ಲಾಕ್‌ಡೌನ್ ಮುಗಿದ ನಂತರ ಟೋಲ್ ದರ ಹೆಚ್ಚಳ ….
ಮಂಗಳೂರು : ಪ್ರತಿವರ್ಷದಂತೆ ಈ ಬಾರಿಯೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಟೋಲ್ ಹೆಚ್ಚಳ ಮಾಡಿದ್ದು ಇದು ಎ. 1ರಿಂದಲೇ ಜಾರಿಗೆ ಬಂದಿದೆ.
ಸದ್ಯ ಲಾಕ್‌ಡೌನ್ ಇರುವ ಕಾರಣದಿಂದಾಗಿ ಟೋಲ್‌ಗೇಟ್‌ಗಳಲ್ಲಿ ಶುಲ್ಕ ಸಂಗ್ರಹ ಮಾಡಲಾಗುತ್ತಿಲ್ಲ. ಆದರೆ ಲಾಕ್‌ಡೌನ್ ಮುಗಿದ ನಂತರ ಹೆಚ್ಚಳವಾದ ಟೋಲ್ ಪಾವತಿ ಮಾಡಬೇಕಾಗುತ್ತದೆ.ಕಾರು, ಜೀಪ್, ವ್ಯಾನ್ ಅಥವಾ ಇತರ ಲಘು ಲಘು ವಾಹನಗಳ ತಿಂಗಳ ಪಾಸ್‌ನಲ್ಲಿ (20 ಕಿ.ಮೀ. ವ್ಯಾಪ್ತಿ) 10 ರೂ. ಹೆಚ್ಚಳವಾಗಿದೆ. ಹಾಗೆಯೇ ಟ್ರಕ್‌ಗಳ ಟೋಲ್ ಕೂಡಾ ಹೆಚ್ಚಳವಾಗಲಿದೆ. ಇನ್ನು ಕೆಲವು ವಾಹನಗಳಿಗೆ 5 ರೂ.ಗಳಷ್ಟು ಟೋಲ್ ಹೆಚ್ಚಿಸಲಾಗಿದೆ.