ಸಂಪಾಜೆ ಸಜ್ಜನ ಸಭಾಭವನ ಕಾಳಜಿ ಕೇಂದ್ರಕ್ಕೆ ಮಾಜಿ ಸಚಿವ ರಮನಾಥ ರೈ ಭೇಟಿ – ಆಹಾರ ಕಿಟ್ ವಿತರಣೆ…
ಸುಳ್ಯ: ಸಂಪಾಜೆ ಗ್ರಾಮದ ಪ್ರಾಕೃತಿಕ ವಿಕೋಪ ಸಂತ್ರಸ್ತರು ಉಳಿದುಕೊಂಡಿರುವ ಗೂನಡ್ಕ ಸಜ್ಜನ ಸಭಾಭವನ ಕಾಳಜಿ ಕೇಂದ್ರಕ್ಕೆ ಮಾಜಿ ಸಚಿವ ರಮನಾಥ ರೈ ಭೇಟಿ ನೀಡಿ ಸಮಸ್ಯೆಗಳ ಬಗ್ಗೆ ಸಂತ್ರಸ್ತರಿಂದ ಮಾಹಿತಿ ಪಡೆದರು.
ಸಂಪಾಜೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಜಿ ಕೆ ಹಮೀದ್ ಗೂನಡ್ಕರವರ ನೇತೃತ್ವದಲ್ಲಿ ಎಲ್ಲಾ ಧರ್ಮದ, ಸಂಘಟನೆಗಳ, ಯುವಕರು ಕಳೆದ ಎರಡುವರೆ ತಿಂಗಳಿಂದ ಮಳೆ ಭೂಕಂಪ ನೆರೆ ಸಂದರ್ಭದಲ್ಲಿ ನೀಡುತ್ತಿರುವ ನೆರವನ್ನು ಹಾಗೂ ರಾತ್ರಿ ಹಗಲು ದುಡಿದದ್ದನ್ನು ಚಂದ್ರ ವಿಲಾಸ ಜಿ ಜಿ ಗೂನಡ್ಕ, ಚಿದಾನಂದ ಮೂಡನಕಜೆ ಮತ್ತಿತರು ರಮಾನಾಥ ರೈ ಹಾಗೂ ಕಾಂಗ್ರೇಸ್ ಮುಖಂಡರ ಗಮನಕ್ಕೆ ತಂದು ಅವರ ನಿಸ್ವಾರ್ಥ ಸೇವೆಯನ್ನು ಶ್ಲಾಘಿಸಿದರು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷರಾದ ಪಿ ಸಿ ಜಯರಾಂ, ಕಾಂಗ್ರೇಸ್ ಮುಖಂಡರುಗಳಾದ ಭರತ್ ಮುಂಡೋಡಿ, ಧನಂಜಯ ಅಡ್ಪಂಗಾಯ, ಟಿ ಎಂ ಶಾಹೀದ್ ತೆಕ್ಕಿಲ್, ಡಾ. ರಘು, ಕೃಷ್ಣಪ್ಪ ,ನಂದ ಕುಮಾರ್, ಸಂಪಾಜೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಜಿ ಕೆ ಹಮೀದ್ ಗೂನಡ್ಕ , ಸೋಮಶೇಖರ್ ಕೊಯಿಂಗಾಜೆ, ಪಿ ಎಸ್ ಗಂಗಾಧರ, ಸದಾನಂದ ಮಾವಾಜಿ, ಶಶಿಧರ ನೀರಬಿದಿರೆ,ದಿನೇಶ ಅಂಬೆಕಲ್ಲು, ಅಬೂಸಾಲಿ ಗೂನಡ್ಕ, ಎಸ್. ಕೆ. ಹನೀಫ್, ಜಗದೀಶ್ ರೈ, ರಹೀಮ್ ಬೀಜದ ಕಟ್ಟೆ, ಸುಮತಿ, ಬಿ ಎಸ್ ಯಮುನ, ವಿಜಯ ಕುಮಾರ್, ಅನುಪಮ, ಸಚಿನ್ ರಾಜ್ ಶೆಟ್ಟಿ , ಸಿ ಎಂ ಅಬ್ದುಲ್ಲ ಚೆರೂರ್ ಗೂನಡ್ಕ, ಶಾಫಿ ಕುತ್ತಮಟ್ಟೆ, ಎನ್ ಎಸ್ ಯು ಐ ಜಿಲ್ಲಾ ಕಾರ್ಯದರ್ಶಿ ಉಬೈಸ್ ಗೂನಡ್ಕ, ಯುವ ಸೇವಾದಳದ ಜುರೈದ್ ತೆಕ್ಕಿಲ್ ಪೇರಡ್ಕ , ಸಾದುಮನ್ ತೆಕ್ಕಿಲ್ ಪೇರಡ್ಕ, ತಾಜು ಅರಂತೋಡು, ಜುಬೈರ್ ಅರಂತೋಡು ಮೊದಲಾದವರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ರಮಾನಾಥ ರೈ ಯವರು ನಂದಕುಮಾರ್ ರವರು ಸಂಪಾಜೆ ಗ್ರಾಮದ ನೆರೆ ಸಂತ್ರಸ್ತರಿಗೆ ನೀಡಿದ ಆಹಾರ ಕಿಟ್ ಗಳನ್ನು ವಿತರಣೆ ಮಾಡಿದರು.