ಅರಂತೋಡು ತೆಕ್ಕಿಲ್ ಪ್ರತಿಷ್ಠಾನದ ವತಿಯಿಂದ ಎನ್ ಎಸ್ ಯು ಐ ರಾಜ್ಯಾಧ್ಯಕ್ಷರಿಗೆ ಸನ್ಮಾನ…

ಸುಳ್ಯ: ಕರ್ನಾಟಕ ರಾಜ್ಯ ಎನ್ ಎಸ್ ಯು ಐ ರಾಜ್ಯಾಧ್ಯಕ್ಷರಾದ ಕೀರ್ತಿ ಗಣೇಶ್ ನ.18 ರಂದು ಅರಂತೋಡು ತೆಕ್ಕಿಲ್ ಪ್ರತಿಷ್ಠಾನಕ್ಕೆ ಭೇಟಿ ನೀಡಿ ಸಂಸ್ಥೆಯ ಚಟುವಟಿಕೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ನಂತರ ಟಿ. ಎಂ. ಶಹೀದ್ ರವರ ನಿವಾಸಕ್ಕೆ ತೆರಳಿ ಬೋಜನವನ್ನು ಸ್ವೀಕರಿಸಿದರು. ಈ ಸಂದರ್ಭದಲ್ಲಿ ಅವರನ್ನು ತೆಕ್ಕಿಲ್ ಗ್ರಾಮೀಣಾಭಿವೃದ್ಧಿ ಪ್ರತಿಷ್ಠಾನದ ವತಿಯಿಂದ ಹಿರಿಯರಾದ ಟಿ.ಎಂ. ಶಹೀದ್ ತೆಕ್ಕಿಲ್ ರವರ ತಂದೆ ಹಾಜಿ ಟಿ. ಎಂ. ಬಾಬಾ ತೆಕ್ಕಿಲ್ ರವರು ಕೀರ್ತಿ ಗಣೇಶ್ ರವರಿಗೆ ಶಾಲು ಹೊದಿಸಿ ಸನ್ಮಾನಿಸಿದರು.
ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದ ಅವರು ಟಿ. ಎಂ. ಶಹೀದ್ ರವರು ಎನ್ ಎಸ್ ಯು ಐ ಮುಖಾಂತರ ರಾಜಕೀಯವನ್ನು ಪ್ರವೇಶಿಸಿ ಪಕ್ಷದಲ್ಲಿ ವಿವಿಧ ಹುದ್ದೆಗಳನ್ನು ಅಲಂಕರಿಸಿದವರು. ಇಂದಿಗೂ ಅವರು ಎನ್ ಎಸ್ ಯು ಐ ಯಲ್ಲಿ ಅಪಾರ ಆಸಕ್ತಿಯನ್ನು ಹೊಂದಿದ್ದಾರೆ. ಹಿರಿಯವರೆಲ್ಲರ ಮಾರ್ಗದರ್ಶನವನ್ನು ಪಡೆದುಕೊಂಡು ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳ ಸಮಸ್ಯೆಗಳಿಗೆ ಸ್ಪಂದಿಸುತ್ತೇನೆ ಎಂದರು.
ಈ ಕಾರ್ಯಕ್ರಮದಲ್ಲಿ, ಸಂಪಾಜೆ ಗ್ರಾಮ ಪಂಚಾಯತ್ ಅಧ್ಯಕ್ಷ ಜಿ. ಕೆ. ಹಮೀದ್ ಗೂನಡ್ಕ, ದ.ಕ. ಜಿಲ್ಲಾ ಎನ್ ಎಸ್ ಯು ಐ ಉಸ್ತುವಾರಿ ಭರತ್, ಮೈಸೂರು ಜಿಲ್ಲಾ ಎನ್ ಎಸ್ ಯು ಐ ಅಧ್ಯಕ್ಷ ಶಫಿ, ಎನ್ ಎಸ್ ಯು ಐ ಕೋರ್ಡಿನೇಟರ್ ನವೀದ್, ಸುಳ್ಯ ನಗರ ಪಂಚಾಯತ್ ಸದಸ್ಯ ಶರೀಫ್ ಕಂಠಿ, ಸುಳ್ಯ ಬ್ಲಾಕ್ ಕಾಂಗ್ರೇಸ್ ಕಾರ್ಯದರ್ಶಿ ಸಿದ್ಧೀಕ್ ಕೊಕ್ಕೊ, ರಾಜ್ಯ ಅಲ್ಪ ಸಂಖ್ಯಾತರ ಘಟಕದ ಕಾರ್ಯದರ್ಶಿ ಫಾರೂಕ್, ಸುಳ್ಯ ಎನ್ ಎಸ್ ಯು ಐ ಕಾರ್ಯದರ್ಶಿ ಉಬೈಸ್ ಗೂನಡ್ಕ, ಸಂಪಾಜೆ ಗ್ರಾ. ಪಂ. ಸದಸ್ಯ ಅಬೂಸಾಲಿ ಗೂನಡ್ಕ, ಅರಂತೋಡು ತಾಲೂಕು ಪಂಚಾಯತ್ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ರಹೀಮ್ ಬೀಜದಕಟ್ಟೆ, ಹನೀಫ್ ಸೆಂಟ್ಯಾರ್ ಸುಳ್ಯ, ರಜಾಕ್ ಸಂಗo ಸುಳ್ಯ, ಅಬ್ದುಲ್ ಮಜೀದ್ ಅರಂತೋಡು, ರಫೀಕ್ ಪಡು, ಅಝಾರುದ್ಧೀನ್ ಗೂನಡ್ಕ, ಎನ್.ಎಚ್. ಹಾರೀಫ್ ಗೂನಡ್ಕ, ಖಾಸಿಂ ಗೂನಡ್ಕ, ಇಬ್ರಾಹಿಂ ಸುಳ್ಯ ಮೊದಲಾದವರು ಉಪಸ್ಥಿತರಿದ್ದರು. ಪ್ರತಿಷ್ಠಾನದ ಕಾರ್ಯದರ್ಶಿ ಅಶ್ರಫ್ ಗುಂಡಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.

Sponsors

Related Articles

Back to top button