ಸಂಪಾಜೆ ಸಜ್ಜನ ಸಭಾಭವನ ಕಾಳಜಿ ಕೇಂದ್ರಕ್ಕೆ ಮಾಜಿ ಸಚಿವ ರಮನಾಥ ರೈ ಭೇಟಿ…

ಸುಳ್ಯ: ಸಂಪಾಜೆ ಗ್ರಾಮದ ಪ್ರಾಕೃತಿಕ ವಿಕೋಪ ಸಂತ್ರಸ್ತರು ಉಳಿದುಕೊಂಡಿರುವ ಗೂನಡ್ಕ ಸಜ್ಜನ ಸಭಾಭವನ ಕಾಳಜಿ ಕೇಂದ್ರಕ್ಕೆ ಮಾಜಿ ಸಚಿವ ರಮನಾಥ ರೈ ಭೇಟಿ ನೀಡಿದಾಗ ನೆರೆ- ಜಲ ಸ್ಪೋಟದಲ್ಲಿ ಗೂನಡ್ಕ ಪೇರಡ್ಕ ಸಂಪಾಜೆ ಭಾಗದಲ್ಲಿ ಆಪತ್ಪಾಂಧವರಾಗಿ ಕೆಲಸ ನಿರ್ವಹಿಸಿದ ತೆಕ್ಕಿಲ್ ಸಮೂಹ ಸೂಪರ್ ಮಾರ್ಕೆಟ್ ಗಳ ಪಾಲುದಾರರು, ಸೇವಾದಳದ ಯಂಗ್ ಬ್ರಿಗೇಡ್ ನ ಜುರೈದ್ ತೆಕ್ಕಿಲ್ ಪೇರಡ್ಕ ರವರು ಶಾಲು ಹಾಕಿ ಸ್ವಾಗತಿಸಿದರು.
ಈ ಸಂದರ್ಭದಲ್ಲಿ ಸುಳ್ಯ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷರಾದ ಪಿ ಸಿ ಜಯರಾಂ, ಕಾಂಗ್ರೇಸ್ ಮುಖಂಡರುಗಳಾದ ಭರತ್ ಮುಂಡೋಡಿ, ಧನಂಜಯ ಅಡ್ಪಂಗಾಯ, ಟಿ ಎಂ ಶಾಹೀದ್ ತೆಕ್ಕಿಲ್, ಡಾಕ್ಟರ್ ರಘು, ಕೃಷ್ಣಪ್ಪ ,ನಂದ ಕುಮಾರ್, ಸಂಪಾಜೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಜಿ ಕೆ ಹಮೀದ್ ಗೂನಡ್ಕ , ಸೋಮಶೇಖರ್ ಕೊಯಿಂಗಾಜೆ, ಪಿ ಎಸ್ ಗಂಗಾಧರ, ಸದಾನಂದ ಮಾವಾಜಿ, ಶಶಿಧರ್ ನೀರಬಿದಿರೆ,ದಿನೇಶ ಅಂಬೆಕಲ್ಲು, ಅಬೂಸಾಲಿ ಗೂನಡ್ಕ, ಎಸ್. ಕೆ. ಹನೀಫ್, ಜಗದೀಶ್ ರೈ, ರಹೀಂ ಬೀಜದಕಟ್ಟೆ, ಸುಮತಿ, ಬಿ ಎಸ್ ಯಮುನ, ವಿಜಯ ಕುಮಾರ್, ಅನುಪಮ, ಚಂದ್ರ ವಿಲಾಸ ಗೂನಡ್ಕ, ಚಿದಾನಂದ ಮೂಡನಕಜೆ, ಸಚಿನ್ ರಾಜ್ ಶೆಟ್ಟಿ , ಸಿ ಎಂ ಅಬ್ದುಲ್ಲ ಚೆರೂರ್ ಗೂನಡ್ಕ, ತಾಜು ಅರಂತೋಡು, ಸುಬೈರ್ ಅರಂತೋಡು, ಶಾಫಿ ಕುತ್ತಮಟ್ಟೆ, ಎನ್ ಎಸ್ ಯು ಐ ದ ಕ ಜಿಲ್ಲಾ ಕಾರ್ಯದರ್ಶಿ ಉಬೈಸ್ ಗೂನಡ್ಕ,ಸಾದುಮನ್ ತೆಕ್ಕಿಲ್ ಪೇರಡ್ಕ, ಹಾಫಿಲ್ ಪೇರಡ್ಕ ಮೊದಲಾದವರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ರಮಾನಾಥ ರೈ ಯವರು ನಂದ ಕುಮಾರ್ ರವರು ಸಂಪಾಜೆ ಗ್ರಾಮದ ನೆರೆ ಸಂತ್ರಸ್ತರಿಗೆ ನೀಡಿದ ಆಹಾರ ಕಿಟ್ ಗಳನ್ನು ವಿತರಣೆ ಮಾಡಿದರು.

IMG 20220813 WA0008 225x300

Related Articles