ಮರೆಯ ಬೇಡವೇ…
ಮರೆಯ ಬೇಡವೇ…
ಕಾಯುತಿರುವ ನನ್ನ ಮನವ
ಅರಿಯದಾದೆಯೇಕೆ?
ನೋಯುತಿರುವ ನನ್ನ ಮನವ
ತಿಳಿಯದಾದೆಯೇಕೆ?
ನಿನ್ನ ಕರೆಗೆ ನನ್ನ ಮನವು
ಜಗವ ಮರೆತು ಕಾದಿದೆ
ತಾಯನಗಲಿ ಚಿಂತೆಗೊಂಡ
ಮಗುವಿನಂತೆ ಅಳುತಿದೆ
ಖಾತಿಗೊಂಡ ಮನದ ನೋವು
ನಿನ್ನೆದೆಯನು ತಟ್ಟದೆ?
ದುಗುಡದಿಂದ ಬಿಟ್ಟ ಉಸಿರು
ನಿನ್ನ ಕಿವಿಯ ಮುಟ್ಟದೆ?
ಕೇಳಿಕೊಳುವೆ ನಿನ್ನ ನಾನು
ನನ್ನ ಕಾಡಬೇಡವೆ
ನಿನ್ನ ಮರೆಯದೆ ನೆನೆವ ನನ್ನ
ಇನ್ನು ತೊರೆಯ ಬೇಡವೆ….
ರ: ಡಾ. ವೀಣಾ ಎನ್ ಸುಳ್ಯ
Sponsors