ಶ್ರೀ ಸದಾಶಿವ ದೇವಸ್ಥಾನ ಈಶ್ವರಮಂಗಲ ಸಜೀಪಮೂಡ – ಮಹಾಶಿವರಾತ್ರಿ…

ಬಂಟ್ವಾಳ: ಶ್ರೀ ಸದಾಶಿವ ದೇವಸ್ಥಾನ ಈಶ್ವರಮಂಗಲ ಸಜೀಪಮೂಡ ಇಲ್ಲಿ ಮಹಾಶಿವರಾತ್ರಿ ಪ್ರಯುಕ್ತ ಶ್ರೀ ದೇವರಿಗೆ ಫಲಪಂಚಾಮೃತ ಅಭಿಷೇಕ, ರುದ್ರಾಭಿಷೇಕ ,ಪ್ರಸನ್ನ ಪೂಜೆ, ಮಹಾಮಂಗಳಾರತಿ ಶ್ರದ್ಧಾಭಕ್ತಿಯಿಂದ ಜರುಗಿತು.
ಕೂಟ ಮಹಾಜಗತ್ತು ಬಂಟ್ವಾಳ ಮಹಿಳಾ ವಿಭಾಗದ ವರಿಂದ ನಾಮಸಂಕೀರ್ತನೆ, ವಿಶ್ವಭಾರತಿ ಯಕ್ಷ ಸಂಜೀವಿನಿ ಮುಡಿಪು ಇವರಿಂದ ಭೀಷ್ಮಾರ್ಜುನ ಯಕ್ಷಗಾನ ತಾಳಮದ್ದಳೆ, ಬಾಲ ಕಲಾವಿದ ಅದ್ವೈತ್ ಚಂಡೆವಾದನ ಕೈಚಳಕ ಎಲ್ಲರ ಮನಸೂರೆಗೊಂಡಿತು.

Related Articles

Back to top button