ಕರ್ನಾಟಕ ವಿದ್ಯಾಸಂಸ್ಥೆಯಲ್ಲಿ ಮಾಣಿ ಗ್ರಾಮ ಪಂಚಾಯತ್ ವತಿಯಿಂದ ಸ್ವಚ್ಛತೆ ಅರಿವು ಕಾರ್ಯಕ್ರಮ…
ಬಂಟ್ವಾಳ:ಸ್ವಚ್ಛ ಭಾರತ ಅಭಿಯಾನ ಮಾದರಿ ಗ್ರಾಮಾಭಿವೃದ್ಧಿ ಆಂದೋಲನದ ಅಂಗವಾಗಿ ನಿರ್ಮಲ ಗ್ರಾಮ ಪ್ರಶಸ್ತಿ ಪುರಸ್ಕೃತ ಜನ ಶಿಕ್ಷಣ ಟ್ರಸ್ಟ್ – ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಗ್ರಾಮ ಆರೋಗ್ಯ- ಸ್ವಚ್ಛತೆ – ಪೌಷ್ಟಿಕ ಸಮಿತಿ ಗ್ರಾಮ ಪಂಚಾಯತ್ ಮಾಣಿ – ಇವುಗಳ ಸಹಯೋಗದಲ್ಲಿ ಕರ್ನಾಟಕ ಪ್ರೌಢ ಶಾಲೆ ಮತ್ತು ಕರ್ನಾಟಕ ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿಗಳಿಗಾಗಿ *ಸ್ವಚ್ಛತೆ ಅರಿವು* ಕಾರ್ಯಕ್ರಮ 19-02-2026 ರಂದು*ಶಾಂತಲಾ ಸಭಾಭವನ* ದಲ್ಲಿ ನಡೆಯಿತು.
ದಕ್ಷಿಣ ಕನ್ನಡ ಜಿಲ್ಲಾ ಸ್ವಚ್ಛತಾ ರಾಯಭಾರಿ ಹಾಗೂ ಮಾಜಿ ಓಂಬುಡ್ಸ್ ಮನ್ ಶ್ರೀ ಶೀನ ಶೆಟ್ಟಿ ಮುಖ್ಯ ಅತಿಥಿಯಾಗಿ ಆಗಮಿಸಿ ವಿದ್ಯಾರ್ಥಿಗಳಲ್ಲಿ ಬಾಲ್ಯದಿಂದಲೇ ಸ್ವಚ್ಛತೆಯ ಅರಿವು, ಸಮರ್ಪಕ ಕಸ ವಿಲೇವಾರಿ, ವೈಜ್ಞಾನಿಕ ಸಂಸ್ಕರಣೆ, ಸ್ವಚ್ಛತಾ ಘೋಷ ಮತ್ತು ಶಾಲೆಯನ್ನು ಸ್ವಚ್ಛತಾ ರಾಯಭಾರಿ ಮಾದರಿ ಶಾಲೆಯಾಗಿ ರೂಪುಗೊಳಿಸಲು ಜವಾಬ್ದಾರಿ ನೀಡಿ ಶುಭ ಹಾರೈಸಿದರು.
ಜನ ಶಿಕ್ಷಣ ಟ್ರಸ್ಟ್ ನಿರ್ದೇಶಕರಾದ ಕೃಷ್ಣ ಮೂಲ್ಯ ‘ಮಕ್ಕಳು ಸ್ವಚ್ಛತೆಯ ಯೋಧರಾಗಬೇಕೆಂದು ಪ್ರಾಸ್ತಾವಿಕವಾಗಿ ನುಡಿದರು.
ಮಾಜಿ ಗ್ರಾಮ ಪಂಚಾಯತ್ ಸದಸ್ಯರಾದ ಬಾಲಕೃಷ್ಣ ಆಳ್ವ ಕೊಡಾಜೆ ಅಧ್ಯಕ್ಷತೆ ವಹಿಸಿದ್ದರು.
ವೇದಿಕೆಯಲ್ಲಿ ಗ್ರಾಮ ಪಂಚಾಯತ್ ಸದಸ್ಯರುಗಳಾದ ಹಾಜಿ ಇಬ್ರಾಹಿಂ ಕೆ., (ಶಾಲಾ ಸಂಚಾಲಕ) ಸುದೀಪ್ ಕುಮಾರ್ ಶೆಟ್ಟಿ, ಮೇಲ್ವಿನ್ ಕಿಶೋರ್ ಮಾರ್ಟಿಸ್, ಮಹಿಳಾ ಸಾಂತ್ವನ ಕೇಂದ್ರದ ಆಪ್ತ ಸಮಾಲೋಚಕಿ ವಿದ್ಯಾ ಹಾಗೂ ಇತರರು ಉಪಸ್ಥಿತರಿದ್ದರು.
ಪ್ರೌಢಶಾಲಾ ಮುಖ್ಯ ಶಿಕ್ಷಕರಾದ ಎಸ್. ಚೆನ್ನಪ್ಪ ಗೌಡ ಸ್ವಾಗತಿಸಿ ಮಾಣಿಕ್ಯ ಸಂಜೀವಿನಿ ಒಕ್ಕೂಟದ L C R P ಲೈಲಾಬಿ ವಂದಿಸಿ ಹಿಂದಿ ಶಿಕ್ಷಕರಾದ ಜಯರಾಮ ಕಾಂಚನ ಕಾರ್ಯಕ್ರಮ ನಿರೂಪಿಸಿ, ವಿದ್ಯಾರ್ಥಿನಿಯರಾದ ಮೈತ್ರಿ ಮತ್ತು ತಂಡ ಪ್ರಾರ್ಥಿಸಿ, ಸಂಜೀವಿನಿ ಒಕ್ಕೂಟದ ಸದಸ್ಯೆಯರಾದ ಸ್ವಾತಿ, ಕವಿತಾ, ಚೈತ್ರಾ ದಾಕ್ಷಾಯಿಣಿ ಹಾಗೂ ಇತರರು ಸಹಕರಿಸಿದರು.






