ಅಭಾಸಾಪ ಬಂಟ್ವಾಳ ತಾಲೂಕು ಸಮಿತಿ ಪದಗ್ರಹಣ….
ಪ್ರಕೃತಿಯೊಂದಿಗಿನ ಸಂವೇದನೆ ಕವಿಗಳಿಗೆ ಸ್ಪೂರ್ತಿ - ಗಣರಾಜ ಕುಂಬ್ಳೆ...
ಬಂಟ್ವಾಳ: ಪರಿಸರ ನಿತ್ಯನೂತನವಾಗಿದ್ದು ಪ್ರಕೃತಿಯೊಂದಿಗಿನ ಸಂವೇದನೆ ಕವಿಗಳಿಗೆ ಕವನ ರಚನೆಗೆ ಸ್ಪೂರ್ತಿಯಾಗುತ್ತದೆ ಎಂದು ಶ್ರೀ ರಾಮಕುಂಜೇಶ್ವರ ಮಹಾವಿದ್ಯಾಲಯದ ಪ್ರಾಚಾರ್ಯ, ಸಾಹಿತಿ ಗಣರಾಜ ಕುಂಬ್ಳೆ ಹೇಳಿದರು.
ಅವರು ಕಲ್ಲಡ್ಕ ಶ್ರೀ ರಾಮ ಪದವಿಪೂರ್ವ ಕಾಲೇಜಿನಲ್ಲಿ ಜೂ. 18 ರಂದು ನಡೆದ ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ಬಂಟ್ವಾಳ ತಾಲೂಕು ಸಮಿತಿಯ ಪದಗ್ರಹಣ ಸಮಾರಂಭದಲ್ಲಿ ಸಾಹಿತ್ಯ ಮತ್ತು ಪರಿಸರ ಕುರಿತು ಉಪನ್ಯಾಸ ನೀಡಿದರು.
ಕಲ್ಲಡ್ಕ ಪ.ಪೂ. ಕಾಲೇಜಿನ ಪ್ರಾಚಾರ್ಯ ವಸಂತ ಬಲ್ಲಾಳ್ ಅಧ್ಯಕ್ಷತೆ ವಹಿಸಿದ್ದರು. ಉದ್ಯಮಿ ನಾಗೇಶ ಕಲ್ಲಡ್ಕ, ಪಿಂಗಾರ ಪತ್ರಿಕೆ ಸಂಪಾದಕ ರೇಮಂಡ್ ತಾಕೋಡೆ ,ಶ್ರೀ ರಾಮ ಪ್ರೌಢ ಶಾಲಾ ಮುಖ್ಯೋಪಾಧ್ಯಾಯ ಗೋಪಾಲ ಅಮ್ಟೂರು ಅತಿಥಿಗಳಾಗಿ ಭಾಗವಹಿಸಿದ್ದರು.
ಅಭಾಸಾಪ ಮಂಗಳೂರು ವಿಭಾಗ ಸಂಯೋಜಕ ಸುಂದರ ಇಳಂತಿಳ ಜವಾಬ್ದಾರಿ ಘೋಷಣೆ ಮಾಡಿದರು. ಬಂಟ್ವಾಳ ತಾಲೂಕು ಸಮಿತಿ ಮಾಜಿ ಅಧ್ಯಕ್ಷ ಜಯಾನಂದ ಪೆರಾಜೆ ಅಭಿನಂದನೆ ಸಲ್ಲಿಸಿದರು. ನಿಕಟಪೂರ್ವ ಅಧ್ಯಕ್ಷ ಡಾ.ಸುರೇಶ ನೆಗಳಗುಳಿ ಮಾತನಾಡಿ ಹೊಸ ಪದಾಧಿಕಾರಿಗಳಿಗೆ ಶುಭಹಾರೈಸಿದರು. ಅಧ್ಯಕ್ಷರಾಗಿ ಪ್ರೊ.ರಾಜಮಣಿ ರಾಮಕುಂಜ, ಉಪಾಧ್ಯಕ್ಷರಾಗಿ ಈಶ್ವರ ಪ್ರಸಾದ ಕನ್ಯಾನ, ಕಾರ್ಯದರ್ಶಿಯಾಗಿ ಮಧುರ ಕಡ್ಯ ಕಲ್ಲಡ್ಕ, ಕೋಶಾಧಿಕಾರಿಯಾಗಿ ಸೀತಾ ಲಕ್ಷ್ಮೀ ವರ್ಮ ವಿಟ್ಲ,ಮಾಧ್ಯಮ ಪ್ರಮುಖರಾಗಿ ಚಿನ್ನಪ್ಪ ವೀರಕಂಬ ಜವಾಬ್ದಾರಿ ಸ್ವೀಕರಿಸಿದರು.
ವಿವಿಧ ಪದಾಧಿಕಾರಿಗಳಾಗಿ ರಮೇಶ ಬಾಯಾರ್,ಪಂಕಜಾ ಮುಡಿಪು,ಜಯಲಕ್ಷ್ಮೀ ಶೆಣೈ ಬಂಟ್ವಾಳ,ಜಯರಾಮ ಪಡ್ರೆ,ಹೇಮಾವತಿ ಸಾಲೆತ್ತೂರು, ವಿಶ್ವನಾಥ ಮಿತ್ತೂರು,ಅಶೋಕ ಕಲ್ಯಾಟೆ, ವಿನುತಾ ಮಾತಾಜಿ,ಪ್ರಶಾಂತ ಕಡ್ಯ ಉಪಸ್ಥಿತರಿದ್ದರು.