ಪೇರಡ್ಕ ಗೂನಡ್ಕ ಸಂಭ್ರಮದ ಬಕ್ರೀದ್…

ಸುಳ್ಯ: ಪೇರಡ್ಕ ಮೋಹಿದ್ದಿನ್ ಜುಮಾ ಮಸ್ಜಿದಲ್ಲಿ ಬಕ್ರೀದ್ ಹಬ್ಬದ ಮಹತ್ವ ಬಗ್ಗೆ ಸಮಾಜದಲ್ಲಿ ಮತ್ತು ಊರಿನಲ್ಲಿ ಸಹಬಾಳ್ವೆ ಅಗತ್ಯದ ಬಗ್ಗೆ ಖತೀಬ್ ನಹೀಮ್ ಫೈಜಿ ಮಾಹಿತಿ ನೀಡಿದರು.
ದೇಶದ ಜನರ ಒಳಿತಿಗೆ,ಅಭಿವೃದ್ಧಿ ,ಶಾಂತಿಗಾಗಿ ವಿಶೇಷ ಪ್ರಾರ್ಥನೆ ನಡೆಸಿದರು. ಎಲ್ಲರು ಪರಸ್ಪರ ಬಕ್ರೀದ್ ಹಬ್ಬದ ಶುಭಾಶಯ ವಿನಿಮಯ ಮಾಡಿ ಖಬರಸ್ಥಾನದಲ್ಲಿ ಮತ್ತು ಪೇರಡ್ಕ ಗೂನಡ್ಕ ದರ್ಗಾದಲ್ಲಿ ವಿಶೇಷ ಪ್ರಾರ್ಥನೆ ನಡೆಸಲಾಯಿತು.
ಮೋಹಿದ್ದಿನ್ ಜುಮಾ ಮಸ್ಜಿದ್ ಪೇರಡ್ಕ ಗೂನಡ್ಕ ಸಂಪಾಜೆ ಇದರ ಅಧ್ಯಕ್ಷರಾದ ತೆಕ್ಕಿಲ್ ಪ್ರತಿಷ್ಠಾನದ ಸ್ಥಾಪಕ ಅಧ್ಯಕ್ಷ ಟಿ ಎಂ ಶಾಹಿದ್ ತೆಕ್ಕಿಲ್, ಸಂಪಾಜೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಹಾಗು ಎಂ ಆರ್ ಡಿ ಎ ಅಧ್ಯಕ್ಷ ಜಿ ಕೆ ಹಮೀದ್ ಗೂನಡ್ಕ, ಟಿ ಬಿ ಹನೀಫ್ ತೆಕ್ಕಿಲ್ ಪಿ ಕೆ ಉಮ್ಮರ್ ಗೂನಡ್ಕ, ಮೊಹಮ್ಮದ್ ಕುಂಞಿ ತೆಕ್ಕಿಲ್ ಪೇರಡ್ಕ ಸಹಿತ ಜಮಾತಿನ ಊರಿನ ಹಲವರು ಭಾಗವಹಿಸಿದ್ದರು.

whatsapp image 2024 06 17 at 10.53.07 am

Sponsors

Related Articles

Back to top button