ಸುಳ್ಯ ತಾಲೂಕು ಮೀಲಾದ್ ಸಮಿತಿ ವತಿಯಿಂದ ಹುಬ್ಬುರಸೂಲ್ ಪ್ರವಾದಿ ಸಂದೇಶ….
ಬೃಹತ್ ಕಾಲ್ನಡಿಗೆ ಜಾಥಾದಲ್ಲಿ ಸಾವಿರಾರು ಮಂದಿ ಭಾಗಿ...
ಸುಳ್ಯ: ಪೈಗಂಬರ್ ಮುಹಮ್ಮದ್ ರವರ ಜನ್ಮ ದಿನಾಚರಣೆಯ ಅಂಗವಾಗಿ ಆಚರಿಸಲ್ಪಡುವ ಈಧ್ ಮಿಲಾದ್ ಹಬ್ಬದ ಅಂಗವಾಗಿ ಸುಳ್ಯ ತಾಲೂಕು ಮೀಲಾದ್ ಸಮಿತಿ ವತಿಯಿಂದ ಹುಬ್ಬುರಸೂಲ್- ಪ್ರವಾದಿ ಸಂದೇಶ ಕಾರ್ಯಕ್ರಮ ಗಾಂಧಿನಗರ ಪೆಟ್ರೋಲ್ ಬಂಕ್ ಮುಂಭಾಗದ ಸಭಾ ವೇಧಿಕೆಯಲ್ಲಿ ಅಕ್ಟೋಬರ್ 9 ರಂದು ನಡೆಯಿತು.
ಸಂಜೆ 5 ಗಂಟೆಗೆ ಮೊಗರ್ಪಣೆ ಮಾಂಬ್ಳಿ ದರ್ಗಾ ವಠಾರದಲ್ಲಿ ಪ್ರಾರ್ಥನೆಯ ಮೂಲಕ ಬ್ರಹತ್ ಕಾಲ್ನಡಿಗೆ ಜಾಥಾ ಕಾರ್ಯಕ್ರಮ ಕ್ಕೆ ಚಾಲನೆ ನೀಡಲಾಯಿತು.
ಸ್ಥಳೀಯ ಮಸ್ಜಿದ್ ಮುದರಿಸ್ ಹಾಫಿಲ್ ಸೌಕತ್ ಅಲಿ ಸಖಾಪಿ ಪ್ರಾರ್ಥನೆ ನೆರವೇರಿಸಿ ಪ್ರವಾದಿಯವರ ತತ್ವ ಆದರ್ಶ ಮತ್ತು ಸಿದ್ಧಾಂತಗಳನ್ನು ಅನುಸರಿಸಿಕೊಂಡು ಜೀವನ ನಡೆಸಲು ಕರೆ ನೀಡಿದರು.
ಸ್ಥಳೀಯ ಮಸೀದಿ ಕಮಿಟಿ ಅಧ್ಯಕ್ಷರಾದ ಹಾಜಿ ಜಿ ಇಬ್ರಾಹಿಂ ಸೀಫುಡ್ ಸಂಘಟಕರಿಗೆ ಧ್ವಜವನ್ನು ಹಸ್ತಾಂತರಿಸಿದ ಬಳಿಕ ರ್ರ್ಯಾಲಿ ಪ್ರಾಂಭಗೊಂಡಿತು .
