ಕಾಯಕಲ್ಪ…
ಕಾಯಕಲ್ಪ…
ಬತ್ತಿ ರೂಪವ ತಾಳಿ ಉರಿಯುತ
ಹಣತೆ ಬೆಳಕನು ಚೆಲ್ಲಿದೆ
ಜೊತೆಗೆ ತೈಲವ ಕೂಡಿಕೊಳ್ಳುತ
ಸೊಗದ ಸ್ನೇಹವ ತೋರಿದೆ
ಮೇಣದೊಂದಿಗೆ ಕಲೆತು ನೀನು
ಕರಗೊ ಕಲೆಯನು ಕಲಿಸಿದೆ
ಗಾಜು ಜತೆಯಲಿ ನಿಂತು ನೀನು
ಲಾಟೀನು ರೂಪವ ತಾಳಿದೆ
ಸೀಮೆಎಣ್ಣೆಯ ಕೂಡಿ ಕೊಂಡು
ಅನಿಲ ದೀಪದಿ ಜನಿಸಿದೆ
ಹೆಚ್ಚು ಮಾಡಲು ವಾಯುಭಾರವ
ಹೆಚ್ಚು ಬೆಳಕನು ಹೊಮ್ಮಿದೆ
ತಂತಿರೂಪದಿ ಬೆಳಕು ಚೆಲ್ಲುತ
ಮನೆಯ ಕತ್ತಲು ನೀಗಿದೆ
ದಿನದಿನವು ಹೊಸ ದೇಹ ಧರಿಸುತ
ಕಾಯಕಲ್ಪವ ತಾಳಿದೆ.
ಡಾ. ವೀಣಾ ಎನ್ ಸುಳ್ಯ