ದೇವರಗುಂಡ – ನೂತನ ಸಚಿವ ಅಂಗಾರ ಅವರಿಗೆ ಸನ್ಮಾನ…

ಸುಳ್ಯ: ದೇವರಗುಂಡ ಮನೆಯಲ್ಲಿ ಜ. 18 ರಿಂದ 20 ರ ತನಕ ನಡೆದ ಶ್ರೀ ವಿಷ್ಣುಮೂರ್ತಿ, ಶ್ರೀ ರಕ್ತೇಶ್ವರಿ, ಪೊಟ್ಟದೈವ, ಗುಳಿಗ ದೈವ ಹಾಗೂ ನಾಗ ಸಾನಿಧ್ಯಗಳ ಪುನಃ ಪ್ರತಿಷ್ಠೆ ಕಾರ್ಯಕ್ರಮದಲ್ಲಿ ಸುಳ್ಯ ಶಾಸಕ, ನೂತನ ಸಚಿವ ಎಸ್. ಅಂಗಾರ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಸೇರಿದಂತೆ ದೇವರಗುಂಡ ಮನೆಯ ಕುಶಾಲಪ್ಪ ಗೌಡ,ದುಗ್ಗಪ್ಪ ಗೌಡ, ಡಿ.ವಿ. ಶಿವರಾಮ, ಡಿ.ಎಸ್. ಗಿರೀಶ್, ಡಿ. ಬಾಲಚಂದ್ರ, ನಾಗೇಶ್ ದೇವರಗುಂಡ, ಸೂರ್ಯ ಡಿ. ವಿ , ಪ್ರದೀಪ್. ಡಿ.ಕೆ, ಡಾಟಿ ಸದಾನಂದ ಗೌಡ, ನವೀನ, ವಿಮಲಾವತಿ, ಸೀತಮ್ಮ ಮತ್ತು ಕುಟುಂಬವರ್ಗದವರು ಉಪಸ್ಥಿತರಿದ್ದರು.
ಸುಳ್ಯ ಬಿಜೆಪಿ ನಾಯಕರಾದ ಹರೀಶ್ ಕಂಜಿಪಿಲಿ, ಎ.ವಿ.ತೀರ್ಥರಾಮ , ವೆಂಕಟ್ ದಂಬೆಕೋಡಿ, ವೆಂಕಟ್ ವಳಲಂಬೆ ಮೊದಲಾದವರು ಭಾಗವಹಿಸಿದ್ದರು.