್ವಾಮೀಜಿಯವರ ತೇಜೋವಧೆ ಯತ್ನ ನಡೆದಿತ್ತು. ಶ್ರೀಗಳನ್ನು ಹೋಲುವ ವ್ಯಕ್ತಿಯನ್ನು ಬಳಸಿ ಶ್ರೀಗಳ ಹಾವಭಾವಗಳನ್ನು ಆತನಿಗೆ ಕಲಿಸಿ ಚಿತ್ರಿಸಲಾಗಿತ್ತು. ಹಾಲಿವುಡ್ ತಂತ್ರಜ್ಞಾನ ಬಳಸಿ ಶ್ರೀಗಳ ಚಿತ್ರಗಳನ್ನು ಅಶ್ಲೀಲ ವಿಡಿಯೊಗಳ ಜತೆ ಸೇರಿಸಿ ಅದನ್ನು ಮಾಧ್ಯಮ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರ ಮಾಡಿ ಶ್ರೀರಾಮಚಂದ್ರಾಪುರ ಮಠದ ಶ್ರೀಗಳ ಕೀರ್ತಿಗೆ ಮಸಿ ಬಳಿಯುವ ಕೃತ್ಯ ಎಸಗಲಾಗಿತ್ತು.