ತುಮಕೂರಲ್ಲಿ ಪ್ರಥಮ ಸಾಹಿತ್ಯ ಸಮ್ಮೇಳನ – ಬಸವರಾಜ ಬಾಗೇವಾಡಿಮಠ ಅವರಿಗೆ ಪ್ರಶಸ್ತಿ ಪ್ರದಾನ …

ರಾಣೆಬೆನ್ನೂರು : ನಾಡಿನ ತೆಂಗು ನಗರದ ತುಮಕೂರು ಮಹಾನಗರದ ಅ: 17 ರಂದು ಉಧ್ದಾನೇಶ್ವರ ಸಮುದಾಯ ಭವನದಲ್ಲಿ
ಗುರುಕುಲ ಕಲಾ ಪ್ರತಿಷ್ಠಾನ ಸಂಸ್ಥೆ ವತಿಯಿಂದ ಸಾಹಿತ್ಯ ಸಮ್ಮೇಳನ, ಸಾಂಸ್ಕೃತಿಕ ಕಾರ್ಯಕ್ರಮವನ್ನು ಆಯೋಜಿಸಿತ್ತು.
ಹಾಗೂ ಹಲವು ಕೃತಿಗಳ ಲೋಕಾರ್ಪಣೆ,ಹಲವು ಗಣ್ಯರಿಗೆ ಪ್ರಶಸ್ತಿ ಸಮಾರಂಭವು ವೈಭವದಿಂದ ನಡೆಯಿತು.
ಈ ಕಾರ್ಯಕ್ರಮದಲ್ಲಿ ರಾಣೇಬೆನ್ನೂರು ನಗರದ ಯುವ ಸಾಹಿತಿ ಬಸವರಾಜ ಎಸ್. ಬಾಗೇವಾಡಿಮಠ ಅವರ ಸಾಹಿತ್ಯ ಮತ್ತು ಸಮಾಜಿಕ ಸೇವೆಯನ್ನು ಗುರ್ತಿಸಿ ಕೂಡ ಮಾಡುವ ಪ್ರತಿಷ್ಠಿತ “ಗುರುಕುಲ ಚಾಣಕ್ಯ” ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು.
ಈ ಕಾರ್ಯಕ್ರಮ ವೇದಿಕೆಯಲ್ಲಿ ಸಿದ್ದಲಿಂಗ ಮಹಾಸ್ವಾಮಿಗಳು, ಡಾ. ಸಿದ್ದಲಿಂಗ ಶಿವಾನಂದ ಸ್ವಾಮಿಜಿ, ಅಧ್ಯಕ್ಷ ಲಕ್ಷ್ಮೀ ನಾರಾಯಣ, ಶಿವಪಂಚಾಕ್ಷರಿ ಸ್ವಾಮಿಜಿ, ಡಾ. ಕವಿತಾ ಕೃಷ್ಣ, ಚಿತ್ರ ನಿರ್ದೇಶಕ ಟಿ. ಎಸ್. ನಾಗಾಭರಣ, ಗುರುರಾಜ ಹೊಸಕೋಟಿ, ಡಾ. ಎನ್. ಜಿ. ಜಯಪ್ರಕಾಶ್, ಡಾ. ದೊಡ್ಡರಂಗೇಗೌಡರವರು, ಡಾ. ಪುಣ್ಯವತಿ ಸಿ. ನಾಗರಾಜ್,
ಡಾ. ಎಂ. ಪಿ. ಮಂಜುನಾಥ, ಶ್ರೀ ಮತಿ ಟಿ. ಬಿ. ಲಲಿತನಾಯಕ, ಸಿಕೆ ರಾಮೆಗೌಡ, ಬಾಹ ರಮಾಕುಮಾರಿ, ಸೇರಿದಂತೆ ಸಂಘಟನೆಯ ಗಣ್ಯರು, ಪದಾಧಿಕಾರಿಗಳು ಮುಂತಾದವರು ಪಾಲ್ಗೊಂಡಿದ್ದರು.