ಸುಳ್ಯ – 399 ನೇ ಶಿವಾಜಿ ಜಯಂತಿ ಆಚರಣೆ…

ಸುಳ್ಯ: ತಾಲೂಕು ಆಡಳಿತ ಹಾಗೂ ರಾಷ್ಟೀಯ ಹಬ್ಬಗಳ ಆಚರಣಾ ಸಮಿತಿ ಹಾಗೂ ಮರಾಠ ಕ್ಷತ್ರಿಯ ಸೇವಾ ಸಂಘ(ರಿ) ಸುಳ್ಯ ಇವುಗಳ ಜಂಟಿ ಆಶ್ರಯದಲ್ಲಿ399 ನೇ ಶಿವಾಜಿ ಜಯಂತಿ ಆಚರಣೆ ಕಾರ್ಯಕ್ರಮವು ಮರಾಠ ಕ್ಷತ್ರಿಯ ಸೇವಾ ಸಂಘದ ಕಾಂತಮಂಗಲದ ನಿವೇಶನದಲ್ಲಿ ಫೆ.19 ರಂದು ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ಕನಿಷ್ಠ ವೇತನ ಸಲಹಾ ಮಂಡಳಿಯ ಅಧ್ಯಕ್ಷರಾದ ಶಹೀದ್ ತೆಕ್ಕಿಲ್ ರವರು ವಹಿಸಿದರು. ಉದ್ಘಾಟನೆಯನ್ನು ಸುಳ್ಯ ಉಪ ತಹಶೀಲ್ದಾರ್ ಶ್ರೀ ಚಂದ್ರಕಾಂತ ರವರು ನೆರವೇರಿಸಿದರು. ಮುಖ್ಯ ಅತಿಥಿಗಳಾಗಿ ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಶ್ರೀ ಸದಾನಂದ ಮಾವಜಿ ಹಾಗೂ ಮರಾಠ ಕ್ಷತ್ರಿಯ ಸೇವಾ ಸಂಘದ ಅಧ್ಯಕ್ಷ ಶ್ರೀ ಮಾಧವ ರಾವ್ ಜಾಧವರವರು ಉಪಸ್ಥಿತರಿದ್ದರು. ಶ್ರೀಮತಿ ಶಾರದಾರವರ ಪ್ರಾರ್ಥನೆಯೊಂದಿಗೆ ಆರಂಭಗೊಂಡ ಕಾರ್ಯಕ್ರಮವನ್ನು ಶ್ರೀ ಚಂದ್ರಶೇಖರ ಜಾಧವರವರು ಪ್ರಾಸ್ತಾವಿಕ ಮಾತಿನೊಂದಿಗೆ ಸ್ವಾಗತಿಸಿ, ಸದಾಶಿವ ರಾವ್ ರವರು ವಂದಿಸಿದರು. ದಯಾನಂದ ಕೇರ್ಪಳ ಕಾರ್ಯಕ್ರಮ ನಿರೂಪಿಸಿದರು.

whatsapp image 2026 02 19 at 9.34.07 pm

whatsapp image 2026 02 19 at 8.46.39 pm

Related Articles

Back to top button