ಸುಳ್ಯ ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತ ಕಾಂಗ್ರೆಸ್ ಘಟಕದ ಸಭೆ…
ಸುಳ್ಯ: ಅಲ್ಪಸಂಖ್ಯಾತ ಕಾಂಗ್ರೆಸ್ ಘಟಕದ ಅಧ್ಯಕ್ಷರಾದ ಜಿ. ಕೆ. ಹಮೀದ್ ಅಧ್ಯಕ್ಷತೆಯಲ್ಲಿ ಸುಳ್ಯ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಸಭೆಯು ಯುವಜನ ಸಯುಕ್ತ ಮಂಡಳಿ ಸುಳ್ಯದಲ್ಲಿ ನಡೆಯಿತು.
ಸಮಾರಂಭ ಉದ್ಘಾಟಿಸಿ ಟಿ ಎಂ ಶಾಹಿದ್ ತೆಕ್ಕಿಲ್ ರವರು ಮಾತನಾಡಿ ಪಕ್ಷ ಸಂಘಟನೆ, ಗ್ರಾಮ ಮಟ್ಟದಲ್ಲಿ ಪಕ್ಷದ ನೋಂದಣಿ ಕಾರ್ಯಕ್ರಮ, ವಿಧಾನ ಪರಿಷತ್ ಚುನಾವಣೆ ಬಗ್ಗೆ, ಸಾಮಾಜಿಕ ಜಾಲತಾಣ ವಿಭಾಗದಲ್ಲಿ ಹೆಚ್ಚು ಕ್ರಿಯಾಶೀಲಾಗೊಳಿಸುವ ಬಗ್ಗೆ ವಿವರಿಸಿ ಮಾತನಾಡಿದರು. ಅಲ್ಪಸಂಖ್ಯಾತರಿಗೆ ರಕ್ಷಣೆ ನೀಡಲು ಕಾಂಗ್ರೇಸ್ ನಿಂದ ಮಾತ್ರ ಸಾಧ್ಯ ಎಂದರು. ಕೆಪಿಸಿಸಿ ಅಧ್ಯಕ್ಷರಾದ ಡಿ ಕೆ ಶಿವಕುಮಾರ್ ಹಾಗೂ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯನವರೊಂದಿಗೆ ಅಲ್ಪಸಂಖ್ಯಾತರ ಸಮಸ್ಯೆ ಬಗ್ಗೆ ಚರ್ಚಿಸುವ ಭರವಸೆ ನೀಡಿದರು.
ಸಭೆಯಲ್ಲಿ ಪ್ರಮುಖವಾಗಿ ವಿಧಾನ ಪರಿಷತ್ ಚುನಾವಣೆಯಲ್ಲಿ ಮಂಜುನಾಥ್ ಬಂಡಾರಿ ಗೆಲುವಿಗೆ ಪ್ರಾಮಾಣಿಕ ಪ್ರಯತ್ನ, ಪಕ್ಷದ ಸದಸ್ಯತ್ವ ಅಭಿಯಾನ ಯಶಸ್ವಿಗೊಳಿಸುವುದು, ಜಿಲ್ಲೆಯ ಏಕೈಕ ಶಾಸಕರಾದ ಯು. ಟಿ. ಖಾದರ್ ಮೇಲೆ ನಿರಂತರ ಅಪಪ್ರಚಾರ ಮಾಡಿ ತೇಜೋವದೆ ಮಾಡುವ ಕಾರ್ಯ ನಡೆಯುತ್ತಿದ್ದು ಪಕ್ಷದ ಕಾರ್ಯಕರ್ತರು ಇದಕ್ಕೆ ಪ್ರತ್ಯುತ್ತರ ನೀಡುವ ಕಾರ್ಯ ಆಗಬೇಕಾಗಿದೆ ಎಂಬ ವಿಷಯಗಳಲ್ಲಿ ಚರ್ಚಿಸಲಾಯಿತು.
ಖಾದರ್ ಮೇಲೆ ನಡೆಯುವ ತೇಜೋವದೆ ಖಂಡಿಸಿ ನಿರ್ಣಯ ಕೈಗೊಳ್ಳಲಾಯಿತು, ಸಭೆಯಲ್ಲಿ ಪ್ರಮುಖವಾಗಿ ಗಫೂರ್ ಕಲ್ಮಡ್ಕ ಹಾಗೂ ಮುಸ್ತಫಾ ಜೆ. ಎಸ್. ವಿಚಾರ ಮಂಡಿಸಿದರು. ತಾಲೂಕಿನ ಸುಳ್ಯ, ಬೆಳ್ಳಾರೆ ಸಂಪಾಜೆ ಯಲ್ಲಿ ಅಲ್ಪಸಂಖ್ಯಾತ ಸಮಾವೇಶ ಮಾಡಲು ತೀರ್ಮಾನಿಸಲಾಯಿತು, ಜಿಲ್ಲೆಯಲ್ಲಿ ಅಲ್ಪಸಂಖ್ಯಾತ ಮೇಲೆ ನಡೆಯುತ್ತಿರುವ ದಬ್ಬಾಳಿಕೆ ದೌರ್ಜನ್ಯ ಖಂಡಿಸಲಾಯಿತು. ಸಭೆಯಲ್ಲಿ ರಾಜ್ಯ ಅಲ್ಪಸಂಖ್ಯಾತ ಸಂಯೋಜಕರಾದ ತಾಜ್ ಮಹಮದ್, ಜಿಲ್ಲಾ ಪದಾಧಿಕಾರಿಗಲಾದ ಇಸ್ಮಾಯಿಲ್ ಪಡ್ಪಿನಂಗಡಿ, ಅಬ್ದುಲ್ ರಹಿಮಾನ್ ಸಂಪಾಜೆ, ಲೆಸ್ಸಿ ಮೊನಾಲಿಸಾ, ಇದ್ದಿನ್ ಕುಂಞ, ಪಂಚಾಯತ್ ಅಧ್ಯಕ್ಷರಾದ, ಹಾಜಿರಾ ಗಫೂರ್, ಸದಸ್ಯರುಗಳಾದ, ಅಬೂಸಾಲಿ. ಪಿ. ಕೆ. ಹನೀಫ್ ಎಸ್. ಕೆ, ಮುಜೀಬ್ ಪೈಚಾರ್, ಅರಂತೋಡು ವಲಯ ಅಧ್ಯಕ್ಷರಾದ ರಹೀಂ ಬೀಜದಕಟ್ಟೆ ನಗರ ಪಂಚಾಯತ್ ಸದಸ್ಯರಾದ ಶರೀಫ್ ಕಂಠಿ, ಬಶೀರ್ ಆರ್. ಬಿ. ರಫೀಕ್ ಪಡು, ಅಲ್ಪಸಂಖ್ಯಾತ ಘಟಕದ ಪ್ರದಾನ ಕಾರ್ಯದರ್ಶಿ ಲೂಕಸ್, ರೋಡಲ್ಪ್ ಕ್ರಸ್ತಾ, ಸಿಲ್ವಸ್ಟರ್, ಮೀಸಭಾ , ಹನೀಫ್ ಕುನ್ನಿಲ್, ಅಬ್ದುಲ್ ಥಸ್ರೀಫ್ ,ಇಸ್ತಿಯಕ್ ಕಾರ್ಯಕರ್ತರು ಉಪಸ್ಥಿತರಿದ್ದರು ಜಿ. ಕೆ ಹಮೀದ್ ಸ್ವಾಗತಿಸಿ, ಅಬೂಸಾಲಿ ವಂದಿಸಿದರು.