ಜಾಥದಲ್ಲಿ ತಾಲೂಕಿನ ವಿವಿದ ಭಾಗಗಳಿಂದ ಬಂದಿದ್ದ ನೂರಾರು ವಿಧ್ಯಾರ್ಥಿಗಳ ಆಕರ್ಷಕ ದಫ್ ಪ್ರದರ್ಶನ, ಮತ್ತು ಸ್ಕೌಟ್ ವಿಧ್ಯಾರ್ಥಿಗಳ ಪಥಸಂಚಲನ ಆಕರ್ಷಣೆಯಾಗಿತ್ತು. ಯುವಕರ ತಂಡವು ಪೈಗಂಬರ್ ಕೀರ್ತನೆಗಳನ್ನು ಹಾಡಿ ಮೆರಗು ನೀಡಿದರು. ಗಾಂಧಿನಗರ ಸತ್ತಾರ್ ಸಂಗಂ ವೇಧಿಕೆಯಲ್ಲಿ ಕಾರ್ಯಕ್ರಮದಲ್ಲಿ ಖ್ಯಾತ ಕವ್ವಾಲಿ , ಬುರ್ದಾ, ನಾಥ್ ಗಾಯನ ತಂಡದವರಿಂದ ಸಾಂಸ್ಕತಿಕ ಕಾರ್ಯಕ್ರಮ ನಡೆಯಿತು.
ನಂತರ ನಡೆದ ಪ್ರವಾದಿ ಸಂದೇಶ ಪ್ರಭಾಷಣ ಕಾರ್ಯಕ್ರಮದಲ್ಲಿ ಖ್ಯಾತವಾಗ್ಮಿ ಸಿರಾಜುದ್ದೀನ್ ಸಖಾಫಿ ಕನ್ಯಾನ ಪೈಗಂಬರ್‌ರವರ ಜೀವನ ಚರಿತ್ರೆಯ ಬಗ್ಗೆ ಮಾತಾಡಿದರು. ಹಿರಿಯ ಪಂಡಿತರು ಧಾರ್ಮಿಕ ನೇತಾರ ಅಸ್ಸಯ್ಯದ್ ಝಯಿನುಲ್ ಆಬಿದೀನ್ ತಂಗಳ್ ದುಗ್ಗಲಡ್ಕರವರು ದುವಾ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಇಸ್ಲಾಂಮಿನ ಮಹತ್ವ ಮತ್ತು ತತ್ವಗಳನ್ನು ಅನುಸರಿಸಿ ನಮ್ಮ ಯುವ ಜನಾಂಗ ಮುಂದುವರೆಯಬೇಕು , ಹಿಂಸೆ ಮತ್ತು ಕೊಲೆ ಮಾಡಲು ಇಸ್ಲಾಂ ಎಂದೂ ಹೇಳಲಿಲ್ಲ ಶಾಂತಿ ಸೌಹಾರ್ದತೆಯಿಂದ ಪರ ಮತ ಸಹಿಷ್ಣುತೆಯೊಂದಿಗೆ ಜೀವನ ನಡೆಸಬೇಕೆಂದರು.
ಮುಖ್ಯ ಅಥಿತಿಗಳಾಗಿ ಭಾಗವಹಿಸಿದ ತೆಕ್ಕಿಲ್ ಪ್ರತಿಷ್ಠಾನದ ಸ್ಥಾಪಕಾಧ್ಯಕ್ಷರಾದ ಟಿ.ಎಂ ಶಹೀದ್ ತೆಕ್ಕಿಲ್ ಮಾತನಾಡಿ ಯುವ ಶಕ್ತಿ ಈ ದೇಶದ ಶಕ್ತಿ, ಯುವಕರು ಯಾವುದೇ ಪ್ರಚೊದನೆಗೆ ಒಳಗಾಗದೆ ಶಾಂತಿಯಿಂದ ಇರಬೇಕು ,ಮಾಧಕ ದ್ರವ್ಯ ವ್ಯಸನಿಗಳಾಗಬಾರದು ಹಾಗು ಕೋಮು ಸಂಘರ್ಷಗಳಲ್ಲಿ ಭಾಗವಹಿಸಬಾರದು. ಈಗಿನ ಕೆಲವು ಬೆರಳೆಣಿಕೆಯ ಯುವಕರು ಇದನ್ನು ಅನುಸರಿಸುತ್ತಿಲ್ಲ ಇದರಿಂದ ಸಮಾಜದಲ್ಲಿ ಯುವಕರ ಬಗ್ಗೆ ಕೆಟ್ಟ ಸಂದೇಶ ಪಸರಿಸುತ್ತದೆ. ಎಲ್ಲಾ ಯುವಕರು ಒಳ್ಳೆಯ ಶಿಕ್ಷಣವನ್ನು ಪಡೆಯಬೇಕು ಮತ್ತು ಸ್ವಾವಲಂಭಿಗಳಾಗಿ ಬದುಕಲು ಕಲಿಯಬೇಕು. ಆಗ ಮಾತ್ರ ನಾವು ಮುಹಮ್ಮದ್ ಪೈಗಂಬರರ ನೈಜ ಅನುಯಾಯಿಯಾಗಿರಲು ಸಾಧ್ಯ ಎಂದರು.
ಹಾಜಿ ಮುಸ್ತಪ, ಜನತಾ ಕೆ.ಎಂ ಕಾರ್ಯಕ್ರಮಕ್ಕೆ ಶುಭ ಹಾರೈಸಿ ಮಾತನಾಡಿ ಸಮಾಜದ ಯುವಕರು ಆದರ್ಶ ಪ್ರಾಯರಾಗಬೇಕೆಂದು ಕರೆ ನೀಡಿದರು.
ವೇದಿಕೆಯಲ್ಲಿ ಮುಖಂಡರುಗಳಾದ ಪಿ.ಎ ಮಹಮ್ಮದ್, ಸಂಪಾಜೆ ಗ್ರಾಮ ಪಂಚಾಂಯತ್ ಅಧ್ಯಕ್ಷರಾದ ಜಿ.ಕೆ ಹಮೀದ್ ಗೂನಡ್ಕ , ಎಸ್ ಸಂಶುದ್ಧೀನ್ ಅರಂಬೂರು,ಅಡ್ವಕೇಟ್ ಪವಾಜ್ ಕನಕಮಜಲು, ಅಡ್ವೋಕೇಟ್ ಅಬೂಬಕ್ಕರ್ ಅಡ್ಕಾರ್ , ಸಿದ್ದೀಕ್ ಕಟ್ಟೆಕಾರ್ಸ್, ಶರೀಫ್ ಕಂಠಿ, ಸಿದ್ಧಿ ಕೊಕ್ಕೋ, ನವಾಜ್ ಪಂಡಿತ್, ಜುನೈದ್ ಎನ್ ಎ, ಮಶೂದ್ ಅಚ್ಚು ,ಹನೀಫ್ ಸಂಟ್ಯಾರ್ ಬೀಜದಕೊಚ್ಚಿ , ಮೂಸ ಕುನ್ನಿ ದುಗ್ಗಲಡ್ಕ, ಬಿಳಿಯರ್ ಹಮೀದ್ ಹಾಜಿ, ತಾಜ್ ಮಹಮ್ಮದ್ ಸಂಪಾಜೆ ,ಜಾಫರ್ ಬೋರುಗುಡ್ಡೆ, ನೌಷದ್ ಎಸ್ ಎಚ್, ರಶೀದ್ ಆರ್ ಆರ್, ಶಾಫಿ ಕಲ್ಲುಮುಟ್ಲು,ರಹೀಮ್ ಬೋರುಗುಡ್ಡೆ,ಮೊದಲಾದವರು ಉಪಸ್ಥಿತರಿದ್ದರು
ಕಾರ್ಯಕ್ರಮದಲ್ಲಿ ಸಾವಿರಾರು ಮಂದಿ ಮುಸಲ್ಮಾನ ಬಾಂಧವರು ಭಾಗವಹಿಸಿದ್ದರು.
ಸಂಚಾಲಕ ಆರ್. ಕೆ ಮಹಮ್ಮದ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಕೊನೆಯಲ್ಲಿ ಸಾರ್ವಜನಿಕ ಅನ್ನದಾನ ಕಾರ್ಯಕ್ರಮ ನಡೆಯಿತು.