ಮಂಗಳೂರು – ಮತ್ತೊಂದು ಕೊರೋನಾ ಶಂಕಿತ ಪ್ರಕರಣ…

ಮಂಗಳೂರು: ಮಂಗಳೂರು ನಗರದಲ್ಲಿ ಮತ್ತೊಂದು ಕೊರೋನಾ ಶಂಕಿತ ಪ್ರಕರಣ ಬೆಳಕಿಗೆ ಬಂದಿದೆ.
ಬಿಕರ್ನಕಟ್ಟೆ -ಶಕ್ತಿನಗರ ರಸ್ತೆಯಲ್ಲಿರುವ ಸೌಜನ್ಯ ಲೇನ್ ನಿವಾಸಿಯು ಕಳೆದ ಕೆಲ ದಿನಗಳಿಂದ ಜ್ವರ ಪೀಡಿತನಾಗಿದ್ದು, ಮಾಹಿತಿ ತಿಳಿದ ಸ್ಥಳೀಯರು ಪೊಲೀಸರ ಗಮನಕ್ಕೆ ತಂದಿದ್ದಾರೆ. ಕೂಡಲೇ ಆರೋಗ್ಯಾಧಿಕಾರಿಗಳ ತಂಡದೊಂದಿಗೆ ಸ್ಥಳಕ್ಕೆ ಆಗಮಿಸಿದ ಕಂಕನಾಡಿ ನಗರ ಪೊಲೀಸ್ ಠಾಣಾ ಸಿಬ್ಬಂದಿಗಳು ಆತನ ಮನವೊಲಿಸಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಮಾಹಿತಿಗಳ ಪ್ರಕಾರ ಈತ ಕೊರೊನಾ ಸೋಂಕು ಧೃಡವಾದ ತೊಕ್ಕೊಟ್ಟಿನ ವ್ಯಕ್ತಿಯ ಸಂಪರ್ಕವನ್ನು ಹೊಂದಿದ್ದ ಎನ್ನಲಾಗಿದೆ.
ಈ ಸಂದರ್ಭದಲ್ಲಿ ನೆರೆಹೊರೆಯ ವ್ಯಕ್ತಿಗಳಲ್ಲೂ ತೆಗೆದುಕೊಳ್ಳಬೇಕಾದ ಮುಂಜಾಗೃತಾ ಕ್ರಮಗಳ ಬಗ್ಗೆ ಮಾಹಿತಿ ನೀಡಿದ್ದಾರೆ. ದೂರು ಪಡೆದ ಕೂಡಲೇ ಮಂಗಳೂರು ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ಮಂಗಳೂರು ಕಂಕನಾಡಿ ಟೌನ್ ಪೊಲೀಸರ ಸ್ಪಂದನೆಯು ಪದವು ಗ್ರಾಮದ ಬಿಕರ್ನಕಟ್ಟೆ ಪರಿಸರದ ನಿವಾಸಿಗಳಿಂದ ತುಂಬಾ ಮೆಚ್ಚುಗೆಗೆ ಪಾತ್ರವಾಗಿದೆ.