ಆಜ಼ಾನ್ ಬಗ್ಗೆ ಅವಹೇಳನ – ಈಶ್ವರಪ್ಪ ಗಡೀಪಾರಿಗೆ ಅಬ್ದುಲ್ ರಹಿಮಾನ್ ಆಗ್ರಹ…

ಸುಳ್ಯ: ಇತ್ತೀಚೆಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದ ಬಿಜೆಪಿಯ ವಿಜಯ ಸಂಕಲ್ಪ ಯಾತ್ರೆಯ ಕಾರ್ಯಕ್ರಮದಲ್ಲಿ ಮಾಜಿ ಸಚಿವ ಈಶ್ವರಪ್ಪ ಅವರು ಅಲ್ಲಾಹ್ ಮತ್ತು ಅಝನ್ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿ ಅಶಾಂತಿ ಸೃಷ್ಟಿಸಲು ಯತ್ನಿಸುತ್ತಿರುವುದು ನಿಜಕ್ಕೂ ಖೇದಕರ. ಈಶ್ವರಪ್ಪ ಅವರು ಜನರಲ್ಲಿ ಧಾರ್ಮಿಕ ಭಾವನೆಯನ್ನು ಕೆರಳಿಸುವಂತೆ ಮಾಡಿದ್ದಾರೆ. ಹಿಂದೂ-ಮುಸ್ಲಿಂ ಹೆಸರು ಹೇಳಿ ತಮ್ಮ ಬೆಲೆ ಬೇಯಿಸಿಕೊಂಡು ಮುಗ್ಧ ಜನರ ಮನಸ್ಸಿನಲ್ಲಿ ವಿಷ ಬೀಜ ಬಿತ್ತುವ ಇಂತವರನ್ನು ಈ ದೇಶದಿಂದಲೇ ಗಡೀಪಾರು ಮಾಡಬೇಕು ಎಂದು ದಕ್ಷಿಣ ಕನ್ನಡ ಜಿಲ್ಲಾ ವಕ್ಫ್ ಬೋರ್ಡ್ ಉಪಾಧ್ಯಕ್ಷ ಅಬ್ದುಲ್ ರಹಿಮಾನ್ ಆಗ್ರಹಿಸಿದ್ದಾರೆ.