ಸುಳ್ಯದಲ್ಲಿ ವಕ್ಫ್ ಜಿಲ್ಲಾಧ್ಯಕ್ಷ, ಉಪಾಧ್ಯಕ್ಷರಿಗೆ ಸನ್ಮಾನ…

ಸುಳ್ಯ: ದ ಕ ಜಿಲ್ಲಾ ವಕ್ಫ್ ಸಲಹಾ ಸಮಿತಿ ಅಧ್ಯಕ್ಷ ನಾಸಿರ್ ಲಕ್ಕಿಸ್ಟಾರ್ ಮತ್ತು ಉಪಾಧ್ಯಕ್ಷ ಅಬ್ದುಲ್ ರೆಹಮಾನ್ ಮೊಗರ್ಪಣೆ ಯವರನ್ನು ಸುಳ್ಯ ತಾಲೂಕು ಜಮಾಅತ್ ಸಮನ್ವಯ ಸಮಿತಿ ವತಿಯಿಂದ ಸನ್ಮಾನಿಸಲಾಯಿತು
ಜಾವಗಲ್ ದರ್ಗಾ ಶರೀಫ್ ಟ್ರಸ್ಟ್ ಅಧ್ಯಕ್ಷರಾದ ಹಾಜಿ ಪಿ ಇಸಾಕ್ ಸಾಹೇಬ್ ಸನ್ಮಾನಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ವಕ್ಫ್ ಅಧಿಕಾರಿ ಸಯ್ಯದ್ ಮುಅ ಝಮ್ ಪಾಶ, ವಕ್ಫ್ ಕೌನ್ಸಿಲ್ ಮಾಜಿ ಸದಸ್ಯರುಗಳಾದ ಟಿ ಎಂ ಶಹೀದ್, ಎಸ್ ಸಂಶುದ್ದೀನ್, ತಾಲೂಕು ಮುಸ್ಲಿಂ ಒಕ್ಕೂಟದ ಸಂಚಾಲಕ ಇಕ್ಬಾಲ್ ಎಲಿಮಲೆ, ಸಮನ್ವಯ ಸಮಿತಿ ಸಂಚಾಲಕ ಕೆ ಎಂ ಮುಸ್ತಫ, ನಗರ ಪಂಚಾಯತ್ ಸದಸ್ಯರುಗಳಾದ ಶರೀಫ್ ಕಂಠಿ, ಕೆ ಎಸ್ ಉಮ್ಮರ್, ರಿಯಾಜ್ ಕಟ್ಟೆಕ್ಕಾರ್ಸ್, ಸಂಪಾಜೆ ಗ್ರಾಮ ಪಂಚಾಯತ್ ಅಧ್ಯಕ್ಷ ಜಿ ಕೆ ಹಮೀದ್, ಜಂಮೀಯತುಲ್ ಫಲಾಹ್ ಅಧ್ಯಕ್ಷ ಹಸೈನಾರ್ ಗೋರಡ್ಕ, ಗ್ರೀನ್ ವ್ಯೂ ಶಿಕ್ಷಣ ಸಂಸ್ಥೆ ಸಂಚಾಲಕ ಮುಹಿಯದ್ದೀನ್ ಫ್ಯಾನ್ಸಿ, ಎಸ್ ಎಂ ಎ ಅಧ್ಯಕ್ಷ ಇಬ್ರಾಹಿಂ ಪಳ್ಳಿಮಜಲು, ಸುನ್ನಿ ಮಹಲ್ ಫೆಡರೇಶನ್ ಅಧ್ಯಕ್ಷ ಹಮೀದ್ ಹಾಜಿ, ಕೆಎಂಸಿಸಿ ಜಿಲ್ಲಾ ಖಜಾಂಚಿ ಇಬ್ರಾಹಿಂ ಹಾಜಿ ಖತರ್, ನೂರುಲ್ ಹುದಾ ಎಜುಕೇಶನ್ ಟ್ರಸ್ಟ್ ಪ್ರಾಂಶುಪಾಲ ಅಡ್ವಕೇಟ್ ಹನೀಫ್ ಹುದವಿ, ಹಾಜಿ ಎಚ್ ಎ ಅಬ್ಬಾಸ್ ಸೆಂಟ್ಯಾರ್, ಉದ್ಯಮಿ ಹಮೀದ್ ಕುತ್ತಮೊಟ್ಟೆ,ಇಕ್ರಾ ಜಾಮೀಯ ಮಸ್ಜಿದ್ ಇಮಾಮರಾದ ಮೌಲಾನ ಸಮೀರ್, ತಾಲೂಕು ವೈಧ್ಯಾಧಿಕಾರಿ ಡಾ. ನಂದಕುಮಾರ್, ಜಿಲ್ಲಾ ಅಲ್ಪಸಂಖ್ಯಾತರದ ನಿಗಮ ಅಧಿಕಾರಿ ಜೇಮ್ಸ್ ಕುಟಿನೋ, ಕಲ್ಯಾಣಧಿಕಾರಿ ಯಶೋದರ, ಕಾರ್ಮಿಕ ಇಲಾಖೆ ಹಿರಿಯ ನಿರೀಕ್ಷಕ ರಾದ ಗಣಪತಿ ಹೆಗಡೆ ಮೊದಲಾದವರು ಉಪಸ್ಥಿತರಿದ್ದರು.

IMG 20221001 WA0026 300x200 IMG 20221001 WA0025 300x263

Related Articles