ಬೆಳ್ತಂಗಡಿ ಗೇರುಕಟ್ಟೆ ಮನ್ ಶರ್ ವಿದ್ಯಾ ಸಂಸ್ಥೆ ವತಿಯಿಂದ ಕೆ. ಎಂ. ಮುಸ್ತಫ ಅವರಿಗೆ ಸನ್ಮಾನ…
ಶಿಕ್ಷಣದಿಂದ ಪ್ರಗತಿ, ದೇಶದ ಅಭಿವೃದ್ಧಿ -ಕೆ. ಎಂ. ಮುಸ್ತಫ…

ಸುಳ್ಯ: ದ. ಕ. ಮತ್ತು ಉಡುಪಿ ಜಿಲ್ಲೆಗಳ ಮುಸ್ಲಿಂ ಶಿಕ್ಷಣ ಸಂಸ್ಥೆಗಳ ಒಕ್ಕೂಟ ಉಪಾಧ್ಯಕ್ಷ, ಕೆಪಿಸಿಸಿ ಅಲ್ಪಸಂಖ್ಯಾತ ವಿಭಾಗದ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ. ಎಂ. ಮುಸ್ತಫ ಸುಳ್ಯ ಇವರನ್ನು ಆ.15 ರಂದು ಬೆಳ್ತಂಗಡಿ ಗೇರುಕಟ್ಟೆ ಮನ್ ಶರ್ ಶಿಕ್ಷಣ ಸಂಸ್ಥೆಗಳ ವಠಾರದಲ್ಲಿ ಸನ್ಮಾನಿಸಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಕೆ. ಎಂ. ಮುಸ್ತಫ ಮನ್ ಶರ್ ಅಸ್ಸಯ್ಯದ್ ಅಸ್ಸಖಾಫ್ ತಂಞಳ್ ರವರ ದೂರದರ್ಶಿತ್ವದ ಇಂತಹ ವಿದ್ಯಾಸಂಸ್ಥೆಗಳು ದೇಶಕ್ಕೆ ನೀಡುವ ದೊಡ್ಡ ಕೊಡುಗೆ ಎಂದರು.
ಈ ಸಂದರ್ಭದಲ್ಲಿ ಪ್ಯಾರ ಮೆಡಿಕಲ್ ಪ್ರಾಂಶುಪಾಲ ಹೈದರ್ ಮರ್ದಾಳ, ಸಂಸ್ಥೆಯ ಉಪಾಧ್ಯಕ್ಷ,
ಪಿಯು ಕಾಲೇಜು ಪ್ರಾoಶುಪಾಲ ಕೌಸರ್,ಉದ್ಯಮಿ ಅಶ್ರಫ್ ಜಿ. ಡಿ. ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸಂಶೀರ್ ಸಖಾಫಿ, ಆಡಳಿತಾಧಿಕಾರಿ ರಶೀದ್ ಕುಪ್ಪೆಟ್ಟಿ ಪ್ಯಾರಮೆಡಿಕಲ್ ಗೌತಮಿ ಶರಣ್ ಮೊದಲಾದವರು ಉಪಸ್ಥಿತರಿದ್ದರು